For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

  |
  KGF KANNADA MOVIE : KGF ಗೆ ಪೈಪೋಟಿ ನೀಡಲು ಬರ್ತಿದೆ 7 ಸಿನಿಮಾಗಳು..!| FILMIBEAT KANNADA

  ಡಿಸೆಂಬರ್ 21ರಂದು ಇಡೀ ಕರ್ನಾಟಕದ ಕಣ್ಣು ಕೆಜಿಎಫ್ ಮೇಲೆ ಇರಲಿದೆ. ಯಶ್ ಅಭಿನಯದ ಈ ಸಿನಿಮಾ ಐದು ಭಾಷೆಗಳಲ್ಲಿ ಒಂದೇ ದಿನ ತೆರೆಕಾಣುತ್ತಿದೆ. ಕೆಜಿಎಫ್ ಚಿತ್ರಕ್ಕೆ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಎದುರಾಳಿ ಆಗಿರುವುದು ಗೊತ್ತಿರೋ ವಿಚಾರ.

  ಅಂದ್ರೆ, ಬಾಲಿವುಡ್ ನಲ್ಲಿ ಕೆಜಿಎಫ್ ಗೆ ಜೀರೋ ನೇರಾನೇರ ಫೈಟ್ ನೀಡಲಿದೆ. ಆದ್ರೆ, ಸೌತ್ ಇಂಡಸ್ಟ್ರಿಯಲ್ಲಿ ಕೆಜಿಎಫ್ ಗೆ ಎದುರಾಳಿ ಚಿತ್ರಗಳು ಇಲ್ವಾ ಎಂಬ ಕಲ್ಪನೆ ನಿಮ್ಮಲ್ಲಿ ಇದ್ರೆ ಬಿಟ್ಟುಬಿಡಿ. ಯಾಕಂದ್ರೆ, ಬಾಲಿವುಡ್ ನಲ್ಲಿ ಒಂದು ಸಿನಿಮಾ, ಈ ಕಡೆ ಸೌತ್ ನಲ್ಲಿ ಆರು ಸಿನಿಮಾ ಕೆಜಿಎಫ್ ಎದುರು ಬರ್ತಿದೆ.

  ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.?

  ದಕ್ಷಿಣ ಭಾರತದಲ್ಲಿ ಕೆಜಿಎಫ್ ಹವಾ ಹೆಚ್ಚಾಗಿದೆ. ಅದೇ ರೀತಿ ಉಳಿದ ಚಿತ್ರಗಳ ಕ್ರೇಜ್ ಕೂಡ ಜಾಸ್ತಿಯೇ ಇದೆ. ಯಾಕಂದ್ರೆ, ಈ ಸಿನಿಮಾಗಳೂ ಸಣ್ಣ ಪುಟ್ಟ ನಟರದ್ದಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳದ್ದು. ಅಷ್ಟಕ್ಕೂ, ಕೆಜಿಎಫ್ ಎದುರು ಬರಲಿರುವ ಆ 7 ಚಿತ್ರಗಳ ಕಡೆ ಒಂದು ನೋಟ. ಮುಂದೆ ಓದಿ.....

  ಕೆಜಿಎಫ್ ವರ್ಸಸ್ ಜೀರೋ

  ಕೆಜಿಎಫ್ ವರ್ಸಸ್ ಜೀರೋ

  ಕೆಜಿಎಫ್ ಚಿತ್ರಕ್ಕೆ ದೇಶಾದ್ಯಂತ ಟಫ್ ಪೈಪೋಟಿ ನೀಡಲಿರುವ ಚಿತ್ರ ಜೀರೋ. ಯಾಕಂದ್ರೆ, ಶಾರೂಖ್ ಖಾನ್ ಗೆ ವರ್ಲ್ಡ್ ವೈಡ್ ಅಭಿಮಾನಿಗಳು ಇದ್ದಾರೆ. ಎರಡು ಸಿನಿಮಾ ಒಂದೇ ದಿನ ಬರ್ತಿರುವುದು ಬಾಲಿವುಡ್ ಮಟ್ಟಿಗೆ ದೊಡ್ಡ ಹಬ್ಬ ಎನ್ನಲಾಗ್ತಿದೆ. ಇದು ಬಾಕ್ಸ್ ಆಫೀಸ್ ನಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.

  ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!

  ಕೆಜಿಎಫ್ ವರ್ಸಸ್ ಮಾರಿ-2

  ಕೆಜಿಎಫ್ ವರ್ಸಸ್ ಮಾರಿ-2

  ದಕ್ಷಿಣದಲ್ಲಿ ತನ್ನದೇ ಆದ ಬ್ರ್ಯಾಂಡ್ ಹೊಂದಿರುವ ನಟ ಧನುಶ್. ಈಗ ಧನುಶ್ ಅಭಿನಯದ 'ಮಾರಿ-2' ಸಿನಿಮಾ ಡಿಸೆಂಬರ್ 21ಕ್ಕೆ ಬರ್ತಿದೆ. ಈ ಹಿಂದೆ ಮಾರಿ ಸಿನಿಮಾ ಬಂದಿತ್ತು. ಆ ಚಿತ್ರ ಹಿಟ್ ಆಗುತ್ತು. ಹಾಗಾಗಿ, 'ಮಾರಿ-2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ತಮಿಳಿನಲ್ಲೂ ಕೆಜಿಎಫ್ ಸಿನಿಮಾ ಬರ್ತಿರುವುದರಿಂದ ಧನುಶ್ ಸಿನಿಮಾ ಎದುರಾಳಿ ಎನ್ನಬಹುದು.

  ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

  ವಿಜಯ್ ಸೇತುಪತಿ ಚಿತ್ರ

  ವಿಜಯ್ ಸೇತುಪತಿ ಚಿತ್ರ

  ಇತ್ತೀಚಿನ ವರ್ಷಗಳಲ್ಲಿ ತಮಿಳು ನಟ ವಿಜಯ್ ಸೇತುಪತಿ ಕ್ರೇಜ್ ಹೆಚ್ಚಿದೆ. ಕೇವಲ ತಮಿಳು ಮಾತ್ರವಲ್ಲದೇ ಯುನಿವರ್ಸಲ್ ಫ್ಯಾನ್ಸ್ ಹೊಂದಿದ್ದಾರೆ. ವಿಜಯ್ ಅಭಿನಯದ 'ಸೀತಾಕತ್ತಿ' ಚಿತ್ರವೂ ಡಿಸೆಂಬರ್ 21 ರಂದು ಬಿಡುಗಡೆಯಾಗ್ತಿದೆ. ಈ ಮೂಲಕ ಧನುಶ್ ಮಾರಿ ಮತ್ತು ವಿಜಯ್ ಸೇತುಪತಿಯ 'ಸೀತಾಕತ್ತಿ 'ನಡುವೆ ಬಿಗ್ ಫೈಟ್ ಇರಲಿದೆ. ಈ ಎರಡು ಚಿತ್ರಗಳನ್ನ ಕೆಜಿಎಫ್ ಎದುರಿಸಬೇಕಾಗಿದೆ.

  ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!

  ಜಯಂ ರವಿ ಸಿನಿಮಾ

  ಜಯಂ ರವಿ ಸಿನಿಮಾ

  ಧನುಶ್, ವಿಜಯ್ ಸೇತುಪತಿ ಚಿತ್ರಗಳಿಗೆ ಹೋಲಿಸಿಕೊಂಡರೇ ಜಯಂ ರವಿ ಅಭಿನಯದ 'ಅದಂಗ ಮಾರು' ಚಿತ್ರ ಸಾಧಾರಣ ಎನ್ನಬಹುದು. ಸದ್ಯದ ಮಾಹಿತಿ ಪ್ರಕಾರ ಸಿನಿಮಾನೂ ಅದೇ ದಿನ ಬರಲಿದೆ ಎನ್ನಲಾಗುತ್ತಿದೆ.

  ಬಾಲಿವುಡ್ ಮಂದಿ ಕೇಳಿದ 'ಕಟ್ಟಪ್ಪ-ಬಾಹುಬಲಿ' ಕಥೆ ಬಗ್ಗೆ 'ರಾಕಿ' ಏನಂದ್ರು?

  ವಿಷ್ಣು ವಿಶಾಲ್ ಸಿನಿಮಾ

  ವಿಷ್ಣು ವಿಶಾಲ್ ಸಿನಿಮಾ

  ತಮಿಳು ನಟ ವಿಷ್ಣು ವಿಶಾಲ್, ನಟಿ ಓವಿಯಾ, ರೆಜಿನಾ ಅಭಿನಯದ ಕಾಮಿಡಿ ಎಂಟರ್ ಟೈನರ್ 'ಸಿಲುಕ್ಕುವಾರಿಪಟ್ಟಿ ಸಿಂಗಂ' ಚಿತ್ರವೂ ಡಿಸೆಂಬರ್ 21ರಂದೇ ತೆರೆಕಾಣ್ತಿದೆ.

  ತಮನ್ನಾಗೆ ಕೋಕ್, ಹೊಸ ನಟಿ ಜೊತೆ ಮತ್ತೆ 'ಕೆಜಿಎಫ್' ಸಾಂಗ್ ಶೂಟಿಂಗ್.!

  ವರುಣ್ ತೇಜ ಸಿನಿಮಾ

  ವರುಣ್ ತೇಜ ಸಿನಿಮಾ

  ಮೆಗಾ ಸ್ಟಾರ್ ಫ್ಯಾಮಿಲಿಯ ನಟ ವರುಣ್ ತೇಜ ಅಭಿನಯದ ಅಂತರಿಕ್ಷಂ ಚಿತ್ರ ಡಿಸೆಂಬರ್ 20 ಬಿಡುಗಡೆಯಾಗ್ತಿದೆ. ಕೆಜಿಎಫ್ ಚಿತ್ರಕ್ಕೂ ಒಂದು ದಿನ ಮುಂಚೆ ಬರ್ತಿರುವ ಈ ತೆಲುಗು ಸಿನಿಮಾ ಹೈದಾರಬಾದ್ ಹಾಗೂ ತೆಲಂಗಾಣದಲ್ಲಿ ಯಶ್ ಸಿನಿಮಾಗೆ ಫೈಟ್ ನೀಡಬಹುದು.

  ಸಾಯಿ ಪಲ್ಲವಿ ಸಿನಿಮಾ

  ಸಾಯಿ ಪಲ್ಲವಿ ಸಿನಿಮಾ

  ಖ್ಯಾತ ನಟ ಶಾರ್ವಾನಂದ್ ಅಭಿನಯದ 'ಪಡಿಪಡಿ ಲೇಚೆ ಮನಸು' ಚಿತ್ರ ಡಿಸೆಂಬರ್ 21ರಂದು ಥಿಯೇಟರ್ ಗೆ ಬರ್ತಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  English summary
  Kannada actor yash starrer kgf, shahrukh khan satarrer zero, dhanush satrrer maari 2 movies will releasing on december 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X