»   » ಒಬ್ಬರಲ್ಲ ಇಬ್ಬರಲ್ಲ ಶರಣ್ ಗೆ ಜೊತೆಯಾಗಿದ್ದಾರೆ ಐದು ಬೆಡಗಿಯರು

ಒಬ್ಬರಲ್ಲ ಇಬ್ಬರಲ್ಲ ಶರಣ್ ಗೆ ಜೊತೆಯಾಗಿದ್ದಾರೆ ಐದು ಬೆಡಗಿಯರು

Posted By:
Subscribe to Filmibeat Kannada
ಶರಣ್ ಚಿತ್ರಕ್ಕೆ ನಾಯಕಿಯರು ಒಬ್ಬರಲ್ಲ , ಇಬ್ಬರಲ್ಲ ! | Filmibeat Kannada

ನಟ ಶರಣ್ ಈಗ 'ರಾಂಬೋ 2' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಜೊತೆಗೆ 'ಮುಗುಳುನಗೆ' ಬೀರಿದ್ದ ಹುಡುಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಸಿನಿಮಾದ ಒಂದು ಹಾಡಿನಲ್ಲಿ ಇನ್ನೂ ಐದು ನಾಯಕಿಯರು ಶರಣ್ ಜೊತೆಗೆ ಕುಣಿಯಲಿದ್ದಾರೆ.

ಸಾಮಾನ್ಯವಾಗಿ ಒಂದು ಸಿನಿಮಾದ ವಿಶೇಷ ಹಾಡುಗಳಿಗೆ ಈ ರೀತಿಯ ಪ್ರಯೋಗ ಮಾಡಲಾಗುತ್ತದೆ. ಈಗ 'ರಾಂಬೋ 2' ಸಿನಿಮಾದಲ್ಲಿ ಆ ರೀತಿಯ ಒಂದು ಪ್ರಯತ್ನ ನಡೆದಿದೆ. ಸಿನಿಮಾದ ಒಂದು ಸ್ಪೆಷಲ್ ಹಾಡಿನಲ್ಲಿ ಕಾಮಿಡಿ ಕಿಂಗ್ ಶರಣ್ ಜೊತೆಗೆ ಐದು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಒಂದು ವಿಶೇಷ ಅಂದರೆ ಇವರೆಲ್ಲ ಶರಣ್ ಅವರ ಹಿಂದಿನ ಸಿನಿಮಾದಲ್ಲಿ ನಟಿಸಿರುವ ನಾಯಕಿಯರೇ ಆಗಿದ್ದಾರೆ.

ನಟಿ ಶೃತಿ ಹರಿಹರನ್ (ಮಾರುತಿ 800), ಮಯೂರಿ (ನಟರಾಜ ಸರ್ವಿಸ್), ಸಂಚಿತಾ ಪಡುಕೋಣೆ (ಸತ್ಯ ಹರಿಶ್ಚಂದ್ರ), ಶುಭಾಪೂಂಜಾ (ಮಾರುತಿ 800), ಭಾವನ ರಾವ್ (ಸತ್ಯ ಹರಿಶ್ಚಂದ್ರ) ಈ ಐದು ನಾಯಕಿಯರು ಮತ್ತೆ ಶರಣ್ ಜೊತೆಗೆ 'ರಾಂಬೋ 2' ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ.

5 Kannada actress shake their legs in Rambo 2 song

ಅಂದಹಾಗೆ, 'ರಾಂಬೋ 2' ಸಿನಿಮಾವನ್ನು 'ದಿಲ್ ವಾಲ' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಗೇಂದ್ರ ನಿರ್ಮಾಣ ಚಿತ್ರಕ್ಕಿದೆ. ಈ ಸಿನಿಮಾದಲ್ಲಿಯೂ ಶರಣ್ ಮತ್ತು ಚಿಕ್ಕಣ್ಣ ಜೋಡಿ ಮುಂದುವರೆದಿದೆ. ಈ ಬೇಸಿಗೆ ಯಲ್ಲಿ ಸಿನಿಮಾ ತೆರೆಗೆ ಬರಲಿದೆ.

English summary
5 Kannada actress shake their legs in Kannada Movie 'Rambo 2' which features Sharan in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada