For Quick Alerts
  ALLOW NOTIFICATIONS  
  For Daily Alerts

  ಶುರುವಾಗುವ ಮುನ್ನವೇ ಮುಗ್ಗರಿಸಿ ಬಿದ್ದ 'ರೋಬೋಟ್' ರಜನಿ!

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಕಂಗೆಟ್ಟಿದ್ದಾರೆ. 'ಲಿಂಗಾ' ಲಾಸ್ ಆಗಿದೆ. ವಿತರಕರು ಬೀದಿಗಿಳಿದಿದ್ದಾರೆ. ಸೋಲಿನ ಸುಳಿಯಿಂದ ಹೊರಬರುವುದಕ್ಕೆ ಮತ್ತೆ ರೋಬೋಟ್ ಚಿಟ್ಟಿಯಾಗಲು ರಜನಿ ನಿರ್ಧರಿಸಿದ್ದಾರೆ. ಅದಕ್ಕೆ ನಿರ್ದೇಶಕ ಶಂಕರ್ ಕೂಡ ಕೈ ಜೋಡಿಸಿದ್ದಾರೆ.

  ಇಡೀ ದೇಶಾದ್ಯಂತ 'ಎಂದಿರನ್-2' ಸಿನಿಮಾ ಸುದ್ದಿ ಮಾಡಲಿ ಅನ್ನುವ ಕಾರಣಕ್ಕೆ ಬಾಲಿವುಡ್ ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ ರನ್ನ ವಿಶೇಷ ಪಾತ್ರಕ್ಕೆ ಕರೆತರಬೇಕು ಅಂತ ರಜನಿ ಮತ್ತು ಶಂಕರ್ ಪ್ರಯತ್ನ ಪಟ್ಟಿದ್ದರು.

  ಹಿಂದೊಮ್ಮೆ ಸುದ್ದಿಯಾದಂತೆ ಆಮೀರ್ ಖಾನ್ ಜೊತೆ ಮಾತುಕತೆ ನಡೆಸುವುದಕ್ಕೆ ಶಂಕರ್ ಸಮಯ ಕೂಡ ನಿಗಧಿ ಮಾಡಿದ್ದರು. ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಆಮೀರ್ ಖಾನ್ ಜೊತೆ ಶಂಕರ್ ಮೀಟಿಂಗ್ ಮುಗಿದಿದೆ. ಫಲಿತಾಂಶ 'ನೆಗೆಟಿವ್' ಅನ್ನುವುದು ಬೇಸರದ ಸಂಗತಿ.

  'ಎಂದಿರನ್-2' ಸಿನಿಮಾದಲ್ಲಿ ನಟಿಸುವುದಕ್ಕೆ ಆಮೀರ್ ಖಾನ್ ಒಪ್ಪಿಕೊಂಡಿಲ್ಲ. ಹಿಂದಿ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ಆಮೀರ್ ಡೇಟ್ಸ್ ಫ್ರೀ ಇಲ್ಲ. ಆದ ಕಾರಣ ಕಾಲಿವುಡ್ ಕಡೆ ಮುಖ ಮಾಡೋಕೆ ಕಷ್ಟ ಅಂತ ಆಮೀರ್ ಅಂದು ಬಿಟ್ಟಿದ್ದಾರೆ. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು... ]

  ಆಮೀರ್ ಖಾನ್ ಹಿಂದೆ ಸರಿದಿರುವುದರಿಂದ ಅವರ ಜಾಗಕ್ಕೆ ಶಂಕರ್ ಯಾರನ್ನ ಕರೆ ತರುತ್ತಾರೆ ಅಂತ ಇನ್ನೂ ಡಿಸೈಡ್ ಮಾಡಿಲ್ಲ. ನಟಿ ಐಶ್ವರ್ಯ ರೈ ಕೂಡ ತಮ್ಮ ಕಾಲ್ ಶೀಟ್ ನ ಇನ್ನೂ ಕನ್ಫರ್ಮ್ ಮಾಡಿಲ್ಲ. ಮುಂದೇನಾಗುತ್ತೋ ಯಾರಿಗೂ ಗೊತ್ತಿಲ್ಲ!

  ಈ ಬಾರಿ ಹಿಟ್ ಕೊಡಲೇಬೇಕು ಅಂತ ತೀರ್ಮಾನಿಸಿರುವ 'ತಲೈವಾ' ರಜನಿಕಾಂತ್ ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. (ಏಜೆನ್ಸೀಸ್)

  English summary
  According to the latest report, Aamir Khan has cleared the air by saying that he will not be able to star in Superstar Rajinikanth's Enthiran 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X