TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮೂವರು ಅಪ್ರಾಪ್ತರಿಗೆ ಕಿರುಕುಳ: ನಟಿ ಭಾನುಪ್ರಿಯಾ ವಿರುದ್ಧ ದೂರು ದಾಖಲು
ಮೂವರು ಅಪ್ರಾಪ್ತ ಬಾಲಕಿಯರಿಗೆ ನಟಿ ಭಾನುಪ್ರಿಯ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂರು ಮಕ್ಕಳ ತಾಯಿ ನೀಡಿದ ದೂರಿನ ಮೇರೆಗೆ ಮಕ್ಕಳ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಟಿ.ನಗರದಲ್ಲಿರುವ ಭಾನುಪ್ರಿಯ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.
ತಮ್ಮ ಮಗಳನ್ನು ಮನೆಗೆಲಸದಾಕೆಯಾಗಿ ಇಟ್ಟುಕೊಂಡು ಸಂಬಳ ನೀಡದೆ ಭಾನುಪ್ರಿಯ ಕಿರುಕುಳ ನೀಡುತ್ತಿದ್ದಾರೆ ಎಂದು ತಾಯಿ ಆಂಧ್ರ ಪ್ರದೇಶದ ಸಮಲ್ ಕೋಟ್ ನಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳ ಹಕ್ಕು ಸಂರಕ್ಷಣಾ ಕಾರ್ಯಕರ್ತರಾದ ಅಚ್ಯುತ್ ರಾವ್ ಅವರು ರಾಷ್ಟ್ರೀಯ ಮಕ್ಕಳ ಆಯೋಗಕ್ಕೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಬಾಲಕಾರ್ಮಿಕ ಕಾಯ್ದೆ ಅಡಿ ನಟಿ ಭಾನುಪ್ರಿಯ ಅವರನ್ನು ಬಂಧಿಸುವಂತೆಯೂ ಆಗ್ರಹಿಸಿದ್ದಾರೆ. ಜೊತೆಗೆ ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿರಿ....
ನಟಿ ಭಾನುಪ್ರಿಯ ಹೇಳುವುದೇನು.?
''ಮನೆಗೆಲಸದಾಕೆಗೆ ಯಾವುದೇ ತೊಂದರೆ ಕೊಟ್ಟಿಲ್ಲ'' ಎಂದಿರುವ ಭಾನುಪ್ರಿಯ ಹುಡುಗಿಗೆ 18 ವರ್ಷ ತುಂಬಿದೆ ಎಂದು ಆಕೆಯ ತಾಯಿ ಹೇಳಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ನಟ ಭಾನುಪ್ರಿಯ ಮನೆಯಲ್ಲಿ ಮೂವರು ಅಪ್ರಾಪ್ತರಿಗೆ ಕಿರುಕುಳ?
ಕಳ್ಳತನ ಮಾಡಿದ್ದ ಹುಡುಗಿ
''ಮನೆಯಲ್ಲಿರುವ ಕೆಲ ಅತ್ಯಮೂಲ್ಯ ವಸ್ತುಗಳನ್ನು ಆ ಹುಡುಗಿ ಕಳ್ಳತನ ಮಾಡಿದ್ದಾಳೆ. ವಾಪಸ್ ತೆಗೆದುಕೊಂಡು ಬರುವಂತೆ ಸೂಚಿಸಿದಾಗ ಬರೀ ಐಪ್ಯಾಡ್, ಕ್ಯಾಮೆರಾ ಮತ್ತು ವಾಚ್ ತೆಗೆದುಕೊಂಡು ಬಂದಿದ್ದಳು'' ಎಂದು ಭಾನುಪ್ರಿಯ ಹೇಳಿದ್ದಾರೆ.
ಸುಳ್ಳು ದೂರು.?
''ನಮ್ಮ ಮನೆಯಲ್ಲಿ ಕಳ್ಳತನ ಮಾಡಿ ಇದೀಗ ನಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ'' ಎಂದು ನಟಿ ಭಾನುಪ್ರಿಯ ಹೇಳಿದ್ದಾರೆ. ಜೊತೆಗೆ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆಯೂ ದೂರು ದಾಖಲಿಸಿದ್ದಾರೆ.
ಸಂಬಳ ಕೊಟ್ಟಿಲ್ಲ
ತಿಂಗಳಿಗೆ ಹತ್ತು ಸಾವಿರ ರೂಪಾಯಿ ಸಂಬಳ ಕೊಡುವೆ ಎಂದು ನಟಿ ಭಾನುಪ್ರಿಯ ಆ ಹುಡುಗಿಯನ್ನ ಮನೆಗೆಲಸದಾಕೆ ಆಗಿ ಸೇರಿಸಿಕೊಂಡಿದ್ದರಂತೆ. ಆದರೆ ಕಳೆದ 18 ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಹುಡುಗಿಯ ತಾಯಿ ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.