»   » ಸಾಹಸ ಮಾಡಲು ಹೋಗಿ ಕಣ್ಣಿಗೆ ಏಟು ಮಾಡಿಕೊಂಡ ನಟ ಅನಿರುದ್ಧ್

ಸಾಹಸ ಮಾಡಲು ಹೋಗಿ ಕಣ್ಣಿಗೆ ಏಟು ಮಾಡಿಕೊಂಡ ನಟ ಅನಿರುದ್ಧ್

Posted By:
Subscribe to Filmibeat Kannada

ಸಿನಿಮಾಗಳಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಕೊಂಚ ಎಡವಿದರೂ ಜೀವಕ್ಕೆ ಕುತ್ತು ಬರುತ್ತದೆ. ಮೊದಲೆಲ್ಲಾ ಫೈಟ್ ಶೂಟ್ ಇರುವ ಸಂದರ್ಭಗಳಲ್ಲಿ ಚಿತ್ರದ ನಾಯಕರ ಬದಲಿಗೆ ಡ್ಯೂಪ್ ಬಳಸುತ್ತಿದ್ದರು.

ಆದರೆ ಇತ್ತೀಚೆಗೆ ಚಿತ್ರದ ನಾಯಕರೇ ಸ್ವಲ್ಪ ರಿಸ್ಕ್ ತೆಗೆದುಕೊಂಡು ಸಾಹಸ ದೃಶ್ಯಗಳ ಶೂಟಿಂಗ್ ನಲ್ಲಿ ಖುದ್ದಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಪರಿಣಾಮ ಇತ್ತೀಚೆಗೆ ದಿಗಂತ್ ಅವರು ಕಣ್ಣಿಗೆ ಪೆಟ್ಟು ಮಾಡಿಕೊಂಡರು.[ಮತ್ತೆ ತೆರೆಯ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ಘರ್ಜನೆ]

ಇದೀಗ ನಟ ಅನಿರುದ್ಧ್ ಅವರು ಕೆನ್ನೆ ಮತ್ತು ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರ ಮಾರ್ಗದರ್ಶನದಲ್ಲಿ 'ರಾಜಾ ಸಿಂಹ' ಎಂಬ ಚಿತ್ರದ ಸಾಹಸ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ತಕ್ಷಣ ಅನಿರುದ್ಧ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂದೆ ಓದಿ.....

ಭಾನುವಾರ ನಡೆದ ಘಟನೆ

ಜುಲೈ 24 ಭಾನುವಾರದಂದು ಮೈಸೂರಿನ ದುದ್ದಗೆರೆಯಲ್ಲಿ 'ರಾಜಾ ಸಿಂಹ' ಚಿತ್ರದ ಸಾಹಸ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಂತಹ ಅವಘಡ ಸಂಭವಿಸಿದೆ.

ಆಯತಪ್ಪಿ ಕಣ್ಣಿಗೆ ಗಾಯ

ಮಳೆಯಲ್ಲಿ ಸಾಹಸ ದೃಶ್ಯದ ಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ, ಎದುರಿನ ಕಲಾವಿದ ಅನಿರುದ್ಧ್ ಅವರಿಗೆ ದೊಣ್ಣೆಯಿಂದ ಹೊಡೆಯುವ ದೃಶ್ಯದ ಚಿತ್ರೀಕರಣದ ವೇಳೆ ಆಯತಪ್ಪಿ ದೊಣ್ಣೆ ಅನಿರುದ್ಧ್ ಅವರ ಕೆನ್ನೆ ಮತ್ತು ಕಣ್ಣಿಗೆ ತಾಗಿ ಗಾಯ ಆಗಿದೆ.

ಚೇತರಿಸಿಕೊಳ್ಳುತ್ತಿರುವ ಅನಿರುದ್ಧ್

ಇದೀಗ ಸದ್ಯಕ್ಕೆ ನಟ ಅನಿರುದ್ಧ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೇ ಶೀಘ್ರದಲ್ಲೇ ಮತ್ತೆ 'ರಾಜಾ ಸಿಂಹ' ಸೆಟ್ ಗೆ ಹಾಜರಾಗಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿವೆ.

ನಿಖಿತಾ ನಾಯಕಿ

ನಿರ್ದೇಶಕ ರವಿ ರಾಮ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಸಿ.ಡಿ ಬಸಪ್ಪ ಅವರು ಬಂಡವಾಳ ಹೂಡುತ್ತಿದ್ದು, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.[ರಾಜ ಸಿಂಹನಿಗೆ ಸಿಂಹಿಣಿಯಾಗಿ ನಿಖಿತಾ ತುಕ್ರಲ್]

English summary
Kannada Actor Aniruddh ho recently seriously injured his eye during the shoot for his upcoming Kannada Movie 'Raja Simha'. Now he is recovering well.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada