»   » ಯಶ್ ಬದ್ಲು ಅನೀಶ್ 'ಮಾಂಜಾ' ಕೊಡ್ತಾರಂತೆ.!

ಯಶ್ ಬದ್ಲು ಅನೀಶ್ 'ಮಾಂಜಾ' ಕೊಡ್ತಾರಂತೆ.!

Posted By:
Subscribe to Filmibeat Kannada

'ನಮ್ ಏರಿಯಾದಲ್ ಒಂದಿನಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬೆಳಕಿಗೆ ಬಂದ ನಟ ಅನೀಶ್ ತೇಜೇಶ್ವರ್ ಅವರು ಯಾಕೋ ಅಷ್ಟಾಗಿ ಹಿಟ್ ಹೀರೋ ಎನಿಸಿಕೊಳ್ಳಲಿಲ್ಲ. 'ಪೊಲೀಸ್ ಕ್ವಾರ್ಟಸ್' ಕೊಂಚ ಮಟ್ಟಿಗೆ ಹಿಟ್ ಆಗಿದ್ದು ಬಿಟ್ಟರೆ, ತದನಂತರ ಯಾವುದೇ ಸಿನಿಮಾಗಳು ಅನೀಶ್ ಅವರಿಗೆ ಅಷ್ಟೊಂದು ಬ್ರೇಕ್ ಕೊಡಲಿಲ್ಲ.

ಹೋಗ್ಲಿ ತಿಂಗಳ ಹಿಂದೆ ತೆರೆಕಂಡ 'ಅಕಿರ' ಸಿನಿಮಾನಾದ್ರೂ ಅನೀಶ್ ಅವರಿಗೆ ಬ್ರೇಕ್ ಕೊಡುತ್ತೆ ಅನ್ಕೊಂಡ್ರೆ ಅದು ಸ್ವಲ್ಪ ಮಟ್ಟಿಗೆ ಯಶಸ್ವಿ ಆಯ್ತು. ಜೊತೆಗೆ ಈ ಚಿತ್ರದ ಮೂಲಕ ಅನೀಶ್ ಅವರು ಎಲ್ಲರ ಗಮನ ಸೆಳೆದಿದ್ದಂತೂ ಸತ್ಯ. ಈ ನಡುವೆ ಸಖತ್ ಚ್ಯೂಸಿ ಆದ ನಟ ಅನೀಶ್ ಅವರು ಬರೋಬ್ಬರಿ 45 ಕಥೆ ಬೇರೆ ಕೇಳಿದ್ದರಂತೆ.[ಬರೋಬ್ಬರಿ 46 ಕಥೆ ಕೇಳಿ 'ಓಕೆ' ಎಂದ್ರಾ 'ಈ' ನಟ ಮಹಾಶಯ]

ಯಾವುದು ಇಷ್ಟವಾಗದೇ ಇದ್ದಾಗ, ಕೊನೆಗೆ ತಮ್ಮ ಆಪ್ತ ಗೆಳೆಯ-ಗುರು ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮಾತಿನಂತೆ, ಅವರು ಆಯ್ಕೆ ಮಾಡಿದ ಕಥೆಯನ್ನು ಅನೀಶ್ ಅವರು ಒಪ್ಪಿಕೊಂಡಿದ್ದಾರೆ.

ಇದೀಗ ಆ ಕಥೆಗೆ ಟೈಟಲ್ ಕೂಡ ಇಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅನೀಶ್ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಯಾವುದು ಆ ಚಿತ್ರ.? ಯಾರು ನಿರ್ದೇಶಕರು, ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

46ನೇ ಕಥೆ ಒಪ್ಪಿಕೊಂಡ ಅನೀಶ್

ಬರೋಬ್ಬರಿ 45 ಕಥೆ ಕೇಳಿ, ಯಶ್ ಅವರ ಮಾತಿನಂತೆ 46ನೇ ಕಥೆಯನ್ನು ಸೆಲೆಕ್ಟ್ ಮಾಡಿಕೊಂಡಿರುವ ಅನೀಶ್ ಅವರು, ಮುಂದಿನ ಚಿತ್ರಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.['ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ]

ಟೈಟಲ್ ಏನು.?

ಅಂದಹಾಗೆ ಅನೀಶ್ ಅವರ ಹೊಸ ಚಿತ್ರಕ್ಕೆ 'ಮಾಂಜಾ' ಎಂದು ಹೆಸರಿಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ 'ಮಾಂಜಾ' ಚಿತ್ರ ಮುಹೂರ್ತ ನೆರವೇರಿಸಿಕೊಂಡು, ಚಿತ್ರೀಕರಣ ಆರಂಭಿಸಲಿದೆ.['ಫಿಲ್ಮಿಬೀಟ್' ವಿಶೇಷ; 'ಅಕಿರ' ನಾಯಕ ಅನೀಶ್ ಸಂದರ್ಶನ]

ಯಶ್ 'ಮಾಂಜಾ' ಕೊಡಲ್ವಾ.?

ಅಂದಹಾಗೆ ಈ ಮೊದಲು ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿರುವ ಹೊಸ ಚಿತ್ರಕ್ಕೆ 'ಮಾಂಜಾ' ಎಂದು ಹೆಸರಿಡಲಾಗಿದೆ ಎಂದು ಭಾರಿ ಗುಲ್ಲೆದ್ದಿತ್ತು. ಆದರೆ ಕೊನೆಗೆ ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಬಿದ್ದು, ಚಿತ್ರಕ್ಕೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಅಂತ ಹೆಸರಿಟ್ಟು, ಚಿತ್ರೀಕರಣ ಕೂಡ ಕೊನೆಯ ಹಂತದಲ್ಲಿದೆ.

ಯಶ್ ಮಾಡಬೇಕಿತ್ತು

ಇನ್ನು ಇದೀಗ ಅನೀಶ್ ಅವರು ಆಯ್ಕೆ ಮಾಡಿಕೊಂಡಿರುವ ಕಥೆಯನ್ನು ಯಶ್ ಅವರು ಮಾಡಬೇಕಾಗಿತ್ತು. ಆದರೆ ಸಮಯದ ಅಭಾವದ ಕಾರಣ, ಇದೀಗ ಯಶ್ ಬದ್ಲಾಗಿ ಅನೀಶ್ ಅವರು ಮಾಡುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ನಿರ್ದೇಶಕರು ಯಾರು.?

ಯಶ್ ಅವರ 'ಲಕ್ಕಿ' ಚಿತ್ರಕ್ಕೆ ನಿರ್ದೇಶನ ಮಾಡಿ, ನಿನಾಸಂ ಸತೀಶ್ ಅವರ 'ಕ್ವಾಟ್ಲೇ ಸತೀಶ' ಚಿತ್ರಕ್ಕೆ ಬಂಡವಾಳ ಹೂಡಿದ್ದ, ನಿರ್ಮಾಪಕ ಕಮ್ ನಿರ್ದೇಶಕ ಡಾ.ಸೂರಿ ಅವರು ಅನೀಶ್ ಅವರ 'ಮಾಂಜಾ' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 'ಅಕಿರ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಬಳಗವೇ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

English summary
Kannada Actor Anish Tejeshwar's next movie titled as 'Maanja'. Directed by Dr.Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada