Don't Miss!
- Sports
ಬಾಲಿವುಡ್ ನಟಿಯರನ್ನು ಮದುವೆಯಾದ ಐವರು ಭಾರತೀಯ ಕ್ರಿಕೆಟಿಗರು
- Technology
ವಿವೋ Y35 ಫೋನ್ಗೆ ಸಖತ್ ಡಿಸ್ಕೌಂಟ್!..ಖರೀದಿಗೆ ಈ ಆಫರ್ ಉತ್ತಮವೇ?
- Finance
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಅದಾನಿ, ಅಂಬಾನಿ: ಎಷ್ಟನೇ ಸ್ಥಾನ? ಯಾರು ಮುಂದಿದ್ದಾರೆ? ತಿಳಿಯಿರಿ
- News
Breaking; ಹಾಸನದ ಅಭ್ಯರ್ಥಿ, ಭವಾನಿ ರೇವಣ್ಣ ಮಹತ್ವದ ಘೋಷಣೆ
- Automobiles
ಶೀಘ್ರದಲ್ಲೇ 2023 ಹ್ಯುಂಡೈ ವೆನ್ಯೂ ಬಿಡುಗಡೆ... 4 ಏರ್ಬ್ಯಾಗ್, ಡೀಸಲ್ ಎಂಜಿನ್, ಹೊಸ ವೈಶಿಷ್ಟ್ಯಗಳು
- Lifestyle
ತನ್ನ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ವರ್ಷದ ಮೊದಲ ಶುಕ್ರವಾರ ಬಿಡುಗಡೆ ಆಗುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿ
2022ರಲ್ಲಿ ಕನ್ನಡ ಸಿನಿಮಾಗಳು ಅದ್ಭುತ ಸಾಧನೆ ಮಾಡಿತ್ತು. ಇಡೀ ಭಾರತೀಯ ಚಿತ್ರರಂಗಕ್ಕೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಾಗಿತ್ತು. ಈ ವರ್ಷವೂ ಕನ್ನಡ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ತಿದೆ. ವರ್ಷದ ಮೊದಲ ಶುಕ್ರವಾರ 8 ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
ಶುಕ್ರವಾರ ಬಂತು ಎಂದರೆ ಸಿನಿರಸಿಕರಿಗೆ ಹಬ್ಬ. ಹೊಸ ಹೊಸ ಸಿನಿಮಾಗಳು ಶುಕ್ರವಾರ ತೆರೆಕಂಡು ಪ್ರೇಕ್ಷಕರನ್ನು ರಂಜಿಸುತ್ತವೆ. ಕಳೆದ ವರ್ಷ ಮೊದಲ ವಾರ ಕೊರೋನಾ ಹಾವಳಿಯ ಭೀತಿ ಇತ್ತು. ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಹೆದರುವಂತಾಗಿತ್ತು. ಈ ವರ್ಷ ಆ ಸಮಸ್ಯೆ ಇಲ್ಲ. ಆದರೆ ದೊಡ್ಡ ದೊಡ್ಡ ಕನ್ನಡ ಸಿನಿಮಾಗಳು ಸದ್ಯಕ್ಕೆ ಬಿಡುಗಡೆಗೆ ಸಿದ್ಧವಿಲ್ಲ. ಹೊಸಬರ ಸಿನಿಮಾಗಳ ಜೊತೆಗೆ ಅನುಭವಿ ಕಲಾವಿದರ ಸಿನಿಮಾಗಳು ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬರ್ತಿವೆ.
ಒಂದಕ್ಕಿಂತ ಒಂದು ವಿಭಿನ್ನ ಜಾನರ್‌ನ ಸಿನಿಮಾಗಳು ಈ ವಾರ ತೆರೆಗಪ್ಪಳಿಸುತ್ತಿವೆ. ಸರಿಯಾದ ಪ್ರಮೋಷನ್ ಇಲ್ಲದೇ ಕೆಲ ಸಿನಿಮಾಗಳು ರಿಲೀಸ್ ಆಗುತ್ತಿರುವುದು ಕೂಡ ಯಾರಿಗೂ ಗೊತ್ತಾಗುತ್ತಿಲ್ಲ.

'ಮಿ. ಬ್ಯಾಚುಲರ್' ಆಗಿ ಕೃಷ್ಣ ಎಂಟ್ರಿ
ನಾಯ್ಡು ಭಂಡಾರ್ ನಿರ್ದೇಶನದ 'ಮಿ. ಬ್ಯಾಚುಲರ್' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೀರೊ ಆಗಿ ನಟಿಸ್ತಿದ್ದು ನಿಮಿಕಾ ರತ್ನಾಕರ್ ಹಾಗೂ ಮಿಲನಾ ನಾಗರಾಜ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್, ರೊಮ್ಯಾನ್ಸ್ , ಕಾಮಿಡಿ ಎಲ್ಲಾ ಸೇರಿಸಿ ಪಕ್ಕಾ ಎಂಟರ್‌ಟೈನರ್ ಸಿನಿಮಾ ಆಗಿ 'ಮಿ. ಬ್ಯಾಚುಲರ್' ಬರ್ತಿದೆ, ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದೆ.

'ಮಿಸ್ ನಂದಿನಿ' ಆಗಿ ಪ್ರಿಯಾಂಕಾ
ನಟಿ ಪ್ರಿಯಾಂಕ ಉಪೇಂದ್ರ ಶಾಲಾ ಶಿಕ್ಷಕಿ ಆಗಿ ನಟಿಸುತ್ತಿರುವ ಸಿನಿಮಾ 'ಮಿಸ್ ನಂದಿನಿ'. ಕಾನ್ವೆಂಟ್ ಶಾಲೆಗಳ ರೀತಿಯಲ್ಲೇ ಸರ್ಕಾರಿ ಶಾಲೆಗಳು ಬೆಳೆಯಬೇಕು ಎನ್ನುಗ ಆಶಯದೊಂದಿಗೆ ಈ ಸಿನಿಮಾ ನಿರ್ಮಾಣ ಆಗಿದೆ. ಎಸ್. ಆರ್ ಗುರುದತ್ತ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆರ್. ಕೆ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು ಸಾಯಿ ಸರ್ವೇಶ್ ಸಂಗೀತ ಚಿತ್ರಕ್ಕಿದೆ. ವೀರೇಶ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

'ಸ್ಪೂಕಿ ಕಾಲೇಜ್' ರಿಲೀಸ್
ಭರತ್. ಜೆ ನಿರ್ದೇಶನದ 'ಸ್ಪೂಕಿ ಕಾಲೇಜ್' ಸಿನಿಮಾ ಕೂಡ ಈ ವಾರ ತೆರೆಗೆ ಬರ್ತಿದೆ. ವಿವೇಕ್ ಸಿಂಹ ಹಾಗೂ ದಿಯಾ ಖುಷಿ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಚಿತ್ರದ ತಾರಾಗಣದಲ್ಲಿದ್ದಾರೆ. ಧಾರಾವಾಡದ 100 ವರ್ಷಗಳ ಹಳೆಯ ಕಾಲೇಜಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ. ಈ ಕಾಲೇಜು ಇಡೀ ಕಥೆಯ ಕೇಂದ್ರ ಬಿಂದು ಆಗಿದೆ.

ಹೊಸಬರ ಹೊಸ ಪ್ರಯತ್ನ
'ಮರೆಯದೆ ಕ್ಷಮಿಸು', 'ಥಗ್ಸ್ ಆಫ್ ರಾಮಘಡ', 'ಸದ್ಗುರು', 'ಕಾಕ್‌ಟೇಲ್', 'ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ' ಸೇರಿ ಹೊಸಬರ ಸಿನಿಮಾಗಳು ಈ ವಾರ ರಿಲೀಸ್ ಆಗ್ತಿದೆ. 8 ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವ ಚಿತ್ರಕ್ಕೆ ಎಷ್ಟು ಅಂಕ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.