»   » ಚಿತ್ರದ ಶೀರ್ಷಿಕೆ ಸ್ವಾಮೀಜಿ; ಟ್ಯಾಗ್ ಲೈನ್ ನಿತ್ಯಾನಂದ!

ಚಿತ್ರದ ಶೀರ್ಷಿಕೆ ಸ್ವಾಮೀಜಿ; ಟ್ಯಾಗ್ ಲೈನ್ ನಿತ್ಯಾನಂದ!

Posted By:
Subscribe to Filmibeat Kannada

ಹ್ಯಾಸ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಸ್ವಾಮೀಜಿಯಾಗಿದ್ದಾರೆ! ಆದರೆ ನಿಜ ಜೀವನದಲ್ಲಿ ಅಲ್ಲ ತೆರೆಯ ಮೇಲೆ. ಸ್ವಾಮಿ ನಿತ್ಯಾನಂದ ಪ್ರಕರಣ ಬಯಲಾಗುತ್ತಿದ್ದಂತೆ ಚಿತ್ರರಂಗದ ಕಣ್ಣು ಸ್ವಾಮೀಜಿಗಳ ಮೇಲೆ ಬಿದ್ದಿದೆ. ಹಾಗಾಗಿ ಸಾಧು ಕೋಕಿಲ ತಮ್ಮ ಹೊಸ ಚಿತ್ರಕ್ಕೆ 'ಸ್ವಾಮೀಜಿ' ಎಂದು ಹೆಸರಿಟ್ಟಿದ್ದಾರೆ.

ಏತನ್ಮಧ್ಯೆ ಸಾಧು ಕೋಕಿಲ ನಿರ್ದೇಶನದ ಎರಡು ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ. ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶೌರ್ಯ ಹಾಗೂ ಮತ್ತೊಂದು ಕಿಚ್ಚ ಸುದೀಪ್ ಅಭಿನಯದ ತೀರ್ಥ. ಸಾಧು ಹೊಸದಾಗಿ ಕೈಗೆತ್ತಿಕೊಂಡಿರುವ ಸ್ವಾಮೀಜಿ ಚಿತ್ರದ ಟ್ಯಾಗ್ ಲೈನ್ ಏನು ಗೊತ್ತೆ? ನಿತ್ಯಾನಂದ!

ಸ್ವಾಮೀಜಿ ಚಿತ್ರದ ಮೂಲಕ ಸಾಧು ಮತ್ತೊಂದು ಸಾಹಸ ಕೈಹಾಕಿದ್ದು ಚಿತ್ರವನ್ನು ಅವರೇ ನಿರ್ಮಿಸಲಿದ್ದಾರೆ. ಒಟ್ಟಿನಲ್ಲಿ ಇದೊಂದು ಹಾಸ್ಯ ಪ್ರಧಾನ ಚಿತ್ರ ಎಂಬುದು ಪಕ್ಕಾ ಆಗಿದೆ. ತಾರಾಗಣದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ಕೋಮಲ್ ಕುಮಾರ್ ಮುಂತಾದವರಿದ್ದಾರೆ. ದಿಗಂತ್ ಮತ್ತು ಪ್ರಜ್ಞಾ ಚಿತ್ರದ ಮುಖ್ಯ ಪಾತ್ರಧಾರಿಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada