»   » ಇತಿಹಾಸ ನಿರ್ಮಿಸಿದ 'ವೀರ' ಮಾಲಾಶ್ರೀ

ಇತಿಹಾಸ ನಿರ್ಮಿಸಿದ 'ವೀರ' ಮಾಲಾಶ್ರೀ

Posted By:
Subscribe to Filmibeat Kannada

ಮೋಹಕ ತಾರೆಯಾಗಿ ಕನ್ನಡ ಸಿನಿರಸಿಕರ ಮನ ಗೆದ್ದಿದ್ದ ಮಾಲಾಶ್ರೀ ಈಗೇನಿದ್ದರೂ Action ಕ್ವೀನ್ ಆಗಿ ಮಾತ್ರ ಕಾಣಿಸುತ್ತಿದ್ದಾರೆ. ಶುಕ್ರವಾರ ತೆರೆಗೆ ಅಪ್ಪಳಿಸುತ್ತಿರುವ ಮಾಲಾಶ್ರೀ ಅವರ ಹೊಚ್ಚ ಹೊಸ ಚಿತ್ರ(?) ಹೊಸ ಇತಿಹಾಸ ನಿರ್ಮಿಸಿದೆ.

ಕಳೆದ ಮೂರು ವರ್ಷಗಳಿಂದ ಡಬ್ಬಾದಲ್ಲಿ ಕೂತಿದ್ದ ಸಿನಿಮಾವನ್ನು ಕಡೆಗೂ ಮಾಲಾಶ್ರೀ ಅವರ ಹಸ್ಬೆಂಡೂ ಕೋಟಿ ನಿರ್ಮಾಪಕ ರಾಮು ಅವರು ಭರ್ಜರಿಯಾಗಿ ರಿಲೀಸ್ ಮಾಡಿದ್ದಾರೆ. ಸರಿಯಾಗಿ ಲೆಕ್ಕಾಚಾರ ಹಾಕಿದ್ದಾರೆ ವೀರ ಚಿತ್ರ ಕರ್ನಾಟಕದಾದ್ಯಂತ ಸರಿ ಸುಮಾರು 158 ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ನಾಯಕಿ ಪ್ರಧಾನ ಚಿತ್ರವೊಂದು ಎಷ್ಟು ದೊಡ್ಡ ಪ್ರಮಾಣದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು ಎನ್ನಬಹುದು.

Action Queen Malashri's Veera creates History

ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಶುಭದಾಯಕವೂ ಹೌದು. ಮಾಲಾಶ್ರೀ ಅವರಿಗೆ ಕರ್ನಾಟಕದ ತುಂಬಾ ಫ್ಯಾನ್ ಇದ್ದಾರೆ. ಹೀಗಾಗಿ ಇಳಕಲ್, ಇಂಡಿ, ಗಜೇಂದ್ರಗಢ, ತಾಳಿಕೋಟೆ, ಮುದ್ದೇಬಿಹಾಳ, ಮಾಲಿಂಗಪುರ, ಲೋಕಾಪುರ, ಬಾದಾಮಿ, ಅಂಕಲಿ, ಕುಷ್ಟಗಿ, ಮಾನ್ವಿ, ಹಾರೋಗೆರೆ, ಗುಡೇದಗುಡ್ಡ, ಕರಟಗಿ ಸೇರಿದಂತೆ ಕರ್ನಾಟಕದ ಒಳನಾಡಿನಲ್ಲಿ ವೀರ ಆರ್ಭಟ ಕೇಳಿ ಬರುತ್ತಿದೆ.

ಎ. ಬಿ ಸೆಂಟರ್ ಗಳಲಿ ತೆರೆ ಕಂಡು ವಾರಗಳು ಕಳೆದ ಮೇಲೆ ಈ ಎಲ್ಲಾ ಪ್ರದೇಶಕ್ಕೆ ಕನ್ನಡ ಚಿತ್ರಗಳು ಬರುತ್ತಿದ್ದರಿಂದ ಸಿನಿ ಪ್ರೇಕ್ಷಕರಿಗೆ ಭಾರಿ ಬೇಸರವಾಗುತ್ತಿತ್ತು. ಈಗ ವೀರ ಇಲ್ಲಿ ಹಿಟ್ ಆದರೆ, ಮುಂದೆ ಎಲ್ಲಾ ಚಿತ್ರಗಳಿಗೂ ದೊಡ್ಡ ರಹದಾರಿ ಸಿಕ್ಕಿದ್ದಂತಾಗುತ್ತದೆ. ನಿರ್ಮಾಪಕ, ವಿತರಕ ಇಬ್ಬರೂ ಸೇಫ್ ಆಗುತ್ತಾರೆ. ಈ ಮಟ್ಟಿಗೆ ರಾಮು ಅವರ ಶ್ರಮ ಸಾರ್ಥಕವಾಗಿದೆ.

ಸುಮಾರು 630 ಕ್ಕೂ ಪ್ರದರ್ಶನ ಒಮ್ಮೆಗೆ ಆಗುತ್ತಿರುವುದು ಮಾಲಾಶ್ರೀ ಹಾಗೂ ರಾಮು ಅವರ ಪ್ರಯತ್ನ ಹಾಗೂ ಹುಮ್ಮಸ್ಸನ್ನು ಸೂಚಿಸುತ್ತದೆ. ಇದರ ಜೊತೆಗೆ ಇನ್ನೂ ಮಲ್ಟಿಪೆಕ್ಸ್ ಗಳ ಮಲ್ಟಿ ಸ್ಕ್ರೀನ್ ಗಳು ಸೇರಲಿದೆ. ಒಟ್ಟಾರೆ ಮಾಲಾಶ್ರೀ ಚಿತ್ರಕ್ಕೆ ಮತ್ತೆ ಮಾರ್ಕೆಟ್ ಓಪನ್ ಆಗಿದೆ.

ಇನ್ನೊಂದು ಸಂತಸದ ಸುದ್ದಿ ಗೂಗಲ್ ನಲ್ಲಿ ವೀರ ಬಗ್ಗೆ ತಡಕಾಡುತ್ತಿದ್ದಾಗ twitchfilm ಎಂಬ ಸಿನಿಮಾ ಆಧಾರಿತ ವೆಬ್ ತಾಣ ಸಿಕ್ಕಿತು. ಈ ತಾಣದ ಸ್ಥಾಪಕ, ಸಂಪಾದಕ ಕೆನಡಾದ ಟೊರೊಂಟೋದಿಂದ ಟಾಡ್ ಬ್ರೌನ್ ಅವರು ಮಾಲಾಶ್ರೀ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

English summary
Malashri popularly known as 'Action Queen' is back with a new film called Veera . This is not a new film, but a film which was started almost three years ago and lying in the cans. Now producer Ramu, Malashri's husband, creates histroy by releasing more than 158 theaters.
Please Wait while comments are loading...