For Quick Alerts
  ALLOW NOTIFICATIONS  
  For Daily Alerts

  'ಯಜಮಾನ' ಪ್ರೆಸ್ ಮೀಟ್ ನಲ್ಲಿ ನಡೆದ 6 ವಿಶೇಷ ಕ್ಷಣಗಳು

  |
  ಎಲ್ಲ ಪ್ರೆಸ್ ಮೀಟ್ ನಂತೆ ಇರಲಿಲ್ಲ ಯಜಮಾನ ಪ್ರೆಸ್ ಮೀಟ್..! | FILMIBEAT KANNADA

  ಸಾಕಷ್ಟು ಸಿನಿಮಾ ಪ್ರೆಸ್ ಮೀಟ್ ಗಳು ಸಾಮಾನ್ಯವಾಗಿಯೇ ಇರುತ್ತದೆ. ದಿನ ಅದೇ ಅದೇ ರೀತಿಯ ಕಾರ್ಯಕ್ರಮಗಳಿಗೆ ಹೋಗಿ ಮಾಧ್ಯಮದವರಿಗೂ ಬೇಸರ ಆಗಿರುತ್ತದೆ. ಆದರೆ, ನಿನ್ನೆಯ 'ಯಜಮಾನ' ಚಿತ್ರದ ಕಾರ್ಯಕ್ರಮ ಕೆಲ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿತ್ತು.

  'ಯಜಮಾನ' ಸಿನಿಮಾದ ಬಿಡುಗಡೆಯ ಹಿನ್ನಲೆಯಲ್ಲಿ ನಿನ್ನೆ (ಮಂಗಳವಾರ) ಬೆಂಗಳೂರಿನ ಹೋಟೆಲ್ ಒಂದರಲ್ಲಿ ಚಿತ್ರದ ಪ್ರೆಸ್ ಮೀಟ್ ನಡೆಯಿತು. ಆರ್ ಜೆ ಪ್ರದೀಪ್ ಲವಲವಿಕೆಯ ನಿರೂಪಣೆಯ ಜೊತೆಗೆ ಶುರುವಾದ ಕಾರ್ಯಕ್ರಮದಲ್ಲಿ ಅನೇಕ ವಿಶೇಷತೆಗಳು ನಡೆಯಿತು.

  ಯಾವತ್ತಿದ್ರೂ ಯಜಮಾನ ವಿಷ್ಣುದಾದ ಒಬ್ಬರೇ: ದರ್ಶನ್

  ನಟ ರವಿಶಂಕರ್ ಹಾಡು, ಹರಿಕೃಷ್ಣ ಡೈಲಾಗ್, ದರ್ಶನ್ ಸೆಲ್ಫಿ, ಬಸಣ್ಣಿಯ ಕನ್ನಡ, ದೇವರಾಜ್ ಕಾಲಿಗೆ ದರ್ಶನ್ ನಮಸ್ಕಾರ ಮಾಡಿದ್ದು ಹೀಗೆ ಅನೇಕ ಕ್ಷಣಗಳಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.

  ಸಿನಿಮಾದ ಹಾಡುಗಳ ಜೊತೆಗೆ ಸಾಗಿದ ಮಾತುಕತೆ ಚೆನ್ನಾಗಿತ್ತು. ಕಾರ್ಯಕ್ರಮದಲ್ಲಿ ನಡೆದ ಸುಂದರ ಕ್ಷಣಗಳ ನೋಟ ಮುಂದಿದೆ..

  ರವಿಶಂಕರ್ ಹಾಡು

  ರವಿಶಂಕರ್ ಹಾಡು

  ನಟ ರವಿಶಂಕರ್ ಡೈಲಾಗ್ ಹೇಳುವುದಲ್ಲಿ ಎತ್ತಿದ ಕೈ. ಡೈಲಾಗ್ ಮಾತ್ರವಲ್ಲ ಹಾಡನ್ನು ಕೂಡ ಆರುಮುಘ ಚೆನ್ನಾಗಿ ಹಾಡುತ್ತಾರೆ. ದರ್ಶನ್ ಗಾಗಿ ನಿನ್ನೆಯ ಪ್ರೆಸ್ ಮೀಟ್ ನಲ್ಲಿ ರವಿಶಂಕರ್ ಒಂದು ಹಾಡು ಹಾಡಿದರು. 'ಯಾರೇ ಬಂದರು ಎದುರ್ಯಾರೆ ನಿಂತರು ಪ್ರೀತಿ ಹಂಚುವ ಯಜಮಾನ ..' ಹಾಡಿನ ಎರಡು ಸಾಲುಗಳನ್ನ ಹಾಡಿ ರಂಜಿಸಿದರು.

