For Quick Alerts
  ALLOW NOTIFICATIONS  
  For Daily Alerts

  ತಾತನಾದ ಸಂಭ್ರಮದಲ್ಲಿ ಕೌರವ ಬಿ.ಸಿ ಪಾಟೀಲ್

  |

  ಸ್ಯಾಂಡಲ್ ವುಡ್ ಕೌರವ ಅಂತಾನೇ ಪ್ರಖ್ಯಾತಿ ಪಡೆದಿರುವ ನಟ ಬಿ.ಸಿ ಪಾಟೀಲ್ ತಾತನಾದ ಸಂಭ್ರಮದಲ್ಲಿದ್ದಾರೆ. ಬಿ.ಸಿ ಪಾಟೀಲ್ ಮುದ್ದಿನ ಪುತ್ರಿ ಸೃಷ್ಟಿ ಪಾಟೀಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಮನೆಗೆ ಮುದ್ದಾದ ಮಗಳು ಆಗಮಿಸಿದ ಬಗ್ಗೆ ಸೃಷ್ಟಿ ಪಾಟೀಲ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಹೆಣ್ಣು ಮಗುವಾಗಿದೆ ಎನ್ನುವ ಸಂತಸದ ