»   » ಜನವರಿಯಲ್ಲಿ ಅಭಿನೇತ್ರಿ ಭಾಗ-2 ಶುರು..!?

ಜನವರಿಯಲ್ಲಿ ಅಭಿನೇತ್ರಿ ಭಾಗ-2 ಶುರು..!?

Posted By:
Subscribe to Filmibeat Kannada

ನೀವು ನಂಬುತ್ತೀರೋ...ಬಿಡುತ್ತೀರೋ...ಮಳೆ ಹುಡುಗಿ ಪೂಜಾ ಗಾಂಧಿ ನಟಿಸಿ, ನಿರ್ಮಿಸಿರುವ 'ಅಭಿನೇತ್ರಿ' ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಡಿಸೆಂಬರ್ ನಲ್ಲಿ ತೆರೆಗೆ ಬರುತ್ತದೆ ಕೂಡ. ಅಷ್ಟರಲ್ಲೇ ಪೂಜಾ ಮೇಡಂ, ಹೊಸ ಪ್ರಾಜೆಕ್ಟ್ ನ ಕೈಗೆತ್ತಿಕೊಂಡಿದ್ದಾರೆ.

ಬಿಡುಗಡೆಗೂ ಮುನ್ನವೇ 'ಅಭಿನೇತ್ರಿ' ಚಿತ್ರ ವಿವಾದಗಳಿಂದಲೇ ಹೆಸರುವಾಸಿಯಾಗಿದೆ. ಹೀಗಿರ್ಬೇಕಾದರೆ, 'ಅಭಿನೇತ್ರಿ' ಚಿತ್ರದಂತೆಯೇ ಮತ್ತೊಬ್ಬ ನಟೀಮಣಿಯ ಕಥೆಯನ್ನ ಇಟ್ಟುಕೊಂಡು ಪೂಜಾ ಗಾಂಧಿ ಸಿನಿಮಾ ನಿರ್ಮಿಸೋ ಪ್ಲಾನ್ ಮಾಡಿದ್ದಾರೆ.

Abhinetri part-2-1

ಬರೀ ಪ್ಲಾನ್ ಮಾತ್ರ ಅಲ್ಲ, ಈಗಾಗಲೇ ಈ ಚಿತ್ರದ ಪೂರ್ವ ತಯಾರಿ ಕೆಲಸಕ್ಕೆ ಚಾಲನೆ ಕೂಡ ಕೊಟ್ಟಿದ್ದಾರೆ. ''ಥೇಟ್ 'ಅಭಿನೇತ್ರಿ'ಯಂತೆಯೇ ಓರ್ವ ನಾಯಕಿಯ ಕಥೆ, ನನ್ನ ಮುಂದಿನ ಚಿತ್ರದಲ್ಲಿ ಇರಲಿದೆ'' ಅಂತ 'ಫಿಲ್ಮಿಬೀಟ್ ಕನ್ನಡ' ಗೆ ನಟಿ ಪೂಜಾ ಗಾಂಧಿ ತಿಳಿಸಿದ್ದಾರೆ. ['ಅಭಿನೇತ್ರಿ'ಯಲ್ಲಿ ನನ್ನ ಕಥೆಯೂ ಇದೆ - ಪೂಜಾಗಾಂಧಿ]

ಈ ಬಗ್ಗೆ ಪೂಜಾ ಗಾಂಧಿ, ''ಅಭಿನೇತ್ರಿ ತಂಡದ ಜೊತೆಗೆ ಮತ್ತೊಂದು ಸಿನಿಮಾ ಮಾಡುವುದರ ತಯಾರಿಯಲ್ಲಿದ್ದೀನಿ. ಇದು ಕೂಡ 'ಅಭಿನೇತ್ರಿ' ಮಾದರಿಯ ಕಥೆ. ಹೆಸರಾಂತ ನಾಯಕಿಯ ಸುತ್ತ ನಡೆಯುವ ಕಥೆ. ಇದಕ್ಕಾಗಿ ನಾನು ಬೇರೆಬೇರೆ ಲುಕ್ ಗಳನ್ನ ಟ್ರೈ ಮಾಡುತ್ತಿದ್ದೀನಿ. ತೂಕ ಕಡಿಮೆ ಮಾಡಿಕೊಳ್ಳಬೇಕು. ಹೇರ್ ಸ್ಟೈಲ್ ಬದಲಿಸಿಕೊಳ್ಳಬೇಕು. ಇದು ಅಭಿನೇತ್ರಿ ಚಿತ್ರಕ್ಕಿಂತ ಚಾಲೆಂಜಿಂಗ್ ಆಗಿರೋ ಪಾತ್ರ'', ಅಂತ 'ಫಿಲ್ಮಿಬೀಟ್ ಕನ್ನಡ'ಗೆ ವಿವರಿಸಿದ್ರು. ಹಾಗಾದ್ರೆ ಇದು 'ಅಭಿನೇತ್ರಿ' ಚಿತ್ರದ ಮುಂದುವರಿದ ಭಾಗವಾಗುತ್ತಾ, ಅಂದ್ರೆ ಪೂಜಾ ಗಾಂಧಿ ''ಸದ್ಯಕ್ಕೆ ಸಸ್ಪೆನ್ಸ್'' ಅಂದ್ರು.

Abhinetri part-2-2

ಜನವರಿಯಲ್ಲಿ ಸೆಟ್ಟೇರುವ ಈ ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಮಾಡದ ಪೂಜಾ, 'ನಟಿ'ಯ ಪಾತ್ರದಲ್ಲೇ ತೆರೆಮೇಲೆ ಮಿಂಚುವುದರಿಂದ ಅಭಿನೇತ್ರಿ-2 ಅಂತ ಹೆಸರಿಟ್ಟರೂ ಅಚ್ಚರಿಯಿಲ್ಲ. ಎಷ್ಟೇ ಆಗ್ಲಿ, ಪೂಜಾ, ನಟಿಸಿ, ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಅಭಿನೇತ್ರಿ' ನಿರ್ದೇಶಕ ಸತೀಶ್ ಪ್ರಧಾನ್ ಡೈರೆಕ್ಟರ್ ಅಲ್ವಾ..! [ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?]

'ಮಿನುಗುತಾರೆ ಕಲ್ಪನಾ' ಕಥೆಯನ್ನಿಟ್ಟುಕೊಂಡು ಸದ್ಯಕ್ಕೆ ಸುದ್ದಿ ಮಾಡುತ್ತಿರುವ ಪೂಜಾ, ಈ ಹೊಸ ಚಿತ್ರದಲ್ಲಿ ಮತ್ತಿನ್ಯಾವ ನಟಿಯನ್ನ ತೆರೆಮೇಲೆ ತರ್ತಾರೋ ಏನೋ...!? (ಫಿಲ್ಮಿಬೀಟ್ ಕನ್ನಡ)

English summary
Actress Pooja Gandhi of Mungaaru Male fame is currently in news for her new venture 'Abhinetri'. The movie 'Abhinetri' is all set to release in december. Meanwhile, Pooja Gandhi has already begun the pre-production work for her next venture. The Actress revealed that her next production will also have a story based on a Legendary Actress. The 'Abhinetri' crew will remain to continue for this new venture as well, says Pooja Gandhi in her interview with FilmiBeat kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada