For Quick Alerts
  ALLOW NOTIFICATIONS  
  For Daily Alerts

  'ಕುಮಾರಿ 21F' ಚಿತ್ರ ನೋಡಲು ಈ ನಾಲ್ಕು ಕಾರಣ ಸಾಕು

  By Bharath Kumar
  |

  ಡೈನಾಮಿಕ್ ಹೀರೋ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ದೇವರಾಜ್ ಅಭಿನಯದ ಚೊಚ್ಚಲ ಸಿನಿಮಾ 'ಕುಮಾರಿ 21F' ಇದೇ ವಾರ ಬೆಳ್ಳಿತೆರೆಗೆ ಬರ್ತಿದೆ.

  ಟ್ರೈಲರ್, ಹಾಡುಗಳು, ಹೀಗೆ ಪ್ರತಿಯೊಂದು ಅಂಶದಿಂದಲೂ ಮೋಡಿ ಮಾಡಿರುವ ಈ ಸಿನಿಮಾ ಆಗಸ್ಟ್ 3 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

  ಶ್ರೀಮನ್ ವೇಮುಲಾ ಅವರು ನಿರ್ದೇಶನ ಮಾಡಿರುವ ಈ ಸಿನಿಮಾಗೆ ಸಂಪತ್ ಕುಮಾರ್ ಅಡಪ ಬಂಡವಾಳ ಹೂಡಿದ್ದಾರೆ. ಸರಿ, ಈ ಚಿತ್ರವನ್ನ ಯಾಕೆ ನೋಡಬೇಕು, ಅಂತಹದ್ದೇನಿದೆ ಈ ಚಿತ್ರದಲ್ಲಿ ವಿಶೇಷತೆಗಳು ಎಂದು ನೋಡುವುದಾದರೇ ಈ ನಾಲ್ಕು ಅಂಶಗಳು ಸಾಕು, ನೀವು ಚಿತ್ರಮಂದಿರಕ್ಕೆ ಬರಲು. ಮುಂದೆ ಓದಿ.....

  ದೇವರಾಜ್ ಮಗನ ಸಿನಿಮಾ

  ದೇವರಾಜ್ ಮಗನ ಸಿನಿಮಾ

  ಡೈನಾಮಿಕ್ ಹೀರೋ ದೇವರಾಜ್ ಅವರ ಮಗ ಪ್ರಜ್ವಲ್ ದೇವರಾಜ್ ಅವರ ಚಿತ್ರಗಳನ್ನ ನೋಡಿದ್ದೀರಾ. ಈಗ ದೇವರಾಜ್ ಅವರ ಎರಡನೇ ಮಗ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ದೇವರಾಜ್ ಮತ್ತು ಪ್ರಜ್ವಲ್ ನಂತರ ಪ್ರಣಾಮ್ ಹೇಗೆ ಆಕ್ಟ್ ಮಾಡಿರ್ತಾರೆ ಎಂಬುದನ್ನ ನೋಡುವುದಕ್ಕೆ 'ಕುಮಾರಿ 21F' ನೋಡಬೇಕು.

  ರೀಮೇಕ್ ಚೆನ್ನಾಗಿರಬಹುದು.?

  ರೀಮೇಕ್ ಚೆನ್ನಾಗಿರಬಹುದು.?

  'ಕುಮಾರಿ 21F' ರೀಮೇಕ್ ಸಿನಿಮಾ. 2015 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ತೆಲುಗು ಸಿನಿಮಾ. ರಾಜ್ ತರುಣ್ ಹಾಗೂ ಹೆಬ್ಬಾ ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರವನ್ನ ಕನ್ನಡದಲ್ಲಿ ಮಾಡಿದ್ದಾರೆ. ಹೀಗಾಗಿ, ನಮ್ಮವರು ಸಿನಿಮಾ ಹೇಗೆ ತಯಾರಿಸಿದ್ದಾರೆ ಎಂಬ ಕುತೂಹಲಕ್ಕಾಗಿ ಈ ಸಿನಿಮಾ ನೋಡಬೇಕಾಗಿದೆ.

  ಹೊಸಬರ ಜೋಡಿ

  ಹೊಸಬರ ಜೋಡಿ

  ಚಿತ್ರ ನಾಯಕ ಪ್ರಣಾಮ್ ದೇವರಾಜ್ ಗೆ ಇದು ಮೊದಲ ಸಿನಿಮಾ. ಇನ್ನು ಈ ಚಿತ್ರದ ನಾಯಕಿ ನಿಧಿ ಕುಶಾಲಪ್ಪ ಅವರಿಗೆ ಕೂಡ ಚೊಚ್ಚಲ ಸಿನಿಮಾ. ನಿರ್ದೇಶಕರಿಗೂ ಕೂಡ ಇದು ಮೊದಲ ಪ್ರಯತ್ನ. ಒಟ್ಟಾರೆ, ಎಲ್ಲ ಮೊದಲುಗಳು ಸೇರಿ ಈ ಸಿನಿಮಾವನ್ನ ತುಂಬಾ ಚೆನ್ನಾಗಿ ಮಾಡಿದೆ ಎಂಬ ಭರವಸೆಯಿಂದ ಈ ಸಿನಿಮಾ ನೋಡಬೇಕು.

  ಟ್ರೈಲರ್ ಮಾಡಿರುವ ಮೋಡಿ

  ಟ್ರೈಲರ್ ಮಾಡಿರುವ ಮೋಡಿ

  ತೆಲುಗಿನ ಸಿನಿಮಾ ನೋಡದ ಕನ್ನಡಿಗರಿಗೆ ಇದು ಹೊಸತು. ಟ್ರೈಲರ್ ನಿಂದಲೇ ಹೆಚ್ಚು ಗಮನ ಸೆಳೆದಿದೆ. ಇಂದಿನ ಯುವಜನಾಂಗ ಹೇಗಿರುತ್ತೆ ಎಂಬುದನ್ನ ತುಂಬಾ ನೈಜವಾಗಿ ಹಾಗೂ ಬೋಲ್ಡ್ ಆಗಿ ತೋರಿಸುತ್ತಿದ್ದಾರೆ. ಹಾಗಾಗಿ, 'ಕುಮಾರಿ 21F' ಚಿತ್ರವನ್ನ ನೋಡದೆ ಇರಲು ಯಾವುದೇ ಕಾರಣವಿಲ್ಲ.

  English summary
  kannada actor devaraj son Pranam Devaraj starrer debut movie kumari 21f will releasing on august 3rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X