For Quick Alerts
  ALLOW NOTIFICATIONS  
  For Daily Alerts

  ಪ್ರಾಣಾಪಾಯದಿಂದ 'ಹಳ್ಳಿ ಹೈದ' ರಾಜೇಶ್ ಪಾರು

  By Rajendra
  |

  ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಹಾಗೂ 'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಮೂಲಕ ಖ್ಯಾತರಾದ ರಾಜೇಶ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದನ ಪ್ರಭು ನಿರ್ದೇಶಿಸುತ್ತಿರುವ 'ಲವ್ ಈಸ್ ಪಾಯಿಸನ್ ಚಿತ್ರೀಕರಣ ವೇಳೆ ಸಂಭವಿಸಿದ ಘಟನೆಯಲ್ಲಿ ಅವರು ಪಾರಾಗಿದ್ದಾರೆ.

  ಯಲಹಂಕದ ಸಾತನೂರು ಬಳಿ 'ಲವ್ ಈಸ್ ಪಾಯಿಸನ್' ಚಿತ್ರದ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಖಳನಟ ಯತಿರಾಜು ಅವರು ಶ್ರೀಮಂತ ಮನೆತನದ ಹುಡುಗಿಯನ್ನು ಪ್ರೀತಿಸುತ್ತಿರುವ ರಾಜೇಶ್ ನನ್ನು ಅಪಹರಿಸುವ ದೃಶ್ಯವದು.

  ಆದರೆ ಕಾರಣಾಂತರಗಳಿಂದ ಯತಿರಾಜು ಚಿತ್ರೀಕರಣಕ್ಕೆ ಬಂದಿರಲಿಲ್ಲ. ಫೈಟ್ ಮಾಸ್ಟರ್ ವಿಕ್ರಂ ಅವರೇ ಈ ಪಾತ್ರವನ್ನು ಪೋಷಿಸುತ್ತಿದ್ದರು. ವೇಗವಾಗಿ ಬರುತ್ತಿದ್ದ ಟಾಟಾ ಸುಮೋದ ಚಿತ್ರೀಕರಣದ ವೇಳೆ ಅದು ಉರುಳಿ ಬಿದ್ದಿದೆ.

  ಟಾಟಾ ಸುಮೋದಲ್ಲಿದ್ದ ಒಂಬತ್ತು ಮಂದಿ ಸಹ ಕಲಾವಿದರಲ್ಲಿ ರಾಜೇಶ್ ಸಹ ಇದ್ದ. ರಾಜೇಶ್ ಸೇರಿದಂತೆ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಫೈಟ್ ಮಾಸ್ಟರ್ ವಿಕ್ರಂ ಅವರಿಗೆ ಗಂಭೀರವಾಗಿಯೇ ಗಾಯಗಳಾಗಿವೆ ಎನ್ನುತ್ತವೆ ಮೂಲಗಳು.

  ಟಾಟಾ ಸುಮೋ ರಸ್ತೆಯಲ್ಲಿ ಉರುಳಿ ಬಿದ್ದ ರಭಸಕ್ಕೆ ಗಾಜು ಪುಡಿಪುಡಿಯಾಗಿದ್ದು ಎಡಬದಿ ಸಂಪೂರ್ಣ ಜಜ್ಜಿದಂತಾಗಿದೆ. ಈ ಚಿತ್ರದಲ್ಲಿ ರಾಜೇಶ್ ಗೆ ಜೋಡಿಯಾಗಿರುವ ನಾಯಕಿ ಖುಷಿ. ಈ ಚಿತ್ರಕ್ಕೆ ರವಿಶಂಕರ್ ನಾಗ್ ಸಂಭಾಷಣೆ, ಕವಿರಾಜ್ ಸಾಹಿತ್ಯ, ಸಾಯಿಕಿರಣ್ ಸಂಗೀತ, ವೀನಸ್‌ಮೂರ್ತಿ ಛಾಯಾಗ್ರಹಣ, ಬಾಬುಖಾನ್ ಕಲೆ, ಶಂಕರ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸ ಈಶ್ವರ್ ಅವರ ಸಂಕಲನವಿದೆ.

  ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದ ಹೊಣೆಯನ್ನು ನಂದನ್‌ ಪ್ರಭು ಹೊತ್ತಿದ್ದಾರೆ. ತಾರಾಗಣದಲ್ಲಿ ರಾಜೇಶ್, ಖುಷಿ, ಧೋಹಿ, ಚಂದ್ರು, ಸಾಧುಕೋಕಿಲ, ಯತಿರಾಜ್, ಟೆನ್ನಿಸ್ ಕೃಷ್ಣ ಮುಂತಾದ ಕಲಾವಿದರಿದ್ದಾರೆ. (ಏಜೆನ್ಸೀಸ್)

  English summary
  'Jungle Jackie' fame Kannada actor Rajesh injured while shooting action sequence of his film 'Love is Poison' near Sathanur at Yelahanka on 3rd July. Rajesh is out of danger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X