twitter
    For Quick Alerts
    ALLOW NOTIFICATIONS  
    For Daily Alerts

    ಬಸ್‌ನಲ್ಲಿ ಬಂದು 'ಕಾಂತಾರ' ವೀಕ್ಷಿಸಿದ ಕಾಸರಗೋಡಿನ ಒಂದೇ ಗ್ರಾಮದ 69 ಮಂದಿ!

    |

    ದೇಶದ ಉತ್ತರದಿಂದ ದಕ್ಷಿಣದವರೆಗೂ ಬರೀ 'ಕಾಂತಾರ' ಸಿನಿಮಾದ್ದೇ ಸದ್ದು. ಎಲ್ಲಾ ಭಾಷೆಯಲ್ಲೂ 'ಕಾಂತಾರ' ಬಿಟ್ಟರೆ ಬೇರೆ ಸಿನಿಮಾಗಳ ಸದ್ದೇ ಇಲ್ಲ. ದಕ್ಷಿಣ ಭಾರತದಲ್ಲಂತೂ ರಿಷಬ್ ಶೆಟ್ಟಿಯ ನಟನೆ-ನಿರ್ದೇಶನದ ಬಗ್ಗೆನೇ ಚರ್ಚೆಯಾಗುತ್ತಿದೆ.

    ಎಲ್ಲೆಲ್ಲಿ ಸಿನಿಮಾ ರಿಲೀಸ್ ಆಗಿದೆಯೋ ಅ ಎಲ್ಲಾ ಕಡೆ ಬಾಕ್ಸಾಫೀಸ್‌ನಲ್ಲಿ ಸೌಂಡು ಮಾಡುತ್ತಿದೆ. ಭಾಷೆಯ ಭೇದ ಮರೆತು ಜನರು ಕೂಡ ಸಿನಿಮಾ ನೋಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾ ಆಗಿದ್ದರೂ, ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಕೆಸರು ಗದ್ದೆಯಲ್ಲಷ್ಟೇ ಅಲ್ಲ.. ಬಾಕ್ಸಾಫೀಸ್‌ನಲ್ಲೂ ಭರ್ಜರಿ ಓಟ: 4 ಭಾಷೆಯಿಂದ 'ಕಾಂತಾರ' ಗಳಿಸಿದ್ದೆಷ್ಟು?ಕೆಸರು ಗದ್ದೆಯಲ್ಲಷ್ಟೇ ಅಲ್ಲ.. ಬಾಕ್ಸಾಫೀಸ್‌ನಲ್ಲೂ ಭರ್ಜರಿ ಓಟ: 4 ಭಾಷೆಯಿಂದ 'ಕಾಂತಾರ' ಗಳಿಸಿದ್ದೆಷ್ಟು?

    'ಕಾಂತಾರ' ಕ್ರೇಜ್ ಹೇಗಿದೆ ಅಂದ್ರೆ, ಇಲ್ಲೊಂದು ಗ್ರಾಮ ಜನರು ಸಿನಿಮಾ ನೋಡುವುದಕ್ಕೆ ಬಸ್ ಬುಕ್ ಮಾಡಿಕೊಂಡು ಬಂದಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಸಲಿಗೆ ಇವರು ಯಾರು? ಕಾಂತಾರ ನೋಡಲು ಮಾಡಿದ ಸಾಹಸವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

     ಕಾಸರಗೋಡಿನಲ್ಲಿ 'ಕಾಂತಾರ' ಕ್ರೇಜ್

    ಕಾಸರಗೋಡಿನಲ್ಲಿ 'ಕಾಂತಾರ' ಕ್ರೇಜ್

    ರಿಷಬ್ ಶೆಟ್ಟಿಗೂ ಕಾಸರಗೋಡಿಗೂ ಬಿಡಲಾರದ ನಂಟು ಇದೆ. ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಸಿನಿಮಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಗೆದ್ದು ಬೀಗಿತ್ತು. ಕಾಸರಗೋಡಿನ ಜನರೂ ಕೂಡ ಆ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ಈಗ ಅಲ್ಲಿನ ಜನರಿಂದ ರಿಷಬ್ ಶೆಟ್ಟಿಯ ಮತ್ತೊಂದು ಸಿನಿಮಾ 'ಕಾಂತಾರ'ಗೂ ಅದೇ ಪ್ರೀತಿ ಸಿಕ್ಕಿದೆ. ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಕನ್ನಡವನ್ನು ಮುಗಿಬಿದ್ದು ನೋಡಿದ್ದಾರೆ.

