»   » ಲವ್ವೆಲ್ಲಾ ಸುಳ್ಳಲ್ಲ, ಎಲ್ಲಾರ ಪ್ರೀತೀನೂ ನಿಜವಲ್ಲ!

ಲವ್ವೆಲ್ಲಾ ಸುಳ್ಳಲ್ಲ, ಎಲ್ಲಾರ ಪ್ರೀತೀನೂ ನಿಜವಲ್ಲ!

Posted By:
Subscribe to Filmibeat Kannada

ಈ ಹಿಂದೆ ಶಿವಗಂಗಾ, ಸಿನಿಮಾ ಅಲ್ಲ ರಿಯಲ್ ಸ್ಟೋರಿ ಎಂಬ ಚಿತ್ರಗಳನ್ನು ನಿರ್ದೇಶಿದ್ದ ರಾಜೀವ್ ಕೃಷ್ಣ ಗಾಂಧಿ ಈಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. 'ಲವ್ವೆಲ್ಲಾ ಸುಳ್ಳಲ್ಲ' ಎಂಬ ಹೆಸರಿನ ಈ ಚಿತ್ರವನ್ನು ಸಂಜಯ್ ಸೌಭಾಗ್ಯ ಹಾಗೂ ಗೋಪಾಲಕೃಷ್ಣ ನಿರ್ಮಿಸುತ್ತಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ನಂದಿಬೆಟ್ಟ, ಚಿಂತಾಮಣಿ ಮೊದಲಾದ ಸ್ಥಳಗಳಲ್ಲಿ ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರಣ ನಡೆದಿದ್ದು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲೆಂದೇ ಚಿತ್ರ ತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಈ ಚಿತ್ರ ಆರಂಭಿಸಿದಾಗಿನಿಂದ ಏನೇನಾಯಿತೆಂಬುದನ್ನು ನಿರ್ದೇಶಕ ರಾಜೀವ್ ಕೃಷ್ಣ ಹಂಚಿಕೊಂಡರು. [ಪರಭಾಷೆಯಲ್ಲಿ 'ಉಗ್ರಂ'ಗೆ ಡಿಮ್ಯಾಂಡೋ ಡಿಮ್ಯಾಂಡ್]

kannada movie Lovella Sullalla

"ನಾನು ಆಸೆಪಟ್ಟು ಮಾಡಿದ ಸಿನಿಮಾ 'ಶಿವಗಂಗಾ' ಇನ್ನೂ ಬಿಡುಗಡೆಯಾಗಿಲ್ಲ. ಇನ್ನೊಂದು ಸಿನಿಮಾ ನಿಂತೇ ಹೋಯಿತು. ಆದರೂ ಹೆದರದೆ ಮತ್ತೊಂದು ಕಥೆ ಮಾಡಿ ಮಂಜುನಾಥ ಬಾಬು, ಮೋಹನ್, ನಾರಾಯಣಸ್ವಾಮಿ ಹಾಗೂ ನಾನು ಸೇರಿಕೊಂಡು ಕೇವಲ ರು.5 ಲಕ್ಷದಲ್ಲಿ ಈ ಸಿನಿಮಾ ಮುಗಿಸಬೇಕೆಂದು ಪ್ರಾರಂಭಿಸಿದೆವು....[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಅದೇ ಸಮಯದಲ್ಲಿ ಟಿ.ವಿ.ಕಾರ್ಯಕ್ರಮವೊಂದರಲ್ಲಿ ನನ್ನನ್ನು ನೋಡಿದ ಬಾಲ ಸ್ನೇಹಿತರಾದ ಗೋಪಾಲಕೃಷ್ಣ ನನ್ನ ನಂಬರ್ ಪತ್ತೆ ಹಚ್ಚಿ ಕರೆಸಿಕೊಂಡರು. ಆಗ ಅವರಿಗೆ ಈ ಸಿನಿಮಾ ಬಗ್ಗೆ ಹೇಳಿದಾಗ ಅದ್ದೂರಿಯಾಗಿಯೇ ಮಾಡೋಣ ಎಂದು ಒಪ್ಪಿದರು. ಅವರ ಅಕ್ಕನವರಾದ ಸೌಭಾಗ್ಯ ಅವರೇ ಪೂರ್ತಿ ಹಣ ನೀಡಿದರು" ಎಂದು ಹೇಳಿದ ರಾಜೀವ್ ಕೃಷ್ಣ ಚಿತ್ರದ ಬಗ್ಗೆಯೂ ಹೇಳಿಕೊಂಡರು.

ಕಾಮಿಡಿ, ಲವ್, ಸೆಂಟಿಮೆಂಟ್ ಸಮಾನವಾಗಿರುವ ತ್ರಿಕೋನ ಪ್ರೇಮ ಕಥೆಯಿದು. ನಿಜವಾದ ಪ್ರೇಮ ಯಾವುದು, ಕೃತಕ ಪ್ರೇಮ ಯಾವುದು ಅಂತ ತಿಳಿಸುವ ಒಂದು ಚಿಕ್ಕ ಪ್ರಯತ್ನ. ಮಿಲನ್ ಎಂಬ ಹೊಸ ಹುಡುಗನ ಜೊತೆ ಪೂರ್ಣಿಮಾ ಹಾಗೂ ಶ್ರೀಪ್ರಿಯಾ ನಾಯಕಿರಾಗಿ ನಟಿಸಿದ್ದಾರೆ. ಸರಿಸುಮಾರು ರು60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ 26 ದಿನಗಳ ಕಾಲ ರಾಜ್ಯದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂಬುದಾಗಿ ನಿರ್ದೇಶಕರ ವಿವರ ನೀಡಿದರು.

ನಿರ್ಮಾಪಕಿ ಸೌಭಾಗ್ಯ ಅವರು ಮಾತನಾಡಿ ನನ್ನ ಸಹೋದರ ಗೋಪಾಲಕೃಷ್ಣ ಹಾಗೂ ರಾಜೀವ್ ಕೃಷ್ಣ ಬಾಲ್ಯ ಸ್ನೇಹಿತರು. ಆತ ಶಾಲಾದಿನಗಳಲ್ಲಿ ನಾನು ಡೈರೆಕ್ಟರ್ ಆಗುತ್ತೇನೆ ಅಂತ ಹೇಳಿದ್ದನ್ನು ಕೇಳಿ ನಗುತ್ತಿದ್ದೆವು. ಈಗ ಅವನು ನಿಜವಾಗ್ಲೂ ಡೈರೆಕ್ಟರ್ ಆಗಿದ್ದಾನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಾಯಕ-ನಾಯಕಿಯರು ಹೊಸ ಹುಡುಗರಾದರೂ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.

ಗೋಪಾಲಕೃಷ್ಣ ಮಾತನಾಡುತ್ತ ಸಿನಿಮಾ ಸೇರುತ್ತೇನೆ ಅಂದಾಗ ನಾನೂ ಆತನನ್ನು ಬಹಳ ಸಾರಿ ಬೈದಿದ್ದೆ. ಸಿನಿಮಾ ಬೇಡವೆಂದು ದೂರವಿದ್ದ ನಮ್ಮನ್ನು ಸಿನಿಮಾದತ್ತ ಆತ ಕರೆತಂದಿದ್ದಾನೆ ಎಂದು ಹೇಳಿಕೊಂಡರು. ನಾಯಕ ಮಿಲನ್ ಕೋಲಾರದ ಹುಡುಗ, ನಾಯಕಿಯರಲ್ಲೊಬ್ಬಳಾದ ಪೂರ್ಣಿಮಾಗೆ ಇದು 2ನೇ ಚಿತ್ರ.

"ತುಂಟ ಹುಡುಗಿ, ಪ್ರೀತಿ ಅಂದ್ರೆ ಟೈಂಪಾಸ್ ಅಂತಿದ್ದವಳು ನಿಧಾನವಾಗಿ ಲವ್ ಗೆ ಜಾರುತ್ತಾಳೆ. ಆಕೆಯ ಲವ್ ಕೊನೆಗೆ ಸಿಗುತ್ತೋ ಇಲ್ಲವೋ ಅನ್ನೋದೇ ನನ್ನ ಪಾತ್ರದ ವಿಶೇಷ" ಎಂದು ಪೂರ್ಣಿಮಾ ಹೇಳಿಕೊಂಡರು. ಇನ್ನೊಬ್ಬ ನಾಯಕ ಶ್ರೀಪ್ರಿಯಾಗೆ ಇದು 4ನೇ ಚಿತ್ರ, ಆದರೆ ಇನ್ನೂ ಯಾವುದೂ ಬಿಡುಗಡೆಯಾಗಿಲ್ಲ.

ಡ್ಯಾನಿಯಲ್, ಎಲ್.ಎನ್.ಗೂಚಿ ಈ ಚಿತ್ರಕ್ಕೆ ಸಂಗೀತವಿದೆ. ಪ್ರಸಾದ್ ಛಾಯಾಗ್ರಹಣ, ಕಥೆ, ಚಿತ್ರಕಥೆ, ಸಂಭಾಷಣೆ, ರಾಜೀವ್ ಕೃಷ್ಣ ಸದ್ಯ ಚಿತ್ರದ ಎಡಿಟಿಂಗ್ ನಡೆಯುತ್ತಿದ್ದು ಮುಂದಿನ ತಿಂಗಳು ಧ್ವನಿಸುರುಳಿ ಬಿಡುಗಡೆ ಮಾಡುವ ಪ್ಲಾನ್ ಚಿತ್ರ ತಂಡದ್ದು.

English summary
A different love story Lovella Sullalla is all set to release soon directed by Rajeev Krishna Gandhi. The movie shooting held at Kolar, Chikkaballapur, Nandi Hills and Chintamani.
Please Wait while comments are loading...