For Quick Alerts
  ALLOW NOTIFICATIONS  
  For Daily Alerts

  ಜೈಲಿನಲ್ಲಿದ್ದಾಗ ಗನ್‌ಮ್ಯಾನ್ ವಾಪಸ್ ಪಡೆಯಲಾಗಿದೆ: ನಟ ಚೇತನ್ ಆರೋಪ

  |

  'ಆ ದಿನಗಳು' ಖ್ಯಾತಿಯ ನಟ ಚೇತನ್ ವಿವಾದಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲವು ತಿಂಗಳ ಹಿಂದೆ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾಗಿ ಮಾಡಿದ್ದ ಒಂದು ಟ್ವೀಟ್‌ನಿಂದ ಪೊಲೀಸರು ಚೇತನ್‌ರನ್ನು ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯ ಚೇತನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಇದೀಗ ಚೇತನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ, ತಮಗೆ ನೀಡಿದ್ದ ಗನ್‌ಮ್ಯಾನ್ ಅನ್ನು ಪೊಲೀಸರು ಹಿಂಪಡೆದಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.

  ಜೈಲ್‌ನಿಂದ ಬಿಡುಗಡೆಗೊಂಡ ಬಳಿಕ ಅವರಿಗೆ ನೀಡಲಾಗಿದ್ದ ಗನ್​ಮ್ಯಾನ್ ಅನ್ನು ವಾಪಸ್ ಪಡೆಯಲಾಗಿದೆ. ಈ ಕಾರಣಕ್ಕಾಗಿ ನಟ ಚೇತನ್ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್‌ ರನ್ನುಆ ದಿನಗಳು ಚೇತನ್ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತಾ ಜೈಲಿನಲ್ಲಿ ಇರುವಾಗ ನನಗೆ ನೀಡಿದ್ದ ಗನ್‌ಮ್ಯಾನ್ ಅನ್ನು ವಾಪಾಸ್ ಪಡೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನಟ ಚೇತನ್‌ರನ್ನು ಅಮೆರಿಕಾಗೆ ಗಡಿಪಾರು ಮಾಡಲು ಸಿದ್ಧತೆ! ನಟ ಚೇತನ್‌ರನ್ನು ಅಮೆರಿಕಾಗೆ ಗಡಿಪಾರು ಮಾಡಲು ಸಿದ್ಧತೆ!

   ಚೇತನ್ ಗನ್‌ಮ್ಯಾನ್ ವಾಪಸ್

  ಚೇತನ್ ಗನ್‌ಮ್ಯಾನ್ ವಾಪಸ್

  " ನನ್ನ ಗನ್‌ಮ್ಯಾನ್ ಅನ್ನು ತೆಗೆದು ಹಾಕಿದ್ದಾರೆ. ನಾನು ಜೈಲಿನಲ್ಲಿ 6 ದಿನ ಇದ್ದೆ. ಆಗ ತೆಗೆದು ಹಾಕಿದ್ದಾರೆ. ಇವತ್ತೂ ಕೂಡ ಬಂದಿಲ್ಲ. ನಾಲ್ಕೂವರೆ ವರ್ಷ, ಗೌರಿ ತೀರಿಕೊಂಡ ಬಳಿಕ ಗನ್‌ಮ್ಯಾನ್ ಬಂದಿದ್ದರು. ಈಗ ನಮಗೆ ಗನ್‌ಮ್ಯಾನ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ." ಎಂದು ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

