For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ

  |

  ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ವಿರುದ್ಧ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಈ ವಾರೆಂಟ್ ಅನ್ವಯ ರಕ್ಷಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

  'ಕಿರಿಕ್ ಪಾರ್ಟಿ' ಚಿತ್ರದ ಹಾಡಿಗೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಮಾಲಿಕತ್ವದ ಪರಂವಾ ಸ್ಟುಡಿಯೋ ವಿರುದ್ದ ಕೃತಿಚೌರ್ಯ ಹಿನ್ನೆಲೆ ಕೇಸ್ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದೆ. ಮುಂದೆ ಓದಿ...

  ರಕ್ಷಿತ್ ಶೆಟ್ಟಿ-ಅಜನೀಶ್ ವಿರುದ್ಧ ವಾರೆಂಟ್

  ರಕ್ಷಿತ್ ಶೆಟ್ಟಿ-ಅಜನೀಶ್ ವಿರುದ್ಧ ವಾರೆಂಟ್

  'ಕಿರಿಕ್ ಪಾರ್ಟಿ' ಚಿತ್ರದಲ್ಲಿ 'ಶಾಂತಿ ಕ್ರಾಂತಿ' ಸಿನಿಮಾದ ಹಾಡೊಂದನ್ನು ಅನುಮತಿ ಇಲ್ಲದ ಬಳಸಿದ್ದಕ್ಕಾಗಿ ಲಹರಿ ಸಂಸ್ಥೆ ದೂರು ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಂವಾ ಸ್ಟುಡಿಯೋ ಮಾಲೀಕ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಬಂಧನ ರಹಿತ ವಾರೆಂಟ್ ಜಾರಿಯಾಗಿದೆ.

  'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು

  ವಿಚಾರಣೆ ಹಾಜರಾಗಿಲ್ಲ

  ವಿಚಾರಣೆ ಹಾಜರಾಗಿಲ್ಲ

  2017ರಲ್ಲಿ ಕಾಪಿ ರೈಟ್ ಕಾಯಿದೆ ಅಡಿ ರಕ್ಷಿತ್ ಶೆಟ್ಟಿ ಮತ್ತು ಅಜನೀಶ್ ವಿರುದ್ಧ ದೂರು ದಾಖಲಾಗಿತ್ತು. ಇದುವರೆಗೂ ಈ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಆ ಕಾರಣದಿಂದ 9ನೇ ಎಸಿಎಂಎಂ ಕೋರ್ಟ್ ವಾರೆಂಟ್ ಜಾರಿ ಮಾಡಿ ನೋಟೀಸ್ ನೀಡಿದೆ.

  ಬಂಧನ ಸಾಧ್ಯತೆ!

  ಬಂಧನ ಸಾಧ್ಯತೆ!

  ಮ್ಯಾಜಿಸ್ಟ್ರೇಟು ನ್ಯಾಯಾಲಯ ಬಂಧನ ರಹಿತ ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆ ಖುದ್ದು ರಕ್ಷಿತ್ ಶೆಟ್ಟಿ ಮತ್ತು ಅಜನೀಶ್ ಅವರೇ ಪೊಲೀಸರಿಗೆ ಶರಣಾಗಬೇಕಿದೆ ಅಥವಾ ಪೊಲೀಸರೇ ಇಬ್ಬರು ಬಂಧಿಸುವ ಸಾಧ್ಯತೆ ಇದೆ. ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿದೆ.

  ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?

  ಏನಿದು 'ಕಿರಿಕ್ ಪಾರ್ಟಿ' ವಿವಾದ

  ಏನಿದು 'ಕಿರಿಕ್ ಪಾರ್ಟಿ' ವಿವಾದ

  1991ರಲ್ಲಿ ತೆರೆಕಂಡಿದ್ದ ಶಾಂತಿ ಕ್ರಾಂತಿ ಸಿನಿಮಾದ 'ಮಧ್ಯರಾತ್ರಿಯಲ್ಲಿ ಹೈವೇ ರಸ್ತೆಯಲ್ಲಿ...' ಹಾಡನ್ನು 2017ರ ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಸಲಾಗಿದೆ. ಮೂಲ ಹಾಡಿನ ಹಕ್ಕು ಲಹರಿ ಸಂಸ್ಥೆ ಬಳಿ ಇದ್ದು, ಇದಕ್ಕಾಗಿ ಅನುಮತಿ ಪಡೆದಿಲ್ಲ. ಹಂಸಲೇಖ ಸಂಗೀತ ನೀಡಿದ್ದ ಶಾಂತಿ ಕ್ರಾಂತಿ ಚಿತ್ರದ ಹಾಡುಗಳ ಹಕ್ಕು ಲಹರಿ ಸಂಸ್ಥೆ ಬಳಿ ಇದೆ.

  English summary
  9th AMCC Court issued Non-bailable arrest warrant against kannada Actor Rakshit shetty, music director ajaneesh loknath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X