»   » 2ನೇ ಬಾರಿ ಬ್ಯಾಂಕಾಕ್ ಗೆ ಹೊರಡಲಿರುವ 'ದಿ ವಿಲನ್'

2ನೇ ಬಾರಿ ಬ್ಯಾಂಕಾಕ್ ಗೆ ಹೊರಡಲಿರುವ 'ದಿ ವಿಲನ್'

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನಬದಲ್ಲಿ 'ದಿ ವಿಲನ್' ಸಿನಿಮಾ ಈಗಾಗಲೇ ಎರಡು ಸುತ್ತಿನ ಚಿತ್ರೀಕರಣ ಮುಗಿಸಿದೆ. ಮೊದಲನೇ ಹಂತದಲ್ಲಿ ಉತ್ತರ ಕರ್ನಾಟಕ ಸುತ್ತಾಮುತ್ತಾ ಚಿತ್ರೀಕರಣ ನಡೆಸಿದ್ದ 'ದಿ ವಿಲನ್' ನಂತರ ಬ್ಯಾಂಕಾಕ್ ಮತ್ತು ಲಂಡನ್ ನಲ್ಲಿ ಎರಡನೇ ಹಂತದ ಚಿತ್ರೀಕರಣ ಮಾಡಿದ್ದರು.

ಈಗ 'ವಿಲನ್' ಚಿತ್ರತಂಡ ಮತ್ತೆ ವಿದೇಶಕ್ಕೆ ಹೊರಟು ನಿಂತಿದೆ. ಈ ಬಾರಿ ಮತ್ತೆ ಬ್ಯಾಂಕಾಕ್‍ ನಲ್ಲಿ ಶೂಟಿಂಗ್ ನಡೆಸಲಿದೆ. ಈಗಾಗಲೇ ಒಂದು ಸಲ ಬ್ಯಾಂಕಾಕ್ ಸುತ್ತಾಮುತ್ತಾ ಚಿತ್ರೀಕರಣ ಮಾಡಿರುವ ಚಿತ್ರತಂಡ ಮತ್ತೆ ಬ್ಯಾಂಕಾಕ್ ಗೆ ಜಿಗಿಯುತ್ತಿದೆ. ಮೊದಲನೇ ಸಲ ಬ್ಯಾಂಕಾಕ್ ಗೆ ಹೋದಾಗ ಶಿವರಾಜ್ ಕುಮಾರ್ ಭಾಗಿಯಾಗಿರಲಿಲ್ಲ. ಈಗ ಶಿವಣ್ಣ ಕೂಡ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

2nd Time the villain going to bangkok

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಫೇವರೆಟ್ ದೃಶ್ಯ ಇದೇ ನೋಡಿ.!

ಎರಡನೇ ಸಲ ಬ್ಯಾಂಕಾಕ್ ನಲ್ಲಿ ಸುಮಾರು 10 ದಿನಗಳ ಶೂಟಿಂಗ್ ನೆರವೇರಲಿದೆಯಂತೆ. ಶಿವರಾಜ್ ಕುಮಾರ್, ಸುದೀಪ್, ಆಮಿ ಜಾಕ್ಸನ್ ಸೇರಿದಂತೆ ಇನ್ನು ಹಲವರು ಈ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವಾಗ ಬ್ಯಾಂಕಾಕ್ ಗೆ ಹೋಗಲಿದ್ದಾರೆ ಎಂಬ ನಿಖರವಾದ ಮಾಹಿತಿ ಸಿಕ್ಕಿಲ್ಲ.

ಬಿಡುಗಡೆಗೂ ಮೊದಲೇ ಕೋಟಿ ಕೋಟಿ ಬಾಚಿ ದಾಖಲೆ ಬರೆದ 'ದಿ ವಿಲನ್'

ಶೂಟಿಂಗ್ ಹಂತದಲ್ಲೇ ದಾಖಲೆ ಮೊತ್ತಕ್ಕೆ ಸ್ಯಾಟ್ ಲೈಟ್ ಹಕ್ಕು ಮಾರಾಟವಾಗಿರುವುದು ಚಿತ್ರಕ್ಕೆ ಸಿಕ್ಕಿರುವ ಮೊದಲ ಗೆಲವು. ಜೋಗಿ ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

English summary
Sudeep and Shiva rajkumar starrer The Villain Movie team heads to Bangkok for 2nd time shooting. The Movie Directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada