For Quick Alerts
  ALLOW NOTIFICATIONS  
  For Daily Alerts

  ಸೋತಮುಖ ಹಾಕಿಕೊಂಡ ಕ್ರೇಜಿಸ್ಟಾರ್ ದಶಮುಖ

  By Rajendra
  |

  ಪ್ರೇಕ್ಷಕರು ಸಾರಾಸಗಟಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಮತ್ತೊಮ್ಮೆ ತಿರಸ್ಕರಿಸಿದ್ದಾರೆ. 'ದಶಮುಖ' ಚಿತ್ರದಲ್ಲಿ ಸಾಕಷ್ಟು ಮಾಗಿದ ಕಲಾವಿದರಿದ್ದರೂ ವರ್ಕೌಟ್ ಆಗಿಲ್ಲ. ಚಿತ್ರದಲ್ಲಿ ಮನರಂಜನೆಯೂ ಇಲ್ಲ ಮಸಾಲೆಯೂ ಇಲ್ಲ. ಕತೆ ಚಿತ್ರಕತೆ ಕೇಳುವಂತಿಲ್ಲ. ಚಿತ್ರದ ಸೋಲಿಗೆ ಈ ಅಂಶಗಳೇ ಕಾರಣ ಎನ್ನಲಾಗಿದೆ.

  ಸೂರಪ್ಪ ಬಾಬು ಅವರು ಚಿತ್ರಕ್ಕೆ ಹಾಕಿದ ಬಂಡವಾಳ ರು.2 ಕೋಟಿ. ಆದರೆ ಲಾಭ ಬಿಡಿ, ಅಸಲೂ ಇಲ್ಲ ಫಸಲು ಇಲ್ಲ ಎನ್ನುತ್ತದೆ ಗಾಂಧಿನಗರದ ಗುಪ್ತಚರ ಇಲಾಖೆಗಳು. ಚಿತ್ರದ ಕತೆಯನ್ನು ಒಂದೇ ಕೊಠಡಿಯಲ್ಲಿ ಸುತ್ತಿರುವುದು ಪ್ರೇಕ್ಷಕರನ್ನು ಮತ್ತಷ್ಟು ಸುಸ್ತು ಹೊಡೆಸಿದೆ.

  ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಡದೇ ಇದ್ದದ್ದೂ ಮತ್ತೊಂದು ಲೋಪ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಚಿತ್ರದಲ್ಲಿ ರವಿಚಂದ್ರನ್, ದೇವರಾಜ್, ಸರಿತಾ, ಚೇತನ್ ಮುಂತಾದ ಕಲಾವಿದರಿದ್ದರೂ ಪ್ರಯೋಜನವಾಗಿಲ್ಲ. ರವಿಚಂದ್ರನ್ ಅವರ ಎಂದಿನ ಚಿತ್ರಗಳ ಶೈಲಿಯಲ್ಲಿಲ್ಲದೆ ಕ್ರೇಜಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ದಶಮುಖ. (ಒನ್‌ಇಂಡಿಯಾ ಕನ್ನಡ)

  English summary
  Crazy Star Ravichandran's Dashamukha is a box office disappoinment that will have a hard struggle just making back its reported Rs 2 cr production cost. It is not a regular Ravichandran’s movie where we get to see him in the role of a do-gooder sporting dhoti and living his life for the welfare of the people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X