»   » ಮೇ 1 'ಜೆ ಕೆ' ಜೀವನದಲ್ಲಿ ಮಹತ್ವವಾದ ದಿನ

ಮೇ 1 'ಜೆ ಕೆ' ಜೀವನದಲ್ಲಿ ಮಹತ್ವವಾದ ದಿನ

Posted By:
Subscribe to Filmibeat Kannada
ಜೆಕೆ ಹುಟ್ಟುಹಬ್ಬದ ದಿನ ಅವರಿಗೆ ಕರಾಳ ರಾತ್ರಿ ಆಗಲಿದೆ | Filmibeat Kannada

ಜೆ ಕೆ ಕನ್ನಡ ಕಿರುತೆರೆಯಲ್ಲಿ ತನ್ನ ಅಭಿನಯದ ಮೂಲಕ ಇತಿಹಾಸವನ್ನ ಬರೆದ ನಟ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ರಿಯಾಲಿಟಿ ಶೋ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡ ನಟ ಜೆಕೆ ಅವರ ಜೀವನದಲ್ಲಿ ಮೇ1 ತುಂಬಾ ಸ್ಪೆಷಲ್ ದಿನ. ಸಾಕಷ್ಟು ಕಾರಣಗಳಿಂದ ಆ ದಿನ ವಿಶೇಷವಾಗಿದ್ದು ಮೇ1 ನೇ ತಾರೀಖಿಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ.

ಹೌದು ಮೇ1 ಜಯರಾಂ ಕಾರ್ತಿಕ್ ಹುಟ್ಟುಹಬ್ಬದ ದಿನ ಅಷ್ಟೇ ಅಲ್ಲ ಅದೇ ದಿನ ಜೆಕೆ ಅಭಿನಯದ ಎರಡು ಸಿನಿಮಾಗಳ ವಿಶೇಷ ಕಾರ್ಯಕ್ರಮಗಳು ಅಂದೇ ನಡೆಯುತ್ತಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ಜೆಕೆ ಮತ್ತು ಅನುಪಮ ಗೌಡ ಅಭಿನಯದ 'ಆ ಕರಾಳ ರಾತ್ರಿ' ಚಿತ್ರದ ಟ್ರೇಲರ್ ಮೇ1 ರಂದು ಬಿಡುಗಡೆ ಆಗುತ್ತಿದೆ. ಚಿತ್ರತಂಡ ತಮ್ಮ ಸಿನಿಮಾ ನಾಯಕನ ಹುಟ್ಟುಹಬ್ಬಕ್ಕೆ ನೀಡುತ್ತಿರುವ ಕೊಡುಗೆ ಇದಾಗಿದೆ.

ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ

A Karala Ratri movie trailer is being released on May 1.

ಇನ್ನು ನಾಗೇಂದ್ರ ಅರಸ್ ನಿರ್ದೇಶನ ಮಾಡಿರುವ 'ಮೇ1' ಚಿತ್ರದ ಆಡಿಯೋ ಬಿಡುಗಡೆ ಜೆಕೆ ಹುಟ್ಟುಹಬ್ಬದಂದೆ ನಡೆಯುತ್ತಿರುವುದು ವಿಶೇಷ. ಮೇ1 ಸಿನಿಮಾಗೆ ಸತೀಶ್ ಬಾಬು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾ ತಂಡಗಳು ಜಯರಾಂ ಕಾರ್ತಿಕ್ ಹುಟ್ಟುಹಬ್ಬಕ್ಕಾಗಿ ವಿಶೇಷ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದೆ.

A Karala Ratri movie trailer is being released on May 1.

ಬಿಗ್ ಬಾಸ್ ನಿಂದ ಹೊರಬಂದ ನಂತರ ಜೆಕೆ ಕೈತುಂಬಾ ಅವಕಾಶಗಳಿದ್ದು ಕನ್ನಡ ಮಾತ್ರವಲ್ಲದೆ ಬಾಲಿವುಡ್ ಚಿತ್ರದಲ್ಲಿಯೂ ಅಭಿನಯ ಮಾಡುತ್ತಿದ್ದಾರೆ. 'ಪುಷ್ಪ ಐ ಹೇಟ್ ಟಿಯರ್ಸ್' ಎನ್ನುವ ಹಿಂದಿ ಸಿನಿಮಾದಲ್ಲಿ ಜಯರಾಂ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Kannada actor JK starrer May 1st kannada movie audio release is being held on May1st and A Karala Ratri movie trailer is being released on May 1.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X