»   » ನೀವು ನೋಡಲೇಬೇಕಾದ, 'ಗಂಗಾ'ಳ 5 ವಿಶೇಷತೆಗಳು!!

ನೀವು ನೋಡಲೇಬೇಕಾದ, 'ಗಂಗಾ'ಳ 5 ವಿಶೇಷತೆಗಳು!!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಲೇಡಿ ಟೈಗರ್ ಮಾಲಾಶ್ರೀ ಎಂದೇ ಖ್ಯಾತಿ ಗಳಿಸಿದ್ದ ನಟಿ ಮಾಲಾಶ್ರೀ ಅವರು ಒಂದು ಕಾಲದಲ್ಲಿ ಸಿನಿ ರಸಿಕರ ಕನಸಿನ ರಾಣಿಯಾಗಿ ಮಿಂಚಿದ್ದಾರೆ. ಇದೀಗ ತುಂಬಾ ದಿನಗಳ ನಂತರ ಮಾಲಾಶ್ರೀ ಅವರು ಹಳೇ ಮಾಲಾಶ್ರೀಯಾಗಿ ಸೀರೆ ಉಟ್ಟು ಅಪ್ಪಟ ಗೃಹಿಣಿ ಪಾತ್ರದಲ್ಲಿ ಮಿಂಚಲಿದ್ದಾರೆ.

ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 39ನೇ ಚಿತ್ರ 'ಗಂಗಾ' ಸಿನಿಮಾದಲ್ಲಿ ಮಾಲಾಶ್ರಿ ಅವರು ಗೃಹಿಣಿ ಪಾತ್ರದ ಜೊತೆಗೆ ಎಂದಿನಂತೆ ರೌಡಿಗಳ ಜೊತೆ ಕಾದಾಡಿದ್ದಾರೆ.[ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್]

ತುಂಬಾ ಗ್ಯಾಪ್ ತೆಗೆದುಕೊಂಡ ನಂತರ ಮತ್ತೆ ಗಾಂಧಿನಗರಕ್ಕೆ ಕಮ್ ಬ್ಯಾಕ್ ಆಗಿರುವ ಲೇಡಿ ಟೈಗರ್ ಮಾಲಾಶ್ರೀ ಅವರು ಬಹುನಿರೀಕ್ಷಿತ ಚಿತ್ರ 'ಗಂಗಾ' ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗು ಮಾಲಾಶ್ರೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಗಂಗಾ' ಚಿತ್ರ ನಾಳೆ (ಅಕ್ಟೋಬರ್ 22) ತೆರೆ ಮೇಲೆ ಅಪ್ಪಳಿಸಲಿದ್ದು, ಇದರಲ್ಲಿ ಹಲವಾರು ವಿಶೇಷತೆಗಳಿವೆ. ಅದೇನೆಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ..

ದಸರಾ ಹಬ್ಬಕ್ಕೆ 'ಗಂಗಾ' ಗಿಫ್ಟ್

ಕನಸಿನ ರಾಣಿ ಮಾಲಾಶ್ರೀ ಅವರು ತುಂಬಾ ದಿನಗಳ ನಂತರ 'ಗಂಗಾ' ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಂತೂ ತಮ್ಮ ಅಭಿಮಾನಿಗಳಿಗೆ ನಾಡಹಬ್ಬ ದಸರಾಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಆಟೋ ಚಾಲಕಿಯಾದ 'ಗಂಗಾ'

ಯಾವಾಗಲೂ ರೌಡಿಗಳನ್ನು ಚಚ್ಚುತ್ತಿದ್ದ ಲೇಡಿ ಟೈಗರ್ ಮಾಲಾಶ್ರೀ ಅವರು ಈ ಬಾರಿ ಹೊಸ ಅವತಾರದಲ್ಲಿ ಮಿಂಚಿದ್ದಾರೆ. ಆಟೋ ಚಾಲಕಿಯಾಗಿ ಕಾಣಿಸಿಕೊಂಡಿರುವ ನಟಿ ಮಾಲಾಶ್ರೀ ವಿಶೇಷವಾಗಿ ಮಹಿಳೆಯರಿಗೆ ಸಂದೇಶ ನೀಡುವ ಪಾತ್ರದಲ್ಲಿ ಮಿಂಚಿದ್ದಾರೆ. ಹೆಣ್ಣು ಮಕ್ಕಳು ಯಾರದೇ ಸಹಾಯವಿಲ್ಲದೇ ತಮ್ಮ ಕಾಲ ಮೇಲೆ ತಾವೇ ನಿಲ್ಲಬಹುದು ಎಂಬುದನ್ನು ಈ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.

ಸೀರೆ ಉಟ್ಟು ಕಂಗೊಳಿಸಲಿರುವ 'ಗಂಗಾ'

ಹಲವು ವರ್ಷಗಳ ಗ್ಯಾಪ್ ನಂತರ ನಟಿ ಮಾಲಾಶ್ರೀ ಅವರು 'ಗಂಗಾ' ಚಿತ್ರದ ಮೂಲಕ ಅಪ್ಪಟ ಗೃಹಿಣಿಯಾಗಿ ಸೀರೆ ಉಟ್ಟು ಕಂಗೊಳಿಸಿದ್ದಾರೆ.[ದಸರಾ ಹಬ್ಬಕ್ಕೆ ಮಾಲಾಶ್ರೀ 'ಗಂಗಾ' ರಿಲೀಸ್]

'ಗಂಗಾ'ಳ ಹಲವಾರು ವಿಶೇಷತೆಗಳು

ಹೆಸರಾಂತ ನಿರ್ಮಾಪಕ ರಾಮು ಅವರು ನಿರ್ಮಿಸಿರುವ 'ಗಂಗಾ' ಸಿನಿಮಾ 7.1 ಡಿಜಿಟಲ್ ಸರೌಂಡ್, ಸೌಂಡ್ ತಂತ್ರಜ್ಞಾನದ ಲೇಪನದೊಂದಿಗೆ ಹಾಜರಾಗಲಿದೆ. ಜೊತೆಗೆ ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಎರಡು ಸಮ್ಮಿಲನವಾಗಿರುವ ಈ ಚಿತ್ರದಲ್ಲಿ ಸಾಹಸದ ಜೊತೆಗೆ ಸೆಂಟಿಮೆಂಟ್ ಸೇರಿದಂತೆ ಈ ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ನಿರ್ದೇಶಕ ಓಂ ಸಾಯಿ ಪ್ರಕಾಶ್-ಮಾಲಾಶ್ರೀ ಜುಗಲ್ ಬಂದಿ

1990ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಖ್ಯಾತಿ ಗಳಿಸಿದ್ದ ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಸುಮಾರು 19 ವರ್ಷಗಳ ನಂತರ 'ಗಂಗಾ' ಚಿತ್ರದಲ್ಲಿ ಮತ್ತೊಮ್ಮೆ ಎದುರಾಗಿದ್ದು, ಇವರಿಬ್ಬರ ಜುಗಲ್ ಬಂದಿಗೆ ಪ್ರೇಕ್ಷಕರು ಕಾತರರಾಗಿದ್ದಾರೆ.

ಚಿತ್ರರಂಗದಲ್ಲಿ ಯಶಸ್ವಿ 25 ವರ್ಷ ಫಿನಿಶ್

ನಟಿ ಮಾಲಾಶ್ರೀ ಅವರಿಗೆ ಸದ್ಯಕ್ಕೆ ಡಬಲ್ ಖುಷಿ, ಒಂದೆಡೆ 'ಗಂಗಾ' ಚಿತ್ರದ ಬಿಡುಗಡೆ ಆದರೆ ಇನ್ನೊಂದೆಡೆ ಚಿತ್ರರಂಗ ಪ್ರವೇಶಿಸಿ ಬರೋಬ್ಬರಿ 25 ವರ್ಷ ಪೂರೈಸಿದ ಸಂಭ್ರಮ. ಒಟ್ನಲ್ಲಿ ಡಬಲ್ ಖುಷಿಯಲ್ಲಿರುವ ನಟಿ ಮಾಲಾಶ್ರೀ ಅವರಿಗೆ ಬೆಸ್ಟ್ ವಿಶಸ್ ಹೇಳೋಣ.

ನಾಳೆ ಭರ್ಜರಿಯಾಗಿ ತೆರೆಗೆ 'ಗಂಗಾ'ಳ ಆಗಮನ

ನಾಳೆ (ಅಕ್ಟೋಬರ್ 22) ಇಡೀ ಕರ್ನಾಟಕದಾದ್ಯಂತ ಕನಸಿನ ರಾಣಿ ಮಾಲಾಶ್ರೀ ಅವರ 'ಗಂಗಾ' ಭರ್ಜರಿಯಾಗಿ ತೆರೆ ಕಾಣುತ್ತಿದೆ.

English summary
Malashri is back with a bang. Popularly called as Lady Tiger of KFI, Malashri is gearing up for a big release in 2015 through 'Ganga'. The movie is directed by Om Sai Prakash. Kannada Movie 'Ganga' releasing on October 22nd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada