For Quick Alerts
  ALLOW NOTIFICATIONS  
  For Daily Alerts

  ಸಾರಥಿ, ಪರಮಾತ್ಮ, ಕೆಂಪೇಗೌಡ ನಕಲಿ ಡಿವಿಡಿ ಪತ್ತೆ

  By Rajendra
  |

  ಕನ್ನಡ ಹಾಗೂ ವಿವಿಧ ಭಾಷೆಯ ಚಲನಚಿತ್ರಗಳ ನಕಲಿ ಡಿವಿಡಿ ಮತ್ತು ಎಂಪಿ3ಗಳ ಭಾರಿ ಮಾರಾಟ ಜಾಲ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ನಕಲಿ ಡಿವಿಡಿಗಳನ್ನು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಸಿಸಿಬಿ ವಂಚನೆ ಮತ್ತು ದುರುಪಯೋಗ ದಳದ ಪೊಲೀಸರು ಬೆಂಗಳೂರು ಕೆ.ಆರ್.ಪುರಂನಲ್ಲಿ ಮೂವರನ್ನು ಬಂಧಿಸಿದ್ದಾರೆ.

  ದಾಳಿಯಲ್ಲಿ ಹಳೆ ಮದ್ರಾಸ್ ರಸ್ತೆಯ ಮೋಹನ್ ಜ್ಯುವೆಲ್ಲರ್ಸ್ ಮುಂಭಾಗದ ಫುಟ್‌ಪಾತ್, ದೇವಸಂದ್ರ ಮುಖ್ಯರಸ್ತೆಯ ಮಂಜುನಾಥ ಸ್ವಾಮಿ ಚಿಲ್ಲರೆ ಅಂಗಡಿ ಮುಂಭಾಗದ ಫುಟ್‌ಪಾತ್ ಮೇಲೆ ಕನ್ನಡ ಚಿತ್ರಗಳಾದ ಸಾರಥಿ, ಪ್ರಿನ್ಸ್, ಅನಾಥರು, ಪರಮಾತ್ಮ, ಕೆಂಪೇಗೌಡ, ಪೃಥ್ವಿ, ಸಂಜು ವೆಡ್ಸ್ ಗೀತಾ, ಹುಡುಗರು ಮುಂತಾದ ಚಲನಚಿತ್ರಗಳ ನಕಲಿ ಡಿವಿಡಿಗಳನ್ನು ಪತ್ತೆಯಾಗಿವೆ.

  ಇವುಗಳನ್ನು ಅಕ್ರಮವಾಗಿ ಕಾಪಿರೈಟ್ ಕಾಯ್ದೆಯನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ರಾಜೇಶ್ (25), ಮೋಹನ್ ರಾಜ್(19) ಹಾಗೂ ಸಂಜಯ್ ಕುಮಾರ್ (20) ಎಂಬ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ರು. 3,25,000 ಮೌಲ್ಯದ 3235 ನಕಲಿ ಡಿವಿಡಿ ಮತ್ತು ಎಂಪಿ3ಗಳನ್ನು ವಶಪಡಿಸಿಕೊಂಡು ಅವರ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  ಪೊಲೀಸರ ದಾಳಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಹಿಂದಿ ಬಾಷೆಯ 'ಅಗ್ನಿಪತ್', 'ಏಜೆಂಟ್ ವಿನೋದ್', ತೆಲುಗು ಭಾಷೆಯ 'ರಕ್ಷಾ', 'ದಮ್ಮು', ತಮಿಳು ಬಾಷೆಯ 'ವರುಕಲ್‌ವರು ಕನ್ನಡಿ', 'ಕಾಂಚನ' ಇನ್ನೂ ಮುಂತಾದ ಚಲನಚಿತ್ರಗಳ ನಕಲಿ ಡಿವಿಡಿಗಳು ಪತ್ತೆಯಾಗಿವೆ ಎಂದು ಜಂಟಿ ಪೊಲೀಸ್ ಕಮೀಷನರ್, ಅಪರಾಧ (ಪೂರ್ವ) ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  The sleuths of Bangalore Central Crime Bureau’s (CCB) Cheating and Misuse Wing police on Thursday (3rd May) arrested three persons, who were involved in a pirated DVDs and MP3 racket. The police recovered more than 3235 DVDs and MP3s.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X