Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'KD'ಗಾಗಿ ದಿನಕ್ಕೆ 10 ಕಿ.ಮೀ ಧ್ರುವ ಸರ್ಜಾ ರನ್ನಿಂಗ್: ಪ್ರೇಮ್ಸ್ ಪ್ಯಾನ್ಸ್ ಇಂಡಿಯಾ ಸಿನಿಮಾಗಾಗಿ ಭರ್ಜರಿ ತಯಾರಿ!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಒಂದಲ್ಲ ಎರಡೆರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆ ತಯಾರಿಯಲ್ಲಿದ್ದಾರೆ. 'ಮಾರ್ಟಿನ್' ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಇನ್ನೊಂದು ಕಡೆ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಅದುವೇ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಸಿನಿಮಾ 'KD'. ಸ್ಯಾಂಡಲ್‌ವುಡ್‌ನ ಶ್ರೀಮಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
'KD' ಸಿನಿಮಾದ ವಿಶೇಷತೆ ಏನು ಅಂದ್ರೆ, ಈ ಚಿತ್ರಕ್ಕಾಗಿ ಧ್ರುವ ಸರ್ಜಾ ಸಿಕ್ಕಾ ಪಟ್ಟೆ ತಯಾರಿ ನಡೆಸುತ್ತಿದ್ದಾರೆ. ಪಾತ್ರಗಳ ವಿಷಯಕ್ಕೆ ಬಂದ್ರೆ, ಧ್ರುವ ಸರ್ಜಾ ಬದಲಾಗುತ್ತಲೇ ಇರುತ್ತಾರೆ. ದೇಹದ ತೂಕ ಹೆಚ್ಚಿಸಿಕೊಳ್ಳುತ್ತಾರೆ. ದಿಢೀರನೇ ತೂಕ ಇಳಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲೂ ತೂಕ ಇಳಿಸಿಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು ನಡೆಸಿದ್ದಾರೆ.

'KD' ಧ್ರುವ ಸರ್ಜಾ ಕಸರತ್ತು
'KD' ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಧ್ರುವ ಸರ್ಜಾ ಸಿನಿಮಾ ಆರಂಭ ಆಗುವುದಕ್ಕೂ ಮುನ್ನ ಒಂದಿಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ತಮ್ಮ ದೇಹದಾಡ್ಯತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈ ಸಿನಿಮಾಗೆ ಈಗಾಗಲೇ ವರ್ಕ್‌ಔಟ್ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಜಿಮ್‌ನಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಧ್ರುವ ನಡೆಸುತ್ತಿರುವ ಕಸರತ್ತಿನ ಒಂದೊಂದೇ ಸುದ್ದಿ ಹೊರಬೀಳುತ್ತಲೇ ಇದೆ. ಈಗ ಆಕ್ಷನ್ ಪ್ರಿನ್ಸ್ ಕಸರತ್ತಿನ ವಿಡಿಯೋ ಒಂದು ಹೊರಬಿದ್ದಿದೆ.

ಪ್ರತಿದಿನ 10 ಕಿ.ಮೀ ರನ್ನಿಂಗ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರತಿದಿನ 10 ಕಿ.ಮೀ ರನ್ನಿಂಗ್ ಮಾಡುತ್ತಿದ್ದಾರೆ. 36 ದಿನಗಳ ಕಾಲ ನಿರಂತರವಾಗಿ ರನ್ನಿಂಗ್ ಮಾಡುತ್ತಲೇ ಇದ್ದಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಶ್ರಮ ಪಡುತ್ತಿದ್ದಾರೆ. ಸದ್ಯ ಧ್ರುವ ಸರ್ಜಾ ತೂಕ ಇಳಿಸಿಕೊಳ್ಳುವ ಸಲುವಾಗಿ 36 ದಿನಗಳಿಂದ ಪ್ರತಿದಿನ 10 ಕಿ.ಮೀ ರನ್ನಿಂಗ್ ಮಾಡುತ್ತಿದ್ದಾರೆ. ಟ್ರೆಡ್ ಮಿಲ್‌ನಲ್ಲಿ ಓಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

30 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂದ್ದ 'KD'
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'KD' ಸಿನಿಮಾದ ಮುಹೂರ್ತಕ್ಕೂ ಮುನ್ನವೇ ಸುಮಾರು 7 ಕೆಜಿ ತೂಕ ಇಳಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ 30 ದಿನಗಳಲ್ಲಿ 18 ಕೆಜಿ ತೂಕವನ್ನು ಇಳಿಸಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಈಗ 'ಮಾರ್ಟಿನ್' ಮುಗಿಸಿ ಕಂಪ್ಲೀಟ್ ಆಗಿ ಇದೇ ಸಿನಿಮಾಗೆ ಕಸರತ್ತು ನಡೆಸುತ್ತಿದ್ದಾರೆ. ಕಾಳಿದಾಸನಾಗಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದು, ಮಾಸ್ ಕಮ್ ಆಕ್ಷನ್ ಥ್ರಿಲ್ಲರ್ ಲುಕ್ ಕೊಳ್ಳಲಿದ್ದಾರೆ. ಸದ್ಯ ಇನ್ನೂ ಸಣ್ಣಗಾಗಿ, ಫಿಟ್ ಆಗಿ ತೆರೆಮೇಲೆ ಬರಲಿದ್ದಾರೆ. ಇದೇ ಕಾರಣಕ್ಕೆ ಫ್ಯಾನ್ಸ್ ಧ್ರುವ ಸರ್ಜಾರನ್ನು ಹೊಸ ಅವತಾರದಲ್ಲಿ ನೋಡುವುದಕ್ಕೆ ಕಾದು ಕೂತ್ತಿದ್ದಾರೆ.

ಇದೇ ವರ್ಷ 'ಮಾರ್ಟಿನ್' ಸಿನಿಮಾ ರಿಲೀಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸಿನಿಮಾ 'ಮಾರ್ಟಿನ್' ಕೂಡ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ. ನಿರ್ದೇಶಕ ಎ ಪಿ ಅರ್ಜುನ್ ಹಾಗೂ ಧ್ರುವ ಬಹಳ ವರ್ಷಗಳ ಬಳಿಕೆ ಮತ್ತೆ ಒಂದಾಗಿದ್ದಾರೆ. ಕಳೆದ ವರ್ಷವೇ ಮಾರ್ಟಿನ್ ಬಿಡುಗಡೆಯಾಗಬೇಕಿತ್ತು. ಆದ್ರೀಗ ಕಾರಣಾಂತರಗಳಿಂದ ಈ ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಧ್ರುವ ಹೇಗೆ ಶೈನ್ ಆಗುತ್ತಾರೆ ಅನ್ನೋದನ್ನು ನೋಡಬೇಕಿದೆ.