twitter
    For Quick Alerts
    ALLOW NOTIFICATIONS  
    For Daily Alerts

    ರಶ್ಮಿಕಾ ಮಂದಣ್ಣ ಸಿನಿ ಜರ್ನಿಗೆ 5 ವರ್ಷ: 5 ವರ್ಷದಲ್ಲಿ ರಶ್ಮಿಕಾ ಕಲಿತ 9 ಪಾಠ!

    |

    ನಟಿ ರಶ್ಮಿಕಾ ಮಂದಣ್ಣ ಅವರು ಈಗ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ. ಸಿನಿಮಾ ಬದುಕು ಆರಂಭದಿಂದಲೇ ಯಶಸ್ಸಿನ ಮೆಟ್ಟಿಲು ಏರಿದಾಕೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿಗೆ 5 ವರ್ಷ ತುಂಬಿದೆ. ಇಂದಿಗೆ ರಶ್ಮಿಕಾ ಅಭಿನಯದ ಮೊದಲ ಚಿತ್ರ 'ಕಿರಿಕ್ ಪಾರ್ಟಿ' ರಿಲೀಸ್‌ ಆಗಿ 5 ವರ್ಷ ಆಗಿದೆ.

    ತಮ್ಮ ಸಿನಿ ಬದುಕಿಗೆ 5 ವರ್ಷದ ತುಂಬಿದೆ ಎನ್ನುವ ವಿಚಾರವನ್ನು ನಟಿ ರಶ್ಮಿಕಾ ಮಂದಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ ಹಾಕುವುದರ ಮೂಲಕ ಅಚ್ಚರಿಯ ಈ 5 ವರ್ಷಗಳನ್ನು ಮೆಲುಕು ಹಾಕಿದ್ದಾರೆ. ಐದು ವರ್ಷದಲ್ಲಿ ತಾನು ಏನೆಲ್ಲಾ ಕಲಿತಿದ್ದಾರೆ ಎನ್ನುವುದನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ.

    ರಶ್ಮಿಕಾ ಅವರ ಯಶಸ್ವಿ ಸಿನಿ ಪಯಣವನ್ನು ನೋಡದರಿಗೆ ಅಚ್ಚರಿ ಆಗುತ್ತದೆ. ನೋಡ ನೋಡುತ್ತಲೆ ರಶ್ಮಿಕಾ ಗಗನದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ಈ ಬಗ್ಗೆ ಹಂಚಿಕೊಂಡ ಪೋಸ್ಟ್‌ ವೈರಲ್‌ ಆಗಿದೆ. ತಾನು ಕಲಿತ 9 ಬದುಕಿನ ಪಾಠಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

    ಹೃದಯದಿಂದ ಖುಷಿ ಆಗಿರುವುದನ್ನು ಕಲಿತ ರಶ್ಮಿಕಾ ಮಂದಣ್ಣ!

    ಈ ಐದು ವರ್ಷದಲ್ಲಿ ರಶ್ಮಿಕಾ ಮಂದಣ್ಣ ಅವರು ಮೊದಲು ತಿಳಿದು ಕೊಂಡಿದ್ದು ಸಮಯದ ಬಗ್ಗೆ. ಅದನ್ನು ಅವರು ಹೀಗೆ ಬರೆದುಕೊಂಡಿದ್ದಾರೆ. ಹೀಗೆ ತಾವು ಕಲಿತ ಅತಿ ಮುಖ್ಯವಾದ 9 ಅಂಶಗಳನ್ನು ರಶ್ಮಿಕಾ ಬಿಚ್ಚಿಟ್ಟಿದ್ದಾರೆ.

    1: ಸಮಯ ತುಂಬಾ ವೇಗವಾಗಿ ಸಾಗಿ ಹೋಗುತ್ತದೆ. ಜೊತೆಗೆ ಪ್ರತಿ ದಿನ ನೆನಪುಗಳನ್ನು ಕೊಡುತ್ತದೆ.

    2: "ನಿಜವಾಗಿಯು ಹೃದಯದಿಂದ ಸಂತೋಷವಾಗಿ ಇರುವುದು ಹೇಗೆ ಎನ್ನುವುದು ಕಲಿತಿದ್ದೇನೆ. ಈಗ ಸಂತೋಷವಾಗಿ ಇದ್ದೇನೆ". ಎಂದು ಬರೆದುಕೊಂಡಿದ್ದಾರೆ.

    ಜೀವನದಲ್ಲಿ ಯಾವುದು ಸುಲಭ ಅಲ್ಲ: ರಶ್ಮಿಕಾ ಮಂದಣ್ಣ!

    ಜೀವನದಲ್ಲಿ ಯಾವುದು ಸುಲಭ ಅಲ್ಲ: ರಶ್ಮಿಕಾ ಮಂದಣ್ಣ!

    3: ಜೀವನದಲ್ಲಿ ಯಾವುದೂ ಸುಲಭವಲ್ಲ ಎಂದು ನಾನು ಅರಿತುಕೊಂಡೆ. ನಿಮಗೆ ಬೇಕಾದುದಕ್ಕಾಗಿ ಯಾವಾಗಲೂ ಹೋರಾಡುತ್ತಲೇ ಇರಬೇಕು. ಜಾಗರೂಕರಾಗಿರಿ, ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ, ಕೃತಜ್ಞರಾಗಿರಿ ಆದರೆ ಯಾವಾಗಲೂ ಹೋರಾಡುತ್ತಲೇ ಇರಿ.

    4: ತಾಳ್ಮೆಯಿಂದಿರಿ, ತಾಳ್ಮೆಯಿಂದ ಕಾಯಿರಿ, ವಿಚಾರಗಳು ತಾನಾಗಿಯೇ ಅದರ ಸ್ಥಾನಕ್ಕೆ ಹೋಗುತ್ತವೆ. ಇದು ಕಠಿಣ ಆಗಬಹುದು ಆದರೆ ತಾಳ್ಮೆಯಿಂದಿರಿ ಮತ್ತು ಶಾಂತವಾಗಿರಿ.

    5: ಇತರ ಜನರು ಸದಾ ನಿಮಗೆ ಏನನ್ನಾದರೂ ಕಲಿಸಲು ಮುಂದಾಗುತ್ತಾರೆ. ಆದ್ದರಿಂದ ಯಾವಾಗಲೂ ಕಲಿಯಲು ಮುಕ್ತರಾಗಿರಿ. ನೀವು ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ.

    ಯಾವುದನ್ನು ಹೆಚ್ಚು ಸಾಧಿಸಬಾರದು ಎಂದ ರಶ್ಮಿಕಾ!

    ಯಾವುದನ್ನು ಹೆಚ್ಚು ಸಾಧಿಸಬಾರದು ಎಂದ ರಶ್ಮಿಕಾ!

    6: ಯಾವುದನ್ನು ಹೆಚ್ಚು ಸಾಧಿಸಬೇಡಿ, ಭಾವನಾತ್ಮಕ, ದೈಹಿಕ, ಮಾನಸಿಕವಾಗಿ ಯಾವುದನ್ನು ಹೆಚ್ಚು ಸಾಧಿಸಲು ಹೋಗಬೇಡಿ. ಅದನ್ನು ಬಿಡಬೇಕು, ಬಿಡಲು ಕಲಿಯಿರಿ.

    7: ಜೀವನದಲ್ಲಿ ನೀವು ಮಾಡಬೇಕದ ಕಾಯಕಕ್ಕೆ ಸಮಯವನ್ನು ನೀಡಿ. ಉದಾಹರಣೆಗೆ ಅದು ವೃತ್ತಿಯಾಗಿದ್ದರೆ ಅದಕ್ಕೆ ಸಮಯವನ್ನು ನೀಡಿ. ಅದು ಪ್ರೀತಿಯಾಗಿದ್ದರೆ - ಅದಕ್ಕೆ ಸಮಯ ನೀಡಿ. ಅದು ಕುಟುಂಬವಾಗಿದ್ದರೆ - ಅದಕ್ಕೆ ಸಮಯ ನೀಡಿ. ಅದು ನೀವೇ ಆಗಿದ್ದರೆ - ನಿಮಗಾಗಿ ಸಮಯ ನೀಡಿ. ನಿಮ್ಮ ಸಮಯ ನಿಮ್ಮದಾಗಿದೆ. ಆದ್ದರಿಂದ ನೀವು ಆಯ್ಕೆ ಮಾಡಿಕೊಳ್ಳಿ ಆದರೆ ಸಮಯವನ್ನು ನೆನಪಿಡಿ. ಮತ್ತು ವಿಮಾನಗಳು ನಿಮಗಾಗಿ ಎಂದಿಗೂ ಕಾಯುವುದಿಲ್ಲ.

    ಮೊದಲು ನಿಮ್ಮ ಬಗ್ಗೆ ಯೋಚಿಸುವುದನ್ನು ಕಲಿಯಿರಿ: ರಶ್ಮಿಕಾ ಮಂದಣ್ಣ

    ಮೊದಲು ನಿಮ್ಮ ಬಗ್ಗೆ ಯೋಚಿಸುವುದನ್ನು ಕಲಿಯಿರಿ: ರಶ್ಮಿಕಾ ಮಂದಣ್ಣ

    8: ಚೆನ್ನಾಗಿರುವುದನ್ನು ತಿನ್ನಬೇಕು, ಚೆನ್ನಾಗಿ ನಿದ್ರೆ ಮಾಡಬೇಕು, ಶ್ರಮ ವಹಿಸಿ ಕೆಲಸ ಮಾಡಬೇಕು, ದೊಡ್ಡದಾಗಿ ನಗಬೇಕು, ಹೆಚ್ಚು ಮುಕ್ತವಾಗಿ ಪ್ರೀತಿಸಿ.

    9: ಜನರು ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿ ಇರುವುದಿಲ್ಲ. ಹಾಗಾಗಿ ನೀವು ಯಾರ ಪರವಾಗಿ ಇರುವ ಅವಶ್ಯಕತೆ ಇಲ್ಲ. ನೀವು ಮೊದಲು ನಿಮ್ಮ ಬಗ್ಗೆ ಯೋಚಿಸಬೇಕು. ಇದರ ಜೊತೆಗೆ ಇನ್ನಷ್ಟು ಕಲಿತಿದ್ದೇನೆ. ಹಾಗೆ ಮುಂದುವರೆಯುತ್ತೇನೆ, ಮುಂದುವರೆಯುತ್ತೇನೆ.

    ಇದಿಷ್ಟು ರಶ್ಮಿಕಾ ಮಂದಣ್ಣ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ "ಈ ಬಗ್ಗೆ ಮುಂದೆ ಒಂದು ದಿನ ನಾನು ಸಂಪೂರ್ಣವಾಗಿ ಮಾತನಾಡುತ್ತೇನೆ. ಸದ್ಯಕ್ಕೆ ಇದಿಷ್ಟು" ಎಂದು ಬರೆದು ಕೊಂಡಿದ್ದಾರೆ.

    English summary
    5 years For Rashmika Mandanna Film Career: She Shared 9 Things What She Learn This In 5 years, Know More
    Friday, December 31, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X