  ಹರಿಕೃಷ್ಣ ಡೈಲಾಗ್

  ಹರಿಕೃಷ್ಣ ಡೈಲಾಗ್

  ಹರಿಕೃಷ್ಣ ಮಾತನಾಡುವುದೆ ಕಷ್ಟ. ಹೀಗಿರುವಾಗ ಅವರು ಡೈಲಾಗ್ ಹೇಳಿದರು ಅಂದರೆ ನೀವು ನಂಬಲೇ ಬೇಕು. ನಿರೂಪಕ ಆರ್ ಜೆ ಪ್ರದೀಪ್ ಒತ್ತಾಯಕ್ಕೆ ಹರಿಕೃಷ್ಣ 'ಯಜಮಾನ' ಡೈಲಾಗ್ ಹೇಳಿದರು. ಮುಂದಿನ ಸೀಟ್ ನಲ್ಲಿ ಕುಳಿತ್ತಿದ್ದ ದರ್ಶನ್ ಚಪ್ಪಾಳೆ ಹೊಡೆದರು. ಈ ಚಿತ್ರಕ್ಕೆ ಸಂಭಾಷಣೆಯನ್ನು ಕೂಡ ಅವರೇ ಬರೆದಿದ್ದಾರೆ.

  ದರ್ಶನ್ ಗೆ ಇರೋ ಕ್ರೇಜ್ ನೋಡಿ ಬೆರಗಾದ್ರು ನಿರ್ಮಾಪಕಿ ಶೈಲಜಾ

  ಬಸಣ್ಣಿಯ ಕನ್ನಡ

  ಬಸಣ್ಣಿಯ ಕನ್ನಡ

  ನಟಿ ತಾನ್ಯ ಹೋಪ್ ಕನ್ನಡ ಮಾತನಾಡಿದ್ದು ಸಖತ್ ಸ್ವೀಟ್ ಆಗಿತ್ತು.‌ ಮುದ್ದು ಮುದ್ದಾಗಿ ತಮ್ಮ ಮಾತುಗಳ ಮೂಲಕ ಚಿತ್ರದ ಬಗ್ಗೆ ವಿವರ ನೀಡಿದರು. ಬಸಣ್ಣಿಯ ಹಾಡಿನಲ್ಲಿ‌ ತನ್ನ ಮೈಮಾಟದ ಮೂಲಕ ಹುಚ್ಚೆಬ್ಬಿಸಿರುವ ತಾನ್ಯ ಮಾತೂ ಕೂಡ ಅಷ್ಟೇ ಚೆನ್ನಾಗಿತ್ತು.

  ಕಾಲಿಗೆ ಬಿದ್ದ ದರ್ಶನ್

  ಕಾಲಿಗೆ ಬಿದ್ದ ದರ್ಶನ್

  ನಟ ದರ್ಶನ್ ಕಾರ್ಯಕ್ರಮ ಶುರುವಿಗೆ ಮೊದಲು ಬಂದು ಕುಳಿತಿದ್ದರು.‌ ನಟ ದೇವರಾಜ್ ಬಂದ ತಕ್ಷಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ದರ್ಶನ್ ಗುಣವನ್ನು ದೇವರಾಜ್ ಮೆಚ್ಚಿಕೊಂಡರು. ಯಜಮಾನದಲ್ಲಿ ನಾಯಕಿ ರಶ್ಮಿಕಾ ತಂದೆಯ ಪಾತ್ರದಲ್ಲಿ ಡೈನಾಮಿಕ್ ಸ್ಟಾರ್ ನಟಿಸಿದ್ದಾರೆ.

  ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ

  ದರ್ಶನ್ ಸೆಲ್ಫಿ

  ದರ್ಶನ್ ಸೆಲ್ಫಿ

  ಕಾರ್ಯಕ್ರಮ ಮುಗಿದ ಮೇಲೆ‌ ದರ್ಶನ್ ತಮ್ಮ ಅಭಿಮಾನಿಗಳ ಹಾಗೂ ಮಾಧ್ಯಮ ಸ್ನೇಹಿತರ ಜೊತೆಗೆ ಸೆಲ್ಫಿ ತೆಗೆದುಕೊಂಡರು. ಕೆಲ ಅಭಿಮಾನಿಗಳಿಗೆ ದರ್ಶನ್ ಜೊತೆಗೆ ಫೋಟೋ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

  'ಯಜಮಾನ'ನ ಕುಟುಂಬ

  'ಯಜಮಾನ'ನ ಕುಟುಂಬ

  ಕಾರ್ಯಕ್ರಮದ ಈ ಎಲ್ಲ ವಿಶೇಷತೆಗಳ ಜೊತೆಗೆ 'ಯಜಮಾನ' ಚಿತ್ರದ ಇಡೀ ತಂಡವನ್ನು ಕಾರ್ಯಕ್ರಮದಲ್ಲಿ ಸೇರಿತ್ತು. ಇಡೀ 'ಯಜಮಾನ'ನ ಕುಟುಂಬ ವೇದಿಕೆ ಏರಿ ಚಿತ್ರದ ಬಗ್ಗೆ ಮಾತನಾಡಿದರು.‌‌ ರಶ್ಮಿಕಾ ಮಂದಣ್ಣ ತಮ್ಮ ಬೇರೆ ಸಿನಿಮಾಗಳ ಕೆಲಸ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ.

  English summary
  6 best movements in Darshan's 'Yajamana' movie press meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X