twitter
    For Quick Alerts
    ALLOW NOTIFICATIONS  
    For Daily Alerts

    ತನ್ನ ವಾಹನವನ್ನು ರೋಗಿಗಳ ಉಪಯೋಗಕ್ಕೆ ಬಳಸಲು ನೀಡಿದ ನಟ

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ.

    Recommended Video

    Corona ರೋಗಿಗಳ ಸಹಾಯಕ್ಕೆ ನನ್ನದು ಅಳಿಲು ಸೇವೆ ಎಂದ Arun Gowda | Filmibeat Kannada

    ಇದೀಗ ಕನ್ನಡದ ಯುವ ನಟರೊಬ್ಬರು ಕೊರೊನಾ ಸಮಯದಲ್ಲಿ ತಮ್ಮ ವಾಹವನ್ನು ಉಚಿತವಾಗಿ ಎನ್‌ಜಿಓ ಒಂದಕ್ಕೆ ನೀಡಿದ್ದು ಆಮ್ಲಜನಕ ಸಾಗಣೆ, ಔಷಧ ಸಾಗಣೆ ಇತರೆ ಕಾರಣಗಳಿಗೆ ಬಳಸಿಕೊಳ್ಳಲು ಕೊಟ್ಟಿದ್ದಾರೆ.

    ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಯುವ ನಟ ಅರುಣ್ ಗೌಡ ಅವರು ತಮ್ಮ ಟಾಟಾ ಏಸ್ ವಾಹವನ್ನು 'ಲೆಟ್ಸ್‌ ಬಿ ದಿ ಚೇಂಜ್' ಹೆಸರಿನ ಎನ್‌ಜಿಓಗೆ ನೀಡಿದ್ದಾರೆ. ಆಮ್ಲಜನಕ ಸಿಲಿಂಡರ್ ಸಾಗಣೆ ಸೇರಿದಂತೆ ಹಲವು ಕಾರಣಗಳಿಗೆ ಆ ವಾಹವನ್ನು ಎನ್‌ಜಿಓ ಬಳಸಿಕೊಳ್ಳಲಿದೆ.

    Actor Arun Gowda Gave His Luggage Vehicle To NGO

    ಈ ಸಂದರ್ಭದಲ್ಲಿ ಮಾತನಾಡಿರುವ ಅರುಣ್ ಗೌಡ, 'ಕೊರೊನಾದಂಥಹಾ ಕ್ಲಿಷ್ಕಕರ ಸನ್ನಿವೇಶದಲ್ಲಿ ಎಲ್ಲರೂ ಒಂದೊಂದು ರೀತಿಯಲ್ಲಿ ಸಹಾಯ ಮಾಡಬೇಕಿದೆ. ನನ್ನದು ಅರು ಗೌಡ ಫೌಂಡೇಶನ್ ಎಂಬ ಸೇವಾ ಸಂಸ್ಥೆ ಇದೆ. ಅದರ ಮೂಲಕ ಕೆಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇಂದು 'ಲೆಟ್ಸ್ ಬಿ ದಿ ಚೇಂಜ್' ಎನ್‌ಜಿಓ ಜೊತೆಗೆ ನಾನು ಕೈಜೋಡಿಸಿ ನನ್ನ ಬಳಕೆಗೆ ಇಟ್ಟುಕೊಂಡಿದ್ದ ಟಾಟಾ ಏಸ್ ವಾಹನವನ್ನು ಅವರಿಗೆ ನೀಡಿದ್ದೇನೆ' ಎಂದಿದ್ದಾರೆ.

    'ಕೊರೊನಾದಂಥಹಾ ಕ್ಲಿಷ್ಟಕರ ಸನ್ನಿವೇಶದಲ್ಲಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸಿರುತ್ತದೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆಗ ಚೆನ್ನಾಗಿ ಕೆಲಸ ಮಾಡುತ್ತಿರುವ ಎನ್‌ಜಿಓಗಳಿಗೆ, ಸೇವಾ ಸಂಸ್ಥೆಗಳಿಗೆ ನಾವು ಬೆಂಬಲ ನೀಡಬೇಕು. ಅವರೊಟ್ಟಿಗೆ ಕೈ ಜೋಡಿಸಬೇಕು' ಎಂದಿದ್ದಾರೆ ಅರುಣ್ ಗೌಡ.

    ಕೊರೊನಾಕ್ಕೆ ಸಂಬಂಧಿಸಿದಂತೆ ಆಮ್ಲಜನಕ, ಬೆಡ್ ಸಮಸ್ಯೆ, ಊಟ ಏನೇ ಬೇಕಾದರು 'ಲೆಟ್‌ ಬಿ ದಿ ಚೇಂಜ್' ಸೇವಾ ಸಂಸ್ಥೆಯನ್ನು ಸಂಪರ್ಕಿಸಬಹುದು. ಈಗಾಗಲೇ ಕೊರೊನಾ ಬಂದು ವಾಸಿಯಾಗಿರುವವರು ಸಹ ತಮ್ಮ ಔಷಧಗಳು, ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಇವರಿಗೆ ಕೊಟ್ಟರೆ ಅಗತ್ಯ ಇರುವವರಿಗೆ ತಲುಪಿಸುತ್ತಾರೆ' ಎಂದಿದ್ದಾರೆ.

    ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಬಂದ ಅರುಣ್ ಗೌಡ ಅವರು ಪತಿ ಬೇಕು ಡಾಕ್ ಕಾಮ್, 'ವಿರಾಟಪರ್ವ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಯುವರತ್ನ ಸಿನಿಮಾದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದರು.

    English summary
    Actor Arun Gowda gave his luggage vehicle to NGO to use it to help corona patients.
    Saturday, May 22, 2021, 11:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X