»   » ಮೈಸೂರು : ವಿಷ್ಣು ಅಭಿಮಾನಿ ಆತ್ಮಹತ್ಯೆ

ಮೈಸೂರು : ವಿಷ್ಣು ಅಭಿಮಾನಿ ಆತ್ಮಹತ್ಯೆ

Subscribe to Filmibeat Kannada
Vishnu angry
ಬೆಂಗಳೂರು/ಮೈಸೂರು ಡಿ. 30 : ಜನನಾಯಕ ವಿಷ್ಣುವರ್ಧನ್ ಅವರ ಅಕಾಲಿಕ ನಿಧನದಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ಉದ್ರಕ್ತ ವಾತಾವರಣ ಉಂಟಾಗಿದೆ. ಬೆಂಗಳೂರಿನಲ್ಲಿ ಅಶ್ರವಾಯು, ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದರೆ, ಅತ್ತ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಕುಪ್ಯ ಗ್ರಾಮದಲ್ಲಿ ವಿಷ್ಣು ಅವರ ಅಭಿಮಾನಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ವ್ಯಕ್ತಿಯೂ ನೀರು ಪಾಲಾದ ದಾರುಣ ಘಟನೆ ನಡೆದಿದೆ.

ಸೋಮಣ್ಣ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುನ್ನಯ ಎಂಬಾತ ಆತನನ್ನು ರಕ್ಷಿಸಲು ಹೋಗಿ ನೀರು ಪಾಲಾದ ನತದೃಷ್ಟ. ವಿಷ್ಣು ವಿಧಿವಶದ ಸುದ್ದಿ ತಿಳಿಯುತ್ತಿದ್ದಂತೆಯೇ ತೀವ್ರ ಬೇಸರವಾಗಿ ಸೋಮಣ್ಣ ಬೆಳಗ್ಗೆಯಿಂದಲೇ ಮಧ್ಯಪಾನ ಸೇವಿಸಿದ್ದ. ನನ್ನ ನೆಚ್ಚಿನ ನಾಯಕ ಇನ್ನಿಲ್ಲ ಎಂಬುದೇ ಈ ಸೋಮಣ್ಣ ಎಂಬ ಹುಚ್ಚು ಅಭಿಮಾನಿಗೆ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ವಿಷ್ಣುವರ್ಧನ್ ಇಲ್ಲ ಅಂದ ಮೇಲೆ ನಾನೇಕೆ ಇರುವುದು ಎಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮಣ್ಣನ ಸ್ನೇಹಿತ ಎನ್ನಲಾದ ಕುನ್ನಯ್ಯ ಆತನನ್ನು ರಕ್ಷಿಸಲು ಹೋಗಿ ನೀರು ಪಾಲಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಪರಿಸ್ಥಿತಿ ಸಂಪೂರ್ಣ ಉದ್ರಿಕ್ತಗೊಂಡಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಬೈಕ್ ಗೆ ಬೆಂಕಿ ಹಚ್ಚಿದ ಅಭಿಮಾನಿಗಳು, ದಾಂಧಲೆ ಮುಂದುವರಿಸಿದ್ದಾರೆ. 8000 ಪೊಲೀಸರು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು. ಮೂರೂವರೆ ಲಕ್ಷ ಅಭಿಮಾನಿಗಳು ಅಂತಿಮ ದರುಶನಕ್ಕೆ ಜಮಾಯಿಸಿದ್ದಾರೆ. ವಿಷ್ಣು ಅಂತಿಮ ದರುಶನಕ್ಕೆ 2 ಮೈಲಿ ಉದ್ದ ಸಾಲನ್ನು ನ್ಯಾಷನಲ್ ಮೈದಾನದ ಮುಂದೆ ಕಾಣಬಹುದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada