For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಕಡೆಯಿಂದ ಬಂದ ದಿಢೀರ್ ಸುದ್ದಿ ಇದು.!

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಕಡೆಯಿಂದ ಒಂದು ದಿಢೀರ್ ಸುದ್ದಿ ಬಂದಿದೆ. ಅದು 'ಅವರ ವೈಯುಕ್ತಿಕ ವಿಚಾರದ ಬಗ್ಗೆ ಇರಬಹುದಾ?' ಅಂತ ನಿರೀಕ್ಷೆ ಮಾಡಬೇಡಿ. ಯಾಕಂದ್ರೆ, ಪರ್ಸನಲ್ ಲೈಫ್ ಹಾಗೂ ಮದುವೆ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಅಂತ ಯಶ್ ಈಗಾಗಲೇ ಹೇಳಿದ್ದಾರೆ.

  ಹಾಗಾದ್ರೆ, ಅವರ ಅಡ್ಡದಿಂದ ಬಂದಿರುವ ಸುದ್ದಿ ಆದರೂ ಏನು ಅಂದ್ರೆ 'ಸಿನಿಮಾ'.! [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

  ಹೌದು, ಯಶ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೆರಡು ವರ್ಷ ಪುರುಸೊತ್ತು ಇಲ್ಲದೇ ಇದ್ದರೂ, ನೂತನ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರ ಡೀಟೇಲ್ ರಿಪೋರ್ಟ್ ಇಲ್ಲಿದೆ. ಓದಿರಿ....

  ಯಶ್ ಕೈಯಲ್ಲಿದೆ ಎರಡು ಸಿನಿಮಾ

  ಯಶ್ ಕೈಯಲ್ಲಿದೆ ಎರಡು ಸಿನಿಮಾ

  ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈಯಲ್ಲಿ ಎರಡು ಸಿನಿಮಾಗಳಿವೆ. 'ಸಂತು Straight Forward' ಹಾಗೂ 'KGF'. ಈ ಎರಡು ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗುವ ಮುನ್ನವೇ ಹೊಸ ಚಿತ್ರಕ್ಕೆ ಯಶ್ ಜೈ ಎಂದಿದ್ದಾರೆ. ಯಾವುದು ಆ ಸಿನಿಮಾ ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಯಾವುದು ಆ ಸಿನಿಮಾ.?

  ಯಾವುದು ಆ ಸಿನಿಮಾ.?

  ಯಶ್ ಒಪ್ಪಿಕೊಂಡಿರುವ ಹೊಸ ಚಿತ್ರದ ಹೆಸರು 'ರಾಣಾ'

  ನಿರ್ದೇಶಕರು ಯಾರು.?

  ನಿರ್ದೇಶಕರು ಯಾರು.?

  'ಗೆಳೆಯ', 'ಬಿರುಗಾಳಿ', 'ಭಜರಂಗಿ', 'ವಜ್ರಕಾಯ' ಮತ್ತು 'ಮಾರುತಿ 800' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ನೃತ್ಯ ಸಂಯೋಜಕ ಎ.ಹರ್ಷ, 'ರಾಣಾ' ಸಿನಿಮಾಗೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

  ಯಶ್ - ಹರ್ಷ ಸಮಾಗಮದಲ್ಲಿ ಮೊದಲ ಸಿನಿಮಾ

  ಯಶ್ - ಹರ್ಷ ಸಮಾಗಮದಲ್ಲಿ ಮೊದಲ ಸಿನಿಮಾ

  ಹರ್ಷ ನೃತ್ಯ ಸಂಯೋಜನೆಯಲ್ಲಿ ಯಶ್ ಸ್ಟೆಪ್ ಹಾಕಿರಬಹುದು. ಆದ್ರೆ, ಅವರ ನಿರ್ದೇಶನದಲ್ಲಿ ಯಶ್ ಅಭಿನಯಿಸಲು ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ.

  'ರಾಣಾ' ಚಿತ್ರಕ್ಕೆ ಹರ್ಷ ಕಥೆ

  'ರಾಣಾ' ಚಿತ್ರಕ್ಕೆ ಹರ್ಷ ಕಥೆ

  'ರಾಣಾ' ಚಿತ್ರಕ್ಕೆ ಎ.ಹರ್ಷ ಕಥೆ, ಚಿತ್ರಕತೆ, ನಿರ್ದೇಶನದ ಜೊತೆಗೆ ನೃತ್ಯ ಸಂಯೋಜನೆಯನ್ನೂ ಮಾಡಲಿದ್ದಾರೆ.

  ಅದ್ಧೂರಿ ಮೇಕಿಂಗ್ ಪಕ್ಕಾ

  ಅದ್ಧೂರಿ ಮೇಕಿಂಗ್ ಪಕ್ಕಾ

  ಯಶ್ ನಟನೆ ಹಾಗೂ ಎ.ಹರ್ಷ ನಿರ್ದೇಶನ ಎಂದ್ಮೇಲೆ ಆಕ್ಷನ್, ಸೆಂಟಿಮೆಂಟ್, ಅದ್ಭುತವಾದ ಹಾಡುಗಳು, ಲೊಕೇಶನ್ ಎಲ್ಲವೂ ಇದ್ದಿದ್ದೇ.

  ನಿರ್ಮಾಪಕರು ಯಾರು.?

  ನಿರ್ಮಾಪಕರು ಯಾರು.?

  ಈ ಹಿಂದೆ 'ನಂದ ಲವ್ಸ್ ನಂದಿತಾ', 'ಭಾಗ್ಯದ ಬಳೆಗಾರ', 'ಮರಿ ಟೈಗರ್' ಸಿನಿಮಾಗಳನ್ನು ನಿರ್ಮಿಸಿದ್ದ ಸಿಂಹಾದ್ರಿ ಪ್ರೊಡಕ್ಷನ್ಸ್ ಸಂಸ್ಥೆಯ ರಮೇಶ್ ಕಶ್ಯಪ್ 'ರಾಣಾ' ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

  ಯಶ್ ಹುಟ್ಟುಹಬ್ಬದಂದು ಮುಹೂರ್ತ

  ಯಶ್ ಹುಟ್ಟುಹಬ್ಬದಂದು ಮುಹೂರ್ತ

  ಮುಂದಿನ ವರ್ಷದ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬದಂದು (ಜನವರಿ 8, 2017) 'ರಾಣಾ' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

  English summary
  Choreographer cum Director A.Harsha is all set to direct Kannada Actor Yash in his next 'Rana'. The movie will be produced by Ramesh Kashyap of Simhadri Productions and will be launched on Yash's Birthday next year (Jan 8th, 2017)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X