»   » 'ಕಾಮೆಂಟ್' ಮಾಡಿದವರಿಗೆ ಡೆಡ್ಲಿ ಆದಿತ್ಯ ಕೊಟ್ರು ಖಡಕ್ ಉತ್ತರ!

'ಕಾಮೆಂಟ್' ಮಾಡಿದವರಿಗೆ ಡೆಡ್ಲಿ ಆದಿತ್ಯ ಕೊಟ್ರು ಖಡಕ್ ಉತ್ತರ!

Posted By:
Subscribe to Filmibeat Kannada

ನಟ ಆದಿತ್ಯ ಅಭಿನಯದ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಆದ್ರೆ, ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸೋಶಿಯಲ್ ಮಿಡಿಯಾದಲ್ಲಿ ಕೆಲವು ಕಾಮೆಂಟರ್ಸ್ ಆದಿತ್ಯ ಅವರ ವಿರುದ್ಧ ಕಾಮೆಂಟ್ ಮಾಡಿದ್ದರು.[ವಿಮರ್ಶೆ: ರೌಡಿಗಳನ್ನ ಕೊಂದು, 'ರೌಡಿಸಂ'ನ್ನ ಕೊಲ್ಲದ 'ಬೆಂಗಳೂರು ಅಂಡರ್ ವರ್ಲ್ಡ್' ]

ಆ ಕಾಮೆಂಟ್ ಗಳಿಗೆ ನಟ ಆದಿತ್ಯ ಕೂಡ ಖಡಕ್ ಉತ್ತರ ಕೊಟ್ಟಿದ್ದಾರೆ. ಅಂದ್ಹಾಗೆ, ಈ ಕಾಮೆಂಟ್ ಕಿಡಿ ಹುಟ್ಟಿಕೊಳ್ಳಲು ಕಾರಣ ಚಿತ್ರದಲ್ಲಿ ಆದಿತ್ಯ ಅವರು ಹಾಕಿರುವ ಒಂದು ಸ್ಪೆಷಲ್ ಗೆಟಪ್. ಯಾವುದು ಆ ಗೆಟಪ್? ಏನದು ಕಾಮೆಂಟ್ ಅಂತ ಮುಂದೆ ಓದಿ.....

ಮೊದಲು ಈ ಫೋಟೋ ನೋಡಿ!

'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ನಟ ಆದಿತ್ಯ ಅವರು ಕಾಣಿಸಿಕೊಳ್ಳುವ ಒಂದು ಸ್ಪೆಷಲ್ ಗೆಟಪ್ ಇದು. ಖಾಕಿ ತೊಟ್ಟು, ಕೈಯಲ್ಲಿ ಗನ್ ಹಿಡಿದು ಖಡಕ್ ಪೊಲೀಸ್ ಅವತಾರದಲ್ಲಿ ಜಬರ್ ದಸ್ತ್ ಎಂಟ್ರಿ ನೀಡುವ ಆದಿತ್ಯ ಅವರ ಈ ಗೆಟಪ್ ಈಗ ಚರ್ಚೆಯಾಗುತ್ತಿದೆ.

ಈ ಗೆಟಪ್ ಗೆ ಬಂದ ಕಾಮೆಂಟ್ ಏನು?

ಅಂದ್ಹಾಗೆ, ಈ ಗೆಟಪ್ ನೋಡಿದ ಕೆಲವು ಮಂದಿ ಸೋಶಿಯಲ್ ಮಿಡಿಯಾದಲ್ಲಿ ಆದಿತ್ಯ ಅವರು, ಬೇರೆ ನಟರ ಸ್ಟೈಲ್ ಕಾಪಿ ಮಾಡಿದ್ದಾರೆ ಎಂಬ ಕಾಮೆಂಟ್ ಗಳನ್ನ ಹಾಕಿದ್ದಾರೆ.

ಇದು 'ಗಬ್ಬರ್ ಸಿಂಗ್' ಕಾಪಿನಾ!

ಅಂದ್ಹಾಗೆ, 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ಆದಿತ್ಯ ಅವರ ಗೆಟಪ್ ಗೂ, ಮತ್ತು ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯದ 'ಗಬ್ಬರ್ ಸಿಂಗ್' ಗೆಟಪ್ ಗೂ ಸಾಮ್ಯತೆ ಇದೆ. ಹೀಗಾಗಿ, ಆದಿತ್ಯ 'ಗಬ್ಬರ್ ಸಿಂಗ್' ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನ ಕಾಮೆಂಟರ್ಸ್ ಮಾಡಿದ್ದರು.

ಆದಿತ್ಯ ಕೊಟ್ಟ ಖಡಕ್ ಉತ್ತರ!

ಕಾಮೆಂಟರ್ಸ್ ಗಳ ಕಾಮೆಂಟ್ ಖಡಕ್ ಆಗಿ ಉತ್ತರ ಕೊಟ್ಟಿರುವ ಆದಿತ್ಯ. ''ಕೆಲವರಿಗೆ ನನ್ನ ಉತ್ತರ!! 'ಗಬ್ಬರ್ ಸಿಂಗ್' ಕಾಪಿ ಮಾಡೋ ಅವಶ್ಯಕತೆ ನನಗೆ ಇಲ್ಲ. ಇದು ನಮ್ಮ ಇಂಡಸ್ಟ್ರಿಯ ಮೇರು ನಟರೊಬ್ಬರಿಗೆ ನೀಡುತ್ತಿರುವ ಟ್ರಿಬ್ಯೂಟ್'' ಎಂದು ಖಾರವಾಗಿ ಉತ್ತರಿಸಿದ್ದಾರೆ.

'ತೂಗುದೀಪ ಶ್ರೀನಿವಾಸ್'ಗೆ ಟ್ರಿಬ್ಯೂಟ್!

ಅಂದ್ಹಾಗೆ, ಪೊಲೀಸ್ ಗೆಟಪ್ ನಲ್ಲಿರುವ ಆದಿತ್ಯ ಅವರ ಎದೆಯ ಮೇಲೆ 'ತೂಗುದೀಪ' ಎಂಬ ಹೆಸರನ್ನ ಹಾಕಲಾಗಿದೆ. ಹೀಗಾಗಿ, ಇದು ಕನ್ನಡದ ಹಿರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರಿಗೆ ನೀಡಿರುವ ಟ್ರಿಬ್ಯೂಟ್ ಇದು.

ಚಿತ್ರದಲ್ಲಿ ಆದಿತ್ಯ ಪೊಲೀಸ್!

ಪಿ.ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಲ್ಲ. ಒಬ್ಬ ಭೂಗತ ಜಗತ್ತಿನ ಡಾನ್. ಆದ್ರೆ, ಸಂದರ್ಭವೊಂದರಲ್ಲಿ ಈ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.[ಆದಿತ್ಯ-ಸತ್ಯ ಜೋಡಿಯ 'ಬೆಂಗಳೂರು ಅಂಡರ್ ವರ್ಲ್ಡ್'ನ್ನ ಮೆಚ್ಚಿಕೊಂಡ ವಿಮರ್ಶಕರು!]

English summary
Kannada Actor Aditya Gives Reaction to Social Media Commenters. Who are Comment on Getup from 'Banglore Underworld' Movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada