For Quick Alerts
  ALLOW NOTIFICATIONS  
  For Daily Alerts

  ಚಿರಯುವಕ ಅನಿಲ್ ಕಪೂರ್ ಫಿಟ್‌ನೆಸ್ ರಹಸ್ಯ ಬಯಲು

  By Kiran B Hegde
  |

  ದೇವಾನಂದ್ ನಂತರ ಚಿರಯುವಕ ಪಟ್ಟಕ್ಕೆ ಬಾಲಿವುಡ್‌ನಲ್ಲಿ ಅನಿಲ್ ಕಪೂರ್‌ಗೆ ನಿಸ್ಸಂಶಯವಾಗಿ ಅರ್ಹ ವ್ಯಕ್ತಿ. 58 ವರ್ಷ ವಯಸ್ಸಾದರೂ 40ರ ಆಸುಪಾಸಿನ ಹುಡುಗನಂತೆ ಕಂಡುಬರುವ ಅನಿಲ್ ಕಪೂರ್ ಮಗಳು ಸೋನಂ ಪಕ್ಕ ನಿಂತರೆ ಅಣ್ಣನಂತೆ ಕಾಣ್ತಾರೆ.

  ಸಪೂರ ದೇಹದ ಅನಿಲ್ ಕಪೂರ್ ತಮ್ಮ ಆರೋಗ್ಯದ ಗುಟ್ಟನ್ನು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 'ಅಂತಾರಾಷ್ಟ್ರೀಯ ಸೈಕಲ್ ಮತ್ತು ಆರೋಗ್ಯ ಎಕ್ಸ್ಪೊ'ದಲ್ಲಿ ಬಯಲು ಮಾಡಿದ್ದಾರೆ. ಅದು ಏನೆಂದರೆ ಅನಿಲ್ ಕಪೂರ್ ವಾರಕ್ಕೆ ಆರು ದಿನ ವ್ಯಾಯಾಮ ಮಾಡ್ತಾರಂತೆ. ಯಾವಾಗಲೂ ಸೈಕ್ಲಿಂಗ್ ಮಾಡ್ತಾರಂತೆ. ಇದೇ ಅವರ ಚಿರಯೌವ್ವನದ ಗುಟ್ಟಂತೆ.

  2005ರಲ್ಲಿ 'ಮೈ ವೈಫ್ಸ್ ಮರ್ಡರ್' ಚಿತ್ರದ ಶೂಟಿಂಗ್‌ಗಾಗಿ ಸೈಕಲ್ ತುಳಿದಿದ್ದನ್ನು ಅನಿಲ್ ನೆನಪಿಸಿಕೊಂಡರು. ಇನ್ನೊಂದು ವಿಷಯ ಗೊತ್ತಾ ಅನಿಲ್ ಇಂದಿಗೂ ಪ್ರಯಾಣಕ್ಕಾಗಿ ಕಾರಿಗಿಂತ ಹೆಚ್ಚಾಗಿ ಸೈಕಲ್ ಉಪಯೋಗಿಸ್ತಾರೆ.

  "ನನಗೆ ಸೈಕ್ಲಿಂಗ್ ಎಂದರೆ ಯಾವಾಗಲೂ ಇಷ್ಟ. ಸೈಕಲ್ ತುಳಿದರೆ ನಾವು ಬೇಕಾದ್ದಲ್ಲಿಗೆ ಹೋಗಬಹುದು, ಜೊತೆಗೆ ಆರೋಗ್ಯವೂ ಉಳಿಯುತ್ತದೆ. ಕಳೆದ 9 ವರ್ಷಗಳಿಂದ ಪ್ರತಿದಿನವೂ ಸೈಕ್ಲಿಂಗ್ ಮಾಡುತ್ತಿದ್ದೇನೆ. ನನ್ನ ಹತ್ತಿರ ದೊಡ್ಡ ಕಾರ್‌ಗಳು ಇದ್ದವೂ ಸೈಕ್ಲಿಂಗ್ ಎಂದರೇ ನನಗೆ ಇಷ್ಟ" ಎಂದು ಹೇಳಿಕೊಂಡಿದ್ದಾರೆ.

  ಯಾವುದೇ ಸಿನಿಮಾ ಇರಲಿ, ಮಾಡುತ್ತಿರುವ ಪಾತ್ರದೊಳಗೆ ತೂರಿಕೊಳ್ಳುವ ಅನಿಲ್, ತಾವು ಸೈಕ್ಲಿಂಗ್ ಹವ್ಯಾಸ ಆರಂಭಿಸಿದ ಸಮಯವನ್ನು ಹೀಗೆ ಹೇಳಿಕೊಂಡಿದ್ದಾರೆ.

  "ಮೈ ವೈಫ್ಸ್ ಮರ್ಡರ್" ಸಿನಿಮಾದಲ್ಲಿ ಮಧ್ಯಮ ವರ್ಗದ ಯುವಕನ ಪಾತ್ರ ಮಾಡಿದ್ದೆ. ಆದ್ದರಿಂದ ಕಾರ್‌ನಲ್ಲಿ ತೆರಳಿದರೆ ಪಾತ್ರಕ್ಕೆ ಸರಿಯಾಗುವುದಿಲ್ಲ ಎಂದು ಸೈಕಲ್‌ನಲ್ಲಿ ಹೋಗುತ್ತಿದ್ದೆ."

  "ನನ್ನ ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಹೋಗಲು 1 ಗಂಟೆ 30 ನಿಮಿಷ ಬೇಕಾಗುತ್ತಿತ್ತು. ಆದರೆ, ಇದೇ ದಾರಿಯನ್ನು ಸೈಕಲ್‍‌ನಲ್ಲಿ 1 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತಿದ್ದೆ" ಎಂದು ತಿಳಿಸಿದ್ದಾರೆ.

  ಯುವಕರು ಜಿಮ್‌ಗೆ ಹೋಗಿ ಸಮಯ ವ್ಯರ್ಥ ಮಾಡುತ್ತಾರೆ. ಅದರ ಬದಲು ಸೈಕಲ್ ಮೇಲೆ ತಿರುಗಿದರೆ ಸಮಯವೂ ಉಳಿಯುತ್ತೆ ಆರೋಗ್ಯವೂ ಹೆಚ್ಚುತ್ತೆ. ಸೈಕ್ಲಿಂಗ್‌ ಅನ್ನು ನಗರದಲ್ಲಿ ಮಾತ್ರವಲ್ಲ, ಚಿಕ್ಕ ಪಟ್ಟಣ, ಗ್ರಾಮದಲ್ಲೂ ಸೈಕ್ಲಿಂಗ್‌ಗೆ ಉತ್ತೇಜನ ಸಿಗಬೇಕು ಎಂದು ಅನಿಲ್ ಹೇಳಿದ್ದಾರೆ.

  ಅನಿಲ್ ಕಪೂರ್‌ ಮಾತಿಗಾದರೂ ಬೆಲೆ ಕೊಟ್ಟು ಧೂಮ್ ಬೈಕ್ ಅಭಿಮಾನಿಗಳು ಸೈಕಲ್‌ನಲ್ಲ ವಾಲುತ್ತಾರಾ ನೋಡಬೇಕು.

  English summary
  Actor Anil Kapoor says he exercises six days a week. He peddles cycle everyday. It is the secret of his fitness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X