»   » 'ಆ ದಿನಗಳು' ಚೇತನ್ ಜೊತೆ ಸಾಧುಕೋಕಿಲಾ ಮಗನ ಎಂಟ್ರಿ

'ಆ ದಿನಗಳು' ಚೇತನ್ ಜೊತೆ ಸಾಧುಕೋಕಿಲಾ ಮಗನ ಎಂಟ್ರಿ

Written By:
Subscribe to Filmibeat Kannada

ಸದ್ಯ 'ನೂರೊಂದು ನೆನಪು' ಚಿತ್ರದಲ್ಲಿ ನಟಿಸಿರುವ ಚೇತನ್, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಮಧ್ಯೆ ಸೈಲಾಂಟ್ ಆಗಿ ಮತ್ತೊಂದು ಹೊಸ ಚಿತ್ರವನ್ನ ಶುರು ಮಾಡಿದ್ದಾರೆ.

ಹೌದು, ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ನಿರ್ದೇಶಕ ಮಹೇಶ್ ಬಾಬು ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.

A Dinagalu Fame chetan Starrer new movie start

ಈಗ ಅಧೀಕೃತವಾಗಿ ಪಕ್ಕಾ ಆಗಿದ್ದು, ಇತ್ತೀಚೆಗೆ ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಕ್ಲಾಪ್ ಮಾಡಿ, ಚಾಲನೆ ಕೊಟ್ಟಿದ್ದಾರೆ.[ಮಹೇಶ್ ಬಾಬು ಹೊಸ ಚಿತ್ರಕ್ಕೆ ಹೊಸ ಸಂಗೀತ ನಿರ್ದೇಶಕ, ಯಾರವರು?]

A Dinagalu Fame chetan Starrer new movie start

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಮಹೇಶ್ ಬಾಬು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಲತಾ ಹೆಗಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

A Dinagalu Fame chetan Starrer new movie start

ಚೇತನ್ ಮತ್ತು ಲತಾ ಜೊತೆಗೆ ಅಚ್ಯುತ್ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ರವಿಶಂಕರ್ ಗೌಡ, ಸಾಧು ಕೋಕಿಲ, ಪ್ರಶಾಂತ್ ಸಿದ್ಧಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

A Dinagalu Fame chetan Starrer new movie start

ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಸಾಧು ಕೋಕಿಲ ಅವರ ಮಗ ಸುರಾಗ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಮೈಸೂರಿನ ಸುತ್ತಾಮುತ್ತಾ 40 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

English summary
‘Aa Dinagalu’ Chetan signed another film with successful director Mahesh Babu in Kannada. and also Suraag is son of the Kannada actor-director-musician Sadhu Kokila, is making his debut as a music composer with Director Mahesh Babu's new movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada