Just In
Don't Miss!
- News
ಸರ್ಕಾರಿ ನೌಕರರಿಗೆ ಡಬ್ಬಲ್ ಧಮಾಕ, ಡಿಎ, ಸಂಬಳ ಏರಿಕೆ!
- Sports
ಗಾಬಾದಲ್ಲಿ ಕೋಟೆ ಬೇಧಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ
- Automobiles
ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
- Lifestyle
ಶುದ್ಧ ದೇಸಿ ತುಪ್ಪದಲ್ಲಿದೆ ಸೌಂದರ್ಯವರ್ಧಕ ಗುಣಗಳು...
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಜಿಎಫ್ ಚಾಪ್ಟರ್ 2 ಟೀಸರ್ ಮೇಲಿರುವ ನಾಲ್ಕು ನಿರೀಕ್ಷೆಗಳು
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆಗೆ ಟೀಸರ್ ಅಧಿಕೃತವಾಗಿ ರಿಲೀಸ್ ಆಗಲಿದೆ.
ಕೆಜಿಎಫ್ ಚಾಪ್ಟರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮೊದಲ ಭಾಗಕ್ಕಿಂತ ಮುಂದುವರಿದ ಭಾಗ ಬಹಳ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಚಾಪ್ಟರ್ 2 ಕುರಿತು ಇದುವರೆಗೂ ಒಂದು ಪೋಸ್ಟರ್ ಬಿಟ್ಟು ಬೇರೆ ಯಾವ ಝಲಕ್ ಸಹ ಹೊರಬಿದ್ದಿಲ್ಲ. ಹಾಗಾಗಿ, ಚಾಪ್ಟರ್ 2 ಟೀಸರ್ ಮೇಲೆ ಭಾರಿ ನಿರೀಕ್ಷೆಗಳಿದೆ. ಸದ್ಯಕ್ಕೆ ಐದು ಪ್ರಮುಖ ನಿರೀಕ್ಷೆಗಳನ್ನು ಪಟ್ಟಿ ಮಾಡಲಾಗಿದೆ. ಮುಂದೆ ಓದಿ...

ರಾ ಮೇಕಿಂಗ್, ಜಬರ್‌ದಸ್ತ್ ಆಕ್ಷನ್
2018ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಮೇಕಿಂಗ್ ವಿಚಾರಕ್ಕೆ ಆ ಸಿನಿಮಾ ಭಾರಿ ಸುದ್ದಿಯಾಗಿತ್ತು. ಬಹುಶಃ ರಾ ಸ್ಟೈಲ್ ಮೇಕಿಂಗ್ ಹೇಗಿರಲಿದೆ ಎಂಬ ಝಲಕ್ ಈ ಟೀಸರ್‌ನಲ್ಲಿ ಸಿಗಬಹುದು. ಅಷ್ಟೇ ಅಲ್ಲ ಕೆಜಿಎಫ್ ಪಕ್ಕಾ ಆಕ್ಷನ್ ಮಸಲಾ. ಹಾಗಾಗಿ, ಯಶ್ ಬರ್ತಡೇಗೆ ಬರುವ ಟೀಸರ್ ತುಂಬಾ ಕುತೂಹಲ ಮೂಡಿಸಿದೆ.
ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದು ರಾತ್ರಿ 9.29ಕ್ಕೆ ರಿಲೀಸ್

ಅಧೀರನ ಎಂಟ್ರಿ!
ಸಂಜಯ್ ದತ್ ಅಧೀರನ ಪಾತ್ರದಲ್ಲಿ ಸಂಜಯ್ ದತ್ ನಟಿಸಿರುವುದು ಗೊತ್ತೆ ಇದೆ. ಅಧೀರ ಫೋಸ್ಟರ್ ಮಾತ್ರ ನೋಡಿದ್ವಿ. ಈಗ ಟೀಸರ್‌ನಲ್ಲಿ ಅಧೀರನ ಪೂರ್ತಿ ಗೆಟಪ್ ಹಾಗೂ ಎಂಟ್ರಿ ಹೇಗಿರಲಿದೆ ಎಂದು ನೋಡಲು ಕಾಯುತ್ತಿದ್ದಾರೆ.

ರವೀನಾ ಟಂಡನ್ ಲುಕ್
ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಧಾನಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ. ರವಿನಾ ಅವರ ಲುಕ್ ಇದುವರೆಗೂ ಬಹಿರಂಗವಾಗಿರಲಿಲ್ಲ. ಹಾಗಾಗಿ, ಈ ಟೀಸರ್‌ನಲ್ಲಿ ರಮಿಕಾ ಸೇನ್ ಅವತಾರ ಸಹ ನೋಡಬಹುದು ಎಂಬ ಕಾತುರ.

ರಿಲೀಸ್‌ಗೆ ಬಗ್ಗೆ ಅಪ್‌ಡೇಟ್
ಕೆಜಿಎಫ್ 2 ಬಿಡುಗಡೆ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಟೀಸರ್‌ನಲ್ಲಿ ರಿಲೀಸ್ ಕುರಿತು ಸುಳಿವು ಅಥವಾ ಮಾಹಿತಿ ನೀಡಬಹುದಾ ಎಂಬ ಲೆಕ್ಕಾಚಾರವೂ ಇದೆ.