»   »  ಬಸಂತಕುಮಾರ್ ಪಾಟೀಲ್ ಮನೆಯಲ್ಲಿ ಕಳುವು

ಬಸಂತಕುಮಾರ್ ಪಾಟೀಲ್ ಮನೆಯಲ್ಲಿ ಕಳುವು

Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಅವರ ಮುಖ್ಯ ಕಚೇರಿಯಲ್ಲಿ 3.40 ಲಕ್ಷ ರುಪಾಯಿಗಳು ಕಳುವಾಗಿದೆ. ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಎಂಬುವರ ಮೇಲೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಬಸಂತಕುಮಾರ್ ಪಾಟೀಲ್ ದೂರು ಸಲ್ಲಿಸಿದ್ದಾರೆ.

ತೀರಾ ಇತ್ತೀಚೆಗೆ ಪಾಟೀಲ್ ಅವರು ಬ್ಯಾಂಕ್ ನಿಂದ ಹಣ ತಂದು ತಮ್ಮ ಕಚೇರಿಯಲ್ಲಿ ಇಟ್ಟಿದ್ದರು. ''ಭಾನು ಎಂಬುವವರು ಕಳೆದ ನಾಲ್ಕು ವರ್ಷಗಳಿಂದ ಅವರ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ಸೇರಿದ ವಸ್ತುಗಳ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ನನ್ನ ಲ್ಯಾಪ್ ಟಾಪ್ ಮತ್ತು ನಗದು ಹಣದ ಚೀಲವನ್ನು ಕೊಟ್ಟು ಕಚೇರಿಯ ನನ್ನ ಕೊಠಡಿಯಲ್ಲಿ ಇಡುವಂತೆ ಹೇಳಿದ್ದೆ. ಆದರೆ ಮರುದಿನ ಬೆಳಗ್ಗೆ ಬಂದು ನೋಡಿದರೆ ಹಣ ನಾಪತ್ತೆಯಾಗಿತ್ತು'' ಎಂದು ಪಾಟೀಲರು ದೂರಿನಲ್ಲಿ ತಿಳಿಸಿದ್ದಾರೆ.

ಕಾಕತಾಳೀಯವೆಂಬಂತೆ ನಾನು ಹಣ ಕೊಟ್ಟ ದಿನ ಭಾನು ಬ್ಯಾಗ್ ಸಮೇತ ಹೋಗುತ್ತಿದ್ದನ್ನು ನಮ್ಮ ಸೆಕ್ಯುರಿಟಿ ಗಾರ್ಡ್ ಸಹ ನೋಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಟೀಲ್ ಅವರ ಬಳಿ ಭಾನು ಅವರ ಪೋಷಕರು ಹಾಗೂ ಗೆಳೆಯರು ಕ್ಷಮೆಯಾಚಿಸಿದ್ದರು. ದಯವಿಟ್ಟು ಪೊಲೀಸರಿಗೆ ದೂರು ಕೊಡಬೇಡಿ ಎಂದು ವಿನಂತಿಸಿಕೊಂಡಿರುವ ಅವರು, ಜುಲೈ27ರವರೆಗೆ ನಮಗೆ ಸ್ವಲ್ಪ ಕಾಲಾವಕಾಶ ಕೊಡಿ ನಿಮ್ಮ ಹಣ ಹಿಂತಿರುಗಿಸುವಂತೆ ಎಂದು ಹೇಳಿದ್ದರು.

ಆದರೆ ಬಸಂತಕುಮಾರ್ ಪಾಟೀಲ್ ಅವರು ವೃಥಾ ಕಾದಿದ್ದೇ ಬಂತು. ಹಣ ಮಾತ್ರ ಹಿಂತಿರುಗಲಿಲ್ಲ. ಹಿಂತಿರುಗುವ ಸೂಚನೆಗಳು ಕಾಣಲಿಲ್ಲ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ನೇರ ಮಡಿವಾಳ ಪೊಲೀಸ್ ಠಾಣೆಗೆ ಹೋಗಿ ಭಾನು ವಿರುದ್ಧ ಬಸಂತಕುಮಾರ್ ಪಾಟೀಲ್ ದೂರು ಕೊಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada