For Quick Alerts
  ALLOW NOTIFICATIONS  
  For Daily Alerts

  ಕುಡಿದು ಅವಾಂತರ ಮಾಡಿ ತಲೆಮರೆಸಿಕೊಂಡ 'ಚಕ್ರವ್ಯೂಹ' ಕೇಡಿ

  By Suneetha
  |

  ಸ್ಟಾರ್ ಸೆಲೆಬ್ರಿಟಿಗಳು ಕುಡಿದು ಮಾಡೋ ಅವಾಂತರ ಒಂದಾ, ಎರಡಾ.?. ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ. ಕುಡಿದು ಗಾಡಿ ಓಡಿಸಿ ಸಿಕ್ಕಿ ಹಾಕಿಕೊಂಡು, ಪೊಲೀಸರ ಮೇಲೆ ದರ್ಪ ಮಾಡಿ ಜೈಲು ಪಾಲಾಗಿ ದಂಡ ಕಟ್ಟಿದವರು ಕೆಲವರಿದ್ದಾರೆ.

  ಇನ್ನೂ ಕೆಲವರು ಮಾಡೋದೆಲ್ಲಾ, ಮಾಡಿ ತಲೆ ಮರೆಸಿಕೊಳ್ಳುತ್ತಾರೆ. ಇಂತಹ ಅವಾಂತರ ಮಾಡಿ ಹಲವಾರು ಸೆಲೆಬ್ರಿಟಿಗಳು ದಿನಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇದೇ ವಿಚಾರಕ್ಕೆ ಸುದ್ದಿ ಮಾಡಿದ್ದು ಖ್ಯಾತ ನಟ ಅರುಣ್ ವಿಜಯ್ ಅವರು.[ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದಲ್ಲಿ ಪುನೀತ್ ಅವರಿಗೆ ಕೇಡಿಯಾಗಿ ಟಕ್ಕರ್ ಕೊಟ್ಟಿದ್ದ, ದಕ್ಷಿಣ ಭಾರತದ ಖ್ಯಾತ ನಟ ಅರುಣ್ ವಿಜಯ್ ಅವರು ಇದೀಗ ಪೊಲೀಸರ 'ಚಕ್ರವ್ಯೂಹ'ದೊಳು ಸಿಲುಕಿದ್ದಾರೆ.[ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ]

  ಬೆಳ್ಳಂ-ಬೆಳಗ್ಗೆ ಪಾನಮತ್ತರಾಗಿ ಗಾಡಿ ಓಡಿಸಿ, ಅವಾಂತರ ಮಾಡಿದ ಕಾಲಿವುಡ್ ನಟ ಅರುಣ್ ವಿಜಯ್ ಅವರು ಇದೀಗ ಪೊಲೀಸರಿಂದ ತಲೆ ಮರೆಸಿಕೊಂಡಿದ್ದಾರೆ, ಅಷ್ಟಕ್ಕೂ ಏನಾಯ್ತು ಮುಂದೆ ಓದಿ...

  ಪಾರ್ಟಿ ಮುಗಿಸಿ ಬರುತ್ತಿದ್ದ ನಟ

  ಪಾರ್ಟಿ ಮುಗಿಸಿ ಬರುತ್ತಿದ್ದ ನಟ

  ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಖಳನಟನ ಪಾತ್ರಗಳಲ್ಲಿ ಮಿಂಚುತ್ತಿರುವ ನಟ ಅರುಣ್‌ ವಿಜಯ್ ಅವರು, ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಅವರ ಸಂಗೀತ ಕಾರ್ಯಕ್ರಮ ಮುಗಿಸಿ ಬರುವಾಗ ಪೊಲೀಸ್ ಗಾಡಿಗೆ ಡಿಕ್ಕಿ ಹೊಡೆದಿದ್ದಾರೆ.

  ಬೆಳ್ಳಂ-ಬೆಳಗ್ಗೆ ನಡೆದ ಘಟನೆ

  ಬೆಳ್ಳಂ-ಬೆಳಗ್ಗೆ ನಡೆದ ಘಟನೆ

  ಶುಕ್ರವಾರ (ಆಗಸ್ಟ್‌ 27) ರಾತ್ರಿ ರಾಯನೆ-ಅಭಿಮನ್ಯು ಮಿಥುನ್ ಸಂಗೀತ ಕಾರ್ಯಕ್ರಮ ಮುಗಿಸಿ, ಬೆಳ್ಳಂ-ಬೆಳಗ್ಗೆ ಸುಮಾರು 3.30 ರ ಹೊತ್ತಿಗೆ ತಮ್ಮ ಹೆಂಡತಿ ಮಕ್ಕಳ ಜೊತೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ 'ನಂಗಮಕ್ಕಂ' ಪೊಲೀಸ್ ಠಾಣೆ ಹೊರಗಡೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು.

  ಕೇಸು ದಾಖಲು

  ಕೇಸು ದಾಖಲು

  ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ನಟ ಅರುಣ್ ವಿಜಯ್ ಅವರು ಪಾನಮತ್ತರಾಗಿದ್ದು, ಪೊಲೀಸರು ಅವರ ಮೇಲೆ 'ಕುಡಿದು ವಾಹನ ಚಾಲನೆ' ಕೇಸು ದಾಖಲಿಸಿಕೊಂಡಿದ್ದರು. ಮಾತ್ರವಲ್ಲದೇ ಅರುಣ್ ವಿಜಯ್ ಅವರ ಬಿಎಂಡಬ್ಲ್ಯೂ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

  ಹೇಳದೆ-ಕೇಳದೆ ಪರಾರಿ

  ಹೇಳದೆ-ಕೇಳದೆ ಪರಾರಿ

  ಶುಕ್ರವಾರ ಮುಂಜಾನೆ ಈ ಘಟನೆ ನಡೆದ ಪರಿಣಾಮ ನಟ ಅರುಣ್ ವಿಜಯ್ ಅವರನ್ನು ಪೂರ್ತಿ ಬೆಳಗಾಗೋ ತನಕ ನಿಂತು, ಮೇಲಾಧಿಕಾರಿಗಳನ್ನು ಭೇಟಿ ಮಾಡಿ, ಕೆಲವು ಫಾರ್ಮಲೀಟಿಸ್ ಮಾಡೋ ತನಕ ಕಾಯಲು ಹೇಳಿದ್ದರು. ಆದರೆ ಅರುಣ್ ಅವರು ಹೇಳದೆ-ಕೇಳದೆ ಪೊಲೀಸ್ ಠಾಣೆಯಿಂದ ಹೊರ ನಡೆದಿದ್ದರು.

  ತಲೆಮರೆಸಿಕೊಂಡಿರುವ ಅರುಣ್ ವಿಜಯ್

  ತಲೆಮರೆಸಿಕೊಂಡಿರುವ ಅರುಣ್ ವಿಜಯ್

  ಅರುಣ್ ವಿಜಯ್ ಅವರ ಮೇಲೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಹಾಜರಾಗಲು ಪೊಲೀಸರು ತಿಳಿಸಿದ್ದರು. ಆದರೆ ನಟ ಅರುಣ್ ವಿಜಯ್ ಅವರು ಸೋಮವಾರದಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಫೋನಿಗೂ ಸಿಗುತ್ತಿಲ್ಲ

  ಫೋನಿಗೂ ಸಿಗುತ್ತಿಲ್ಲ

  ಈ ಘಟನೆ ನಡೆದು ಮೂರು ದಿನ ಕಳೆದರೂ ನಟ ಅರುಣ್ ವಿಜಯ್ ಆಗಲಿ, ಅವರ ತಂದೆ ಹಿರಿಯ ನಟ ವಿಜಯ್ ಕುಮಾರ್ ಅವರಾಗಲಿ, ಯಾವುದೇ ಮಾಹಿತಿ ಒದಗಿಸುತ್ತಿಲ್ಲ. ಫೋನ್ ಮಾಡಲು ಪ್ರಯತ್ನ ಪಟ್ಟರೆ ಅದಕ್ಕೂ ಯಾವುದೇ ಉತ್ತರ ಇಲ್ಲ' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ವರದಿ ಮಾಡಿದ್ದಾರೆ.

  English summary
  3 days after Kollywood actor Arun Vijay rammed his car on a parked police vehicle allegedly under influence of alcohol, has been absconding and has not appeared for the investigation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X