»   » ಹಾಸ್ಯನಟರಾದ ಶರಣ್ ಚಿತ್ರರಂಗಕ್ಕೆ ಬಂದಿದ್ದೇಕೆ? ಓದಿ...

ಹಾಸ್ಯನಟರಾದ ಶರಣ್ ಚಿತ್ರರಂಗಕ್ಕೆ ಬಂದಿದ್ದೇಕೆ? ಓದಿ...

Posted By:
Subscribe to Filmibeat Kannada
Sharan
ಹಾಸ್ಯನಟ ಶರಣ್ ಎಲ್ಲಾ ಸಿನಿಪ್ರೇಕ್ಷಕರಿಗೂ ಗೊತ್ತು. ಅವರು ಸ್ಯಾಂಡಲ್ ವುಡ್ ಗೆ ಬಂದಮೇಲೆ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಲೇಜ್ ದೃಶ್ಯಗಳಿದ್ದರೆ ಅದರಲ್ಲಿ ಶರಣ್ ಇದ್ದೇ ಇರುತ್ತಾರೆ ಅನ್ನುವಷ್ಟು ಕಾಲೇಜ್ ಬಾಯ್ ಪಾತ್ರ ಮಾಡಿದ್ದಾರವರು. ಅದಲ್ಲವೆಂದಾದರೆ ನಾಯಕನ ಗಳೆಯ ಶರಣ್ ಆಗಿರುತ್ತಾರೆ.

ಹೀಗೆ ಕನ್ನಡ ಚಿತ್ರಗಳಲ್ಲಿ ಹಾಸ್ಯನಟ, ಕಾಲೇಜ್ ಬಾಯ್, ನಾಯಕನ ಸ್ನೇಹಿತ ಹೀಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿರುವ ಈ ಪ್ರಸಿದ್ಧ ಪ್ರತಿಭೆ ಚಿತ್ರರಂಗಕ್ಕೆ ಬಂದದ್ದು 'ವಿಲನ್' ಆಗುವ ಕನಸುಹೊತ್ತು. ಈ ಮಾತನ್ನು ಸ್ವತಃ ಶರಣ್ ಹೇಳಿದ್ದಾರೆ. ಹಾಗಾಗಿ ನಂಬಲೇಬೇಕು. ಇಲ್ಲದಿದ್ದರೆ ಕಾಮಿಡಿಗೇ ಹುಟ್ಟಿರುವಷ್ಟು ಚೆನ್ನಾಗಿ 'ಕಾಮಿಡಿ' ಮಾಡುವ ಅವರ ಬಗ್ಗೆ ಬೇರೆ ಯಾರಾದರೂ ಹೇಳಿದರೆ ನಂಬಲಸಾಧ್ಯ.

ಕನ್ನಡದ ಒಂದು ಕಾಲದ ಜನಪ್ರಿಯ ನಟಿ ಶ್ರುತಿ ತಮ್ಮ ಶರಣ್ ಅವರಿಗೆ ಚಿಕ್ಕಂದಿನಿಂದಲೂ ಹಿಂದಿಯ ಖ್ಯಾತ ಖಳನಟ ಕೆ. ಎನ್. ಸಿಂಗ್ ಅವರ ನಟನೆಯೆಂದರೆ ತುಂಬಾ ಇಷ್ಟವಂತೆ. ಅವರನ್ನೇ ಇಷ್ಟಪಟ್ಟು ಬೆಳೆದ ಅವರಿಗೆ ಸಿಂಗ್ ರಂತೆ ಖಳನಟನಾಗಿ ಮಾತೃಭಾಷೆ ಕನ್ನಡದಲ್ಲಿ ಮಿಂಚಬೇಕೆಂಬ ಬಲವಾದ ಆಸೆ ಇತ್ತಂತೆ. ಆದರೆ ಆಗಿದ್ದೇ ಬೇರೆ ಅನ್ನುತ್ತಾರೆ ಶರಣ್. (ಒನ್ ಇಂಡಿಯಾ ಕನ್ನಡ)

English summary
Comedy Actor Sharan had dream to act in Villain Role. But in Kannada Film Industry, now he became comedy actor and College Boy.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X