For Quick Alerts
  ALLOW NOTIFICATIONS  
  For Daily Alerts

  ತೆಲುಗು ದೇಶಂ ಪಕ್ಷಕ್ಕೆ ಸಿನಿಮಾ ತಾರೆ ಜಯಪ್ರದಾ?

  By Rajendra
  |

  ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿದ್ದ ನಾಯಕಿ ಜಯಪ್ರದಾ. ವರನಟ ಡಾ.ರಾಜ್ ಕುಮಾರ್ ಅವರೊಂದಿಗಿನ 'ಕವಿರತ್ನ ಕಾಳಿದಾಸ' ಚಿತ್ರದ ಹಾಡು "ಓ.... ಓ....ಓ ಪ್ರಿಯತಮಾ ಪ್ರಿಯತಮಾ...ಕರುಣೆಯಾ ತೋರೆಯಾ" ನೆನಪಿಸಿಕೊಂಡರೆ ಮೈ ಪುಳಕಗೊಳ್ಳುತ್ತದೆ. ಇಷ್ಟೆಲ್ಲಾ ಹಳೆಯ ಪುರಾಣ ಹೇಳಲು ಕಾರಣ, ಜಯಪ್ರದಾ ಆಂಧ್ರ ರಾಜಕೀಯಕ್ಕೆ ಧುಮಕುತ್ತಿದ್ದಾರೆ.

  ದೈವ ನಿರ್ಣಯದ ಮೇರೆಗೆ ತಾವು ಪುನಃ ಆಂಧ್ರ ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ತಿರುಪತಿಯಲ್ಲಿ ಜಯಪ್ರದಾ ಮಂಗಳವಾರ (ಏ.3) ತಿಳಿಸಿದ್ದಾರೆ. ತನ್ನ ಹುಟ್ಟುಹಬ್ಬದ ನಿಮಿತ್ತ ಕುಟುಂಬ ಸದಸ್ಯರೊಂದಿಗೆ ಅವರು ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರು. ಬಹುಶಃ ಅವರು ತೆಲುಗು ದೇಶಂ ಪಾರ್ಟಿ ಸೇರುವ ಸಾಧ್ಯತೆಗಳಿವೆ.

  ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಸಮಯವಿದೆ. ಅಷ್ಟರೊಳಗೆ ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಅವರು ದರ್ಶನ್ ಅಭಿನಯದ ಭಾರಿ ಬಜೆಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  The Yesteryears heartthrob South Indian actress Jayaprada is likely to re-join Andra politics. There are speculations that Jayaprada is contemplating to seek election to the Lok Sabha from Andhra Pradesh.
  Wednesday, April 4, 2012, 17:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X