For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಪುನೀತ್ ಗೆ ಧ್ವನಿ ನೀಡುತ್ತಿದ್ದಾರೆ ಲೆಜೆಂಡರಿ ಗಾಯಕ ಎಸ್ ಪಿ ಬಿ

  |
  ಮಾಯಾಬಜಾರ್ ಚಿತ್ರದಲ್ಲಿ ಹಾಡಲಿದ್ದಾರೆ ಲೆಜೆಂಡರಿ ಗಾಯಕ | MAYA BAZAAR | SPB | FILMIBEAT KANNADA

  ಎಸ್ ಪಿ ಬಾಲಸುಭ್ರಮಣ್ಯಂ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ. ದಕ್ಷಿಣ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಜೊತೆಗೆ ಉತ್ತಮ ಭಾರತದ ಅನೇಕ ಭಾಷೆಗಳಲ್ಲಿ ದಾಖಲೆಯ ಹಾಡು ಹಾಡಿರುವ ಲೆಜೆಂಡರಿ ಗಾಯಕ ಎಸ್ ಪಿ ಬಿ. ವಿಶೇಷ ಅಂದರೆ ಎಸ್ ಪಿ ಬಿ ಇದುವರೆಗೂ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧ್ವನಿ ನೀಡಿಲ್ಲ.

  168ನೇ ಚಿತ್ರಕ್ಕೆ ಅದೃಷ್ಟದ ಗಾಯಕರನ್ನ ಆಯ್ಕೆ ಮಾಡಿದ ರಜನಿಕಾಂತ್!168ನೇ ಚಿತ್ರಕ್ಕೆ ಅದೃಷ್ಟದ ಗಾಯಕರನ್ನ ಆಯ್ಕೆ ಮಾಡಿದ ರಜನಿಕಾಂತ್!

  ಆದರೀಗ ಅಪ್ಪು ಮತ್ತು ಎಸ್ ಪಿ ಬಿ ಕಾಂಬಿನೇಶನ್ ನೋಡುವ ಅವಕಾಶ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಹೌದು, ಇದೆ ಮೊದಲ ಬಾರಿಗೆ ಪುನೀತ್ ಹೆಜ್ಜೆ ಹಾಕುವ ಹಾಡಿಗೆ ಎಸ್ ಪಿ ಬಾಲಸುಭ್ರಮಣ್ಯಂ ಹಾಡುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ತುಂಬಾ ವಿಶೇಷ.

  ಮಾಯಾಬಜರ್ ಸಿನಿಮಾದಲ್ಲಿ ಪುನೀತ್ ಡ್ಯಾನ್ಸ್

  ಮಾಯಾಬಜರ್ ಸಿನಿಮಾದಲ್ಲಿ ಪುನೀತ್ ಡ್ಯಾನ್ಸ್

  ಎಸ್ ಪಿ ಬಿ ಹಾಡುತ್ತಿರುವುದು ಪುನೀತ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮಾಯಾಬಜಾರ್ ಚಿತ್ರಕ್ಕೆ. ನಿರ್ದೇಶಕ ರಾಧಕೃಷ್ಣ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಿದು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂ

  ಯೋಗರಾಜ್ ಭಟ್ ಸಾಹಿತ್ಯ-ಎಸ್ ಪಿ ಬಿ ಗಾಯನ

  ಯೋಗರಾಜ್ ಭಟ್ ಸಾಹಿತ್ಯ-ಎಸ್ ಪಿ ಬಿ ಗಾಯನ

  ಪುನೀತ್ ಹೆಜ್ಜೆ ಹಾಕುತ್ತಿರುವ ಈ ಸಿನಿಮಾದ ಹಾಡಿಗೆ ಎಸ್ ಪಿ ಬಿ ಧ್ವನಿಯಾಗುತ್ತಿದ್ದಾರೆ. ಚಿತ್ರದ ಈ ಹಾಡು ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆಯಂತೆ. ಈ ಹಾಡಿಗೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬರುತ್ತಿದೆ.

  ಜನವರಿಗೆ ಈ ಹಾಡು ರಿಲೀಸ್

  ಜನವರಿಗೆ ಈ ಹಾಡು ರಿಲೀಸ್

  ಎಸ್ ಪಿ ಬಿ ಮತ್ತು ಪುನೀತ್ ಕಾಂಬಿನೇಷನ್ ನ ಈ ಹಾಡಿನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷೆಯ ಈ ಹಾಡಿನ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಹೌದು, ಚಿತ್ರದ ಲಿರಿಕಲ್ ವಿಡಿಯೋ ಇದೇ ತಿಂಗಳು 17ಕ್ಕೆ ಬಿಡುಗಡೆ ಆಗುತ್ತಿದೆ.

  ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ ಎಸ್ ಪಿ ಬಿಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ ಎಸ್ ಪಿ ಬಿ

  ಪಿ ಆರ್ ಕೆ ಬ್ಯಾನರ್ ನ ಎರಡನೆ ಸಿನಿಮಾ

  ಪಿ ಆರ್ ಕೆ ಬ್ಯಾನರ್ ನ ಎರಡನೆ ಸಿನಿಮಾ

  ಮಾಯಾಬಜಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಎರಡನೆ ಸಿನಿಮಾ ಇದಾಗಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವಿಸಿಷ್ಟ ಸಿಂಹ, ಪ್ರಕಾಶ್ ರಾಜ್, ಸುಧಾರಾಣಿ, ಚೈತ್ರಾ ರಾವ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಇದೆ. ಬಾರಿ ನಿರೀಕ್ಷೆ ಮೂಡಿಸಿರುವ ಮಾಯಾಬಜಾರ್ ಮುಂದಿನ ತಿಂಗಳು ತೆರೆ ಬರುತ್ತಿದೆ.

  English summary
  A Legendary singer SP Balasubrahmanyam first time voice for Power star Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X