»   » ಟಾಲಿವುಡ್ ನಲ್ಲಿ ಸುದ್ದಿ ಆಯ್ತು ಪುನೀತ್ ಹೊಸ ಹೇರ್ ಸ್ಟೈಲ್

ಟಾಲಿವುಡ್ ನಲ್ಲಿ ಸುದ್ದಿ ಆಯ್ತು ಪುನೀತ್ ಹೊಸ ಹೇರ್ ಸ್ಟೈಲ್

Posted By:
Subscribe to Filmibeat Kannada

ನಟ ಪುನೀತ್ ರಾಜ್ ಕುಮಾರ್ ತಮ್ಮ ಹೊಸ ಸಿನಿಮಾಗಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ತಮ್ಮ ಕೇಶ ವಿನ್ಯಾಸನ್ನು ಬದಲಾಯಿಸಿದ್ದಾರೆ. ಈಗಾಗಲೇ ಅಪ್ಪು ಹೇರ್ ಸ್ಟೈಲ್ ಟ್ರೆಂಡ್ ಆಗಿದೆ. ಪುನೀತ್ ಹೇರ್ ಸ್ಟೈಲ್ ವಿಷಯ ಈಗ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ವರೆಗೂ ತಲುಪಿದೆ.

ತೆಲುಗಿನ ದಿನಪತ್ರಿಕೆಯಲ್ಲಿ ಪುನೀತ್ ಅವರ ಹೊಸ ಹೇರ್ ಸ್ಟೈಲ್ ಬಗ್ಗೆ ಸುದ್ದಿ ಬಂದಿದೆ. ಈ ಮೂಲಕ ಟಾಲಿವುಡ್ ಮಂದಿಗೆ ಸಹ ವಿಷಯ ತಲುಪಿದೆ. ತೆಲುಗು ಪ್ರೇಕ್ಷಕರು ಪುನೀತ್ ಅವರ ಸ್ಟೈಲ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಹೊಸ ಹೇರ್ ಸ್ಟೈಲ್ ಗೆ ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ವಿಶೇಷ ಅಂದರೆ ಅಪ್ಪು ರೀತಿ ನಿರ್ದೇಶಕ ಪವನ್ ಒಡೆಯರ್ ಕೂಡ ಅದೇ ಶೈಲಿಯ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೀರೋ, ಡೈರೆಕ್ಟರ್ ಇಬ್ಬರು ಒಂದೇ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಇಂದಿನಿಂದ ಈ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ. ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ.

ಹೊಸ ಸಿನಿಮಾಗಾಗಿ ಬದಲಾಯಿತು ಪುನೀತ್ ಹೇರ್ ಸ್ಟೈಲ್

A article came in telugu news pepar about Puneeth Rajkumar new hairstyle.

ಇನ್ನು 'ಬಾಹುಬಲಿ' ಸೇರಿದಂತೆ ಟಾಲಿವುಡ್ ನಲ್ಲಿ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗೆ ಸಾಹಸ ನಿರ್ದೇಶಕ ಪೀಟರ್ ಹೈನ್ಸ್ ಈ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದ್ದು ಪ್ರಿಯಾಂಕ ಜ್ವಾಲಕರ್ ಪುನೀತ್ ಗೆ ಜೊತೆಯಾಗಿದ್ದಾರೆ. ಪ್ರಿಯಾಂಕ ಜ್ವಾಲಕರ್ ಮೂಲತಃ ಮಹಾರಾಷ್ಟ್ರದ ಅನಂತಪುರದ ಹುಡುಗಿ, ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕ ತೆಲುಗಿನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. ಉಳಿದಂತೆ ಸಿನಿಮಾದ ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಬಿ ಸರೋಜ ದೇವಿ ಸಹ ನಟಿಸುತ್ತಿದ್ದಾರೆ.

ಅಪ್ಪು ಚಿತ್ರಕ್ಕೆ ಫೈಟ್ ಹೇಳಿಕೊಡುತ್ತಾರೆ 'ಬಾಹುಬಲಿ' ಖ್ಯಾತಿಯ ಸಾಹಸ ನಿರ್ದೇಶಕ

English summary
A article came in telugu news pepar about Puneeth Rajkumar new hairstyle. Puneeth Rajkumar did new hairstyle for his new movie. The movie directed by pawan wodeyar and produced by rockline venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada