»   » 'ಬೇಬಿ ಡಾಲ್' ಆದ್ಯಾಗೆ ಉಪ್ಪಿ ಜೊತೆ ಆಕ್ಟ್ ಮಾಡೋ ಚಾನ್ಸ್ ಸಿಕ್ತು.!

'ಬೇಬಿ ಡಾಲ್' ಆದ್ಯಾಗೆ ಉಪ್ಪಿ ಜೊತೆ ಆಕ್ಟ್ ಮಾಡೋ ಚಾನ್ಸ್ ಸಿಕ್ತು.!

Posted By:
Subscribe to Filmibeat Kannada
Sa Re Ga Ma Pa Baby Doll Aadya shared screen with Upendra in Home Minister movie

'ಜೀ ಕನ್ನಡ' ವಾಹಿನಿಯ ಮೂಲಕ ಪರಿಚಿತವಾದ ಆದ್ಯಾ, ಬೇಬಿ ಡಾಲ್ ಆದ್ಯಾ ಎಂದೇ ಖ್ಯಾತಿ. ಈ ಮುದ್ದಾದ ಹುಡುಗಿಯ ಕ್ಯೂಟ್ ಲುಕ್, ಆ ಮಾತು ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ. ಇಷ್ಟು ದಿನ ಕಿರುತೆರೆಯಲ್ಲಿ ಕಮಾಲ್ ಮಾಡ್ತಿದ್ದ ಈ ಪುಟ್ಟ ಪೋರಿ ಈಗ ಸಿನಿಮಾಗಳಲ್ಲಿಯೂ ಸಖತ್ ಮಿಂಚುತ್ತಿದ್ದಾರೆ.

'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

ಸದ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ 'ಭೀಮಸೇನಾ ನಳಮಹರಾಜ' ಎಂಬ ಸಿನಿಮಾದಲ್ಲಿ ಆದ್ಯಾ ನಟಿಸುತ್ತಿದ್ದಾರೆ. ಇದರ ಜೊತೆಗೆ ನಟ ಉಪೇಂದ್ರ ಜೊತೆ ಕೂಡ ಆದ್ಯಾ ತೆರೆ ಹಂಚಿಕೊಂಡಿದ್ದಾರೆ. ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಚಿತ್ರದ ಒಂದು ಪಾತ್ರದಲ್ಲಿ ಆದ್ಯಾ ಅಭಿನಯಿಸುತ್ತಿದ್ದಾರೆ.

Aadya shared screen with Upendra in 'Home Minister'

'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ಆದ್ಯಾ ನಟಿಸಿರುವ ಮೇಕಿಂಗ್ ಪೋಟೋವೊಂದು ಇದೀಗ ಹೊರಬಿದ್ದಿದೆ. ಉಪ್ಪಿ ಜೊತೆ ಸಖತ್ ಕ್ಯೂಟ್ ಆಗಿ ಸ್ಕೂಲ್ ಯೂನಿಫಾರಂನಲ್ಲಿ ಆದ್ಯಾ ಕಾಣಿಸಿಕೊಂಡಿದ್ದಾರೆ.

ಬಿಗ್ ಸ್ಕ್ರೀನ್ ಮೇಲೆ ಬೇಬಿ ಡಾಲ್ ಆದ್ಯಾ ತುಂಟಾಟ ಶುರು!

ಅಂದ್ಹಾಗೆ, 'ಹೋಮ್ ಮಿನಿಸ್ಟರ್' ಸಿನಿಮಾದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕಥೆ ಇಲ್ಲ. ಗಂಡನಿಗೆ ಹೆಂಡತಿಯೇ ಹೋಮ್ ಮಿನಿಸ್ಟರ್ ಆಗಿರುತ್ತಾರೆ ಎಂಬ ಕಾನ್ಸೆಪ್ಟ್ ಮೇಲೆ ಚಿತ್ರದ ಕಥೆ ಇದೆಯಂತೆ. ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು, ಬಹುಭಾಷಾ ನಟಿ ವೇದಿಕಾ ನಾಯಕಿಯಾಗಿದ್ದಾರೆ.

English summary
'Sarigamapa' Contestant Baby Doll Aadya shared screen with Upendra in 'Home Minister' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada