»   » ಲಾಭದಲ್ಲಿ ಈ ಕೃಷ್ಣಪ್ಪನ ಮೊಗ್ಗಿನ ಮನಸು

ಲಾಭದಲ್ಲಿ ಈ ಕೃಷ್ಣಪ್ಪನ ಮೊಗ್ಗಿನ ಮನಸು

By: *ಜಯಂತಿ
Subscribe to Filmibeat Kannada
E Krishnappa
ಶಶಾಂಕ್ ಮೇಲೆ ಇ.ಕೃಷ್ಣಪ್ಪ ಮತ್ತೆ ನಂಬಿಕೆ ಇಟ್ಟಿದ್ದಾರೆ. ಪತ್ರಕರ್ತ ಸದಾಶಿವ ಶೆಣೈ ನಿರ್ದೇಶಿಸಬೇಕಿದ್ದ ಮಾತೃಭೂಮಿ' ಕಥೆ ಏನಾಗುವುದೋ ಅನ್ನೋದು ಮಾತ್ರ ಉಳಿದಿರುವ ಪ್ರಶ್ನೆ. ಎಸ್‌ಎಂಎಸ್ ಕಳಿಸಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವವರ ಸಾಲಿಗೆ ಸೇರುವ ಶಶಾಂಕ್ ಮೊನ್ನೆ ಹಾಗೇ ಫೋನ್ ಮಾಡಿದರು.

ಅವರು ಹೇಳಿದ್ದಿಷ್ಟು: ನಾನು ಹೊಸ ಸಿನಿಮಾ ಮಾಡ್ತಿದ್ದೇನೆ. ದೀಪಕ್ ಆರ್ಯನ್ ಅದರ ನಾಯಕ. ಈ ಸಲ ಆಕ್ಷನ್ ಸಿನಿಮಾ ಮಾಡ್ತಿದ್ದೇನೆ. ನಾಯಕಿಗಾಗಿ ಹುಡುಕಾಟ ನಡೆದಿದೆ. ಫೆಬ್ರುವರಿಯಲ್ಲಿ ಸೆಟ್ಟೇರೋದು ಖರೆ. ಮಾತೃಭೂಮಿ ಸಿನಿಮಾದ ಬಜೆಟ್ ಜಾಸ್ತಿ ಅನ್ನೊ ಕಾರಣಕ್ಕೆ ಪೆಂಡಿಂಗ್‌ನಲ್ಲಿದೆ. ಅವರು ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ'.

ಅದು ಸರಿ, ಮೊಗ್ಗಿನ ಮನಸ್ಸು' ಎಷ್ಟು ಲಾಭ ತಂದಿತು ಅಂತ ಕೇಳಿದಾಗ, ಶಶಾಂಕ್ ಮಾತಿಗೆ ಅಲ್ಪವಿರಾಮ. ಯಾವ ನಿರ್ಮಾಪಕರು ಹಣ ಎಷ್ಟು ಬಂತು ಅಂತ ಸರಿಯಾಗಿ ಹೇಳ್ತಾರೆ ಹೇಳಿ? ಕಸ್ತೂರಿ ಚಾನೆಲ್‌ನವರಿಗೆ ಸಿನಿಮಾ ಹಕ್ಕು 70 ಲಕ್ಷ ರೂಪಾಯಿಗೆ ಮಾರಾಟವಾಗಿದ್ದಂತೂ ನನಗೆ ಗೊತ್ತು. ಡಿವಿಡಿ ರೈಟ್‌ನಿಂದ ಏನಿಲ್ಲವೆಂದರೂ 15 ಲಕ್ಷ ಬರೋದು ಗ್ಯಾರಂಟಿ. ಅಲ್ಲಿಗೆ ಎಷ್ಟು ಲಾಭ ಅಂತ ನೀವೇ ಊಹಿಸಬಹುದು' ಅಂತ ಕ್ಲೂ ಕೊಟ್ಟರು ಶಶಾಂಕ್. ಎಂಬಲ್ಲಿಗೆ ಇ.ಕೃಷ್ಣಪ್ಪ ನಿರ್ಮಾಣದ ಎರಡನೇ ಚಿತ್ರವೂ ದುಡ್ಡು ಮಾಡಿದೆ ಎಂದಾಯಿತು!

ಎರಡೂವರೆ ತಾಸು ಅರಳುವ ಮೊಗ್ಗಿನಮನಸು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada