Don't Miss!
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬದುಕಿದ್ದಾಗ ಸಾವಿರಾರು ಜೀವಗಳಿಗೆ ನೆರವಾದ ಅಪ್ಪು, ಅಗಲಿದ ಮೇಲೂ ಸೇವೆ ಮುಂದುವರೆಸಿದ್ದಾರೆ! ಹೇಗೆ?
ಪುನೀತ್ ರಾಜ್‌ಕುಮಾರ್ ಇದ್ದಾಗಲೂ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿದ್ದರು. ಅಪ್ಪು ಅಗಲಿದ ಬಳಿಕವೂ ತಮ್ಮ ಸೇವೆ ಮುಂದುರೆಸಿದ್ದಾರೆ.
ಅಪ್ಪು, ಸ್ವರ್ಗದಿಂದಲೂ ಪರೋಕ್ಷವಾಗಿ ತಮ್ಮ ಸೇವೆ ಮುಂದುವರೆಸಿದ್ದಾರೆ, ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ, ಇಂದು (ಜನವರಿ 06) ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತಿಯೊಬ್ಬರು ಕೇವಲ ಒಂದು ಗಂಟೆಯಲ್ಲಿ ನೂರು ಅಪ್ಪು ಚಿತ್ರಗಳನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ತಮ್ಮ ತುತ್ತಿನ ಚೀಲ ತುಂಬಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಹಾವೇರಿ ಸಮ್ಮೇಳನ ಉದ್ಘಾಟನೆಯಾಗಿದ್ದು ಮಳಿಗೆಗಳು ಸಹ ಇಂದು ಬೆಳಿಗ್ಗೆಯೇ ಕಾರ್ಯಾರಂಭ ಮಾಡಿವೆ. ಮಳಿಗೆಗಳು ವ್ಯಾಪಾರಕ್ಕೆ ಮುಕ್ತಗೊಂಡ ಕೇವಲ ಒಂದು ಗಂಟೆಯಲ್ಲಿ ಪುರುಷೋತ್ತಮ ಹಿರೇಮಠ ಹೆಸರಿನ ವ್ಯಾಪಾರಿಯೊಬ್ಬರು ಸುಮಾರು 100 ಅಪ್ಪು ಅವರ ಪ್ರೇಂ ಹೊಂದಿದ ಚಿತ್ರಗಳನ್ನು ಮಾರಾಟ ಮಾಡಿದ್ದಾರೆ.
ಇಂದೂ ಸೇರಿದಂತೆ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇನ್ನೂ ಮೂರು ದಿನಗಳ ಕಾಲ ಪುರುಷೋತ್ತಮ ಹಿರೇಮಠ ಅವರು ತಮ್ಮ ಮಳಿಗೆಯಲ್ಲಿ ಅಪ್ಪು ಅವರ ಚಿತ್ರವಿರುವ ಪ್ರೇಮ್‌ಗಳನ್ನು ಮಾರಾಟ ಮಾಡಲಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ನೂರು ಭಾವಚಿತ್ರ ಮಾರಾಟವಾಗಿರುವುದು ಅಪ್ಪು ಅವರ ಬಗ್ಗೆ ಜನರಿಗಿರುವ ಪ್ರೀತಿ, ಗೌರವಕ್ಕೆ ಉದಾಹರಣೆ. ಅಪ್ಪು ಅವರು ಅಗಲಿದ ಬಳಿಕವೂ ಹಲವರ ಜೀವನ ನಿರ್ವಹಣೆಗೆ ದಾರಿಯಾಗಿದ್ದಾರೆ.
ಅಪ್ಪು ಅವರ ಹಿರಿಮೆಗೆ ಇದೊಂದೆ ಉದಾಹರಣೆಯಲ್ಲ, ಅಪ್ಪು ಅವರ ಸಮಾಧಿ ಸ್ಥಳವಾದ ಕಂಠೀರವ ಬಳಿಯೂ ಸಹ ಹಲವರು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲಿಯೂ ಸಹ ಅಪ್ಪು ಅವರ ಭಾವಚಿತ್ರಗಳು, ಟೀ-ಶರ್ಟ್‌ಗಳು, ಸಮಾಧಿಗೆ ಭೇಟಿ ಕೊಡುವವರು ಕೊಂಡೊಯ್ಯಲು ಹೂವು ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲರಿಗೂ ಕೈತುಂಬಾ ವ್ಯಾಪಾರ, ಜೇಬಿನ ತುಂಬ ಹಣ. ಹೂ ಕಟ್ಟಿ ಮಾರುವ ಮಹಿಳೆಯರು, ಮುದುಕಿಯರು ತಮ್ಮ ಜೀವನ ನಿರ್ವಣೆಗೆ ನೆರವಾದ ಅಪ್ಪುವನ್ನು ನೆನಯದ ದಿನವಿಲ್ಲ.

ಅಪ್ಪು ಅವರ ಸಮಾಧಿಗೆ ಭೇಟಿ ಕೊಡುವ ಜನರನ್ನು ಗುರಿಯಾಗಿಟ್ಟುಕೊಂಡೆ ಕಂಠೀರವ ಸ್ಟುಡಿಯೋದ ಸುತ್ತ ವ್ಯಾಪಾರ ವಲಯವೇ ಆರಂಭವಾಗಿಬಿಟ್ಟಿದೆ. ಟೀ-ಸ್ಟಾಲ್‌ಗಳು, ಹೋಟೆಲ್‌ಗಳು, ಬಟ್ಟೆ ಅಂಗಡಿಗಳು ಇನ್ನೂ ಹಲವು ತಲೆ ಎತ್ತಿವೆ. ಎಲ್ಲವೂ ಅಪ್ಪು ಮಹಿಮೆ.
ಆನೆ ಇದ್ದರೂ ಸಾವಿರ, ಹೋದರು ಸಾವಿರ ಎಂಬಂತೆ. ಅಪ್ಪು ಇದ್ದಾಗಲೂ ಸಾವಿರಾರು ಜನರಿಗೆ ಸಹಾಯ ಮಾಡಿದ್ದರು. ಅಪ್ಪು ಅಗಲಿದ ಬಳಿಕವೂ ಒಂದಲ್ಲ ಒಂದು ರೀತಿ ಹಲವಾರು ಜನರ ಜೀವನಕ್ಕೆ ದಾರಿಯಾಗಿದ್ದಾರೆ.
ಅಪ್ಪು ಅವರ ಮಹಾನತೆ ಅಡಗಿರುವುದು ಈ ರೀತಿಯ ಕಾರ್ಯಗಳಲ್ಲಿ. ಬಾಕ್ಸ್ ಆಫೀಸ್ ಕಲೆಕ್ಷನ್ ಗಳಲ್ಲಿ, ಹೆಚ್ಚು ಸಂಖ್ಯೆಯ ಅಭಿಮಾನಿಗಳನ್ನು ಹೊಂದುವಲ್ಲಿ, ದುಬಾರಿ ಕಾರುಗಳನ್ನು ಖರೀದಿಸುವುದಲ್ಲಿ ಅಲ್ಲ. ಅಪ್ಪು ಅವರ ವ್ಯಕ್ತಿತ್ವದ ಅಘಾದತೆಯ ಮುಂದೆ ಕುಬ್ಜರಾದವರು ಅಸೂಯೆಯಿಂದ ಆಡಿರುವ, ಆಡುವ ಕ್ಲುಲ್ಲಕ ಮಾತುಗಳಿಗೆಲ್ಲ ಪ್ರತಿಕ್ರಿಯಿಸುವುದು ಬಿಟ್ಟು ಅಪ್ಪು ಆಶಯದಂತೆ ಕಲಾ ಪ್ರೀತಿ, ಸಮಾಜ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುವುದನ್ನು ಅವರ ಅಭಿಮಾನಿಗಳು ತುರ್ತಾಗಿ ಪಾಲಿಸಬೇಕಾಗಿದೆ.