    'ಕಾಂತಾರ' ಹಿಂದಿ ವರ್ಷನ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು? ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆದರೂ ‌ಆಶ್ಚರ್ಯವಿಲ್ಲ!'ಕಾಂತಾರ' ಹಿಂದಿ ವರ್ಷನ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು? ಕಾರ್ತಿಕೇಯ 2 ಕಲೆಕ್ಷನ್ ಬ್ರೇಕ್ ಆದರೂ ‌ಆಶ್ಚರ್ಯವಿಲ್ಲ!

     ಒಂದೇ ಗ್ರಾಮದ 69 ಮಂದಿಯಿಂದ ಸಿನಿಮಾ ವೀಕ್ಷಣೆ

    ಒಂದೇ ಗ್ರಾಮದ 69 ಮಂದಿಯಿಂದ ಸಿನಿಮಾ ವೀಕ್ಷಣೆ

    'ಕಾಂತಾರ' ಸಿನಿಮಾಗೆ ಎಲ್ಲಾ ರಾಜ್ಯಗಳಲ್ಲೂ ಭರ್ಜರಿಯಾಗಿ ಮೌತ್ ಪಬ್ಲಿಸಿಟಿಯಿಂದಲೇ ಸಿಕ್ಕಿದೆ. ಹೀಗಾಗಿ ಅವರ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗದೇ ಹೋದರೂ, ಕನ್ನಡದಲ್ಲಿಯೇ ಸಿನಿಮಾ ನೋಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಕುಂಟಾಲುಮೂಲೆ ಎಂಬ ಗ್ರಾಮದ ಸುಮಾರು 69 ಮಂದಿ 'ಕಾಂತಾರ' ಸಿನಿಮಾವನ್ನು ಒಟ್ಟಿಗೆ ವೀಕ್ಷಿಸಿದ್ದಾರೆ. ತಮ್ಮ ಗ್ರಾಮದಿಂದ ಬಸ್ ಮೂಲಕ ಕಾಸರಗೋಡಿಗೆ ಪ್ರಯಾಣ ಮಾಡಿ ಬಂದು, ಸಿನಿಮಾ ವೀಕ್ಷಿಸಿದ್ದಾರೆ.

     ಮಲಯಾಳಂಗೆ ಇನ್ನೂ ಡಬ್ ಆಗಿಲ್ಲ

    ಮಲಯಾಳಂಗೆ ಇನ್ನೂ ಡಬ್ ಆಗಿಲ್ಲ

    ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಇನ್ನೂ ಮಲಯಾಳಂಗೆ ಡಬ್ ಆಗಿಲ್ಲ. ಕೇವಲ ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಮಾತ್ರ ಡಬ್ ಆಗಿ ಸಿನಿಮಾ ರಿಲೀಸ್ ಆಗಿದೆ. ಅಷ್ಟರಲ್ಲೇ 'ಕಾಂತಾರ' ಸಿನಿಮಾವನ್ನು ಕೇರಳದಲ್ಲಿ ಹಲವು ಮಂದಿ ವೀಕ್ಷಣೆ ಮಾಡಿದ್ದಾರೆ. ಸದ್ಯ ಕೇರಳದಲ್ಲೂ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗಿದ್ದು, ಅತೀ ಶೀಘ್ರದಲ್ಲಿ ಸಿನಿಮಾ ಮಲಯಾಳಂಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.

     'ಕಾಂತಾರ' 100 ಕೋಟಿ ಕ್ಲಬ್

    'ಕಾಂತಾರ' 100 ಕೋಟಿ ಕ್ಲಬ್

    ರಿಷಬ್ ಶೆಟ್ಟಿ ಸಿನಿಮಾ ಬಿಡುಗಡೆಯಾಗಿ ಸುಮಾರು 19 ದಿನಗಳಾಗಿವೆ. 17ನೇ ದಿನಕ್ಕೆ (ಅಕ್ಟೋಬರ್ 16) 'ಕಾಂತಾರ' ಸಿನಿಮಾ ವಿಶ್ವದಾದ್ಯಂತ ಎಲ್ಲಾ ಭಾಷೆಗಳಿಂದಲೂ ಸುಮಾರು 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಜೊತೆಗೆ ಎರಡನೇ ದಿನದಿಂದಲೇ ಹಿಂದಿ ಬೆಲ್ಟ್ ಹಾಗೂ ತೆಲುಗು, ತಮಿಳಿನಲ್ಲೂ 'ಕಾಂತಾರ'ಗೆ ರೆಸ್ಪಾನ್ಸ್ ಜೋರಾಗಿಯೇ ಇದೆ. ಹೀಗೆ ಮುಂದುವರೆದರೆ 'ಕಾಂತಾರ' 200 ಕೋಟಿ ಕ್ಲಬ್ ಸೇರುವುದರಲ್ಲಿ ಡೌಟೇ ಇಲ್ಲ.

    English summary
    69 Members From Kasaragodu District Badiyadka Village Came together to Watch Kantara, Know More.
    Tuesday, October 18, 2022, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X