   ಕಾನೂನು ಪ್ರಕಾರವೇ ಹೋರಾಟ

  ಕಾನೂನು ಪ್ರಕಾರವೇ ಹೋರಾಟ

  "ಕಮಿಷನರ್ ಅವರು ನಿಮ್ಮ ಮನೆ ಮುಂದೆ ಬೀಟ್ ಪೊಲೀಸ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಏನೇನಿದೆ ಅದನ್ನು ನಾವು ನಮ್ಮ ಕಡೆಯಿಂದ ಮಾಡುತ್ತೇವೆ. ಗನ್‌ಮ್ಯಾನ್ ಬಗ್ಗೆ ಎಡಿಜಿಪಿ ಸೆಕ್ಯೂರಿಟಿ ಬಗ್ಗೆ ಮಾತಾಡಬೇಕು. ನಮಗೆ ಇದರಲ್ಲಿ ವೈಯಕ್ತಿಕ ದ್ವೇಷವಿಲ್ಲವೆಂದು ಹೇಳಿದ್ದಾರೆ. ಕಾನೂನು ಪ್ರಕಾರ ನಾನು ಯಾವ ರೀತಿ ಹೋರಾಟ ಮಾಡಬೇಕೋ ಹಾಗೇ ಹೋರಾಟವನ್ನು ಮುಂದುವರೆಸುತ್ತೇನೆ." ಎಂದು ನಟ ಚೇತನ್ ಹೇಳಿದ್ದಾರೆ.

   ನನ್ನ ಬಳಿ ಒಸಿಐ ಕಾರ್ಡ್‌ ಇದೆ

  ನನ್ನ ಬಳಿ ಒಸಿಐ ಕಾರ್ಡ್‌ ಇದೆ

  "ಓವರ್‌ಸೀನ್ ಸಿಟಿಜನ್‌ಶಿಪ್ ಆಫ್ ಇಂಡಿಯಾವನ್ನು ಭಾರತ ಸರ್ಕಾರವೇ ನನಗೆ ನೀಡಿದೆ. ನಾನು ಒಸಿಐ ಕಾರ್ಡ್ ಹೋಲ್ಡರ್. ಮತ ಹಾಕುವ ಹಾಗೂ ಚುನಾವಣೆಗೆ ನಿಲ್ಲುವ ಹಕ್ಕನ್ನು ಬಿಟ್ಟು ಒಸಿಐ ಕಾರ್ಡ್ ಹೋಲ್ಡರ್ ಅಂದಮೇಲೆ ಭಾರತೀಯ ನಾಗರೀಕರಿಗೆ ಏನು ಹಕ್ಕಿದೆ ಅದೆಲ್ಲವೂ ಸಿಗುತ್ತೆ. ಮತ ಹಾಕುವ ಆಸಕ್ತಿನೂ ಇಲ್ಲ. ಮತವನ್ನೂ ಹಾಕಿಲ್ಲ. ಚುನಾವಣೆಗೆ ನಿಲ್ಲುವ ಆಸಕ್ತಿನೂ ಇಲ್ಲ. ಅದನ್ನೂ ಮಾಡಿಲ್ಲ" ಎನ್ನುತ್ತಾರೆ ಚೇತನ್.

   ನಮ್ಮ ತಾತಾನೂ ಫ್ರೀಡಂ ಫೈಟರ್

  ನಮ್ಮ ತಾತಾನೂ ಫ್ರೀಡಂ ಫೈಟರ್

  "ನಾನು ಕಾನೂನಿಗೆ ವಿರುದ್ಧವಾಗಿ ನಡೆದಿಲ್ಲ. ಈ ಕಾನೂನಿಗೆ 65- 70 ವರ್ಷದ ಇತಿಹಾಸವಿದೆ. ನಮ್ಮ ಪೂರ್ವಿಕರು ಇಲ್ಲಿ ಬಾಳಿ ಬದುಕಿದ್ದಾರೆ. ನಮ್ಮ ತಾತ ಫ್ರೀಡಂ ಫೈಟರ್ ಆಗಿದ್ದರು. ನಮ್ಮ ಅಜ್ಜಿಗೆ ಇಂದಿಗೂ ಪೆನ್ಷನ್ ಬರುತ್ತೆ. ನಮ್ಮ ಅಪ್ಪ-ಅಮ್ಮ ಕೂಡ ಮೆಡಿಕಲ್ ಮಾಡಿರುವುದು ಕರ್ನಾಟಕದಿಂದಲೇ. ನನಗೂ ಆರ್ಥಿಕ ಶಕ್ತಿ, ಶೈಕ್ಷಣಿಕ ಶಕ್ತಿ ಸಿಕ್ಕಿದೆ ಅಂದರೆ, ಅದು ಕರ್ನಾಟಕದಿಂದಲೇ ಸಿಕ್ಕಿರುವುದು." ಎಂದು ಚೇತನ್ ಹೇಳಿದ್ದಾರೆ.

  English summary
  Aa dinagalu Chetan unhappy after his ganman removed while in jail. He didn't viloleted Indian law said in media.
  Saturday, March 5, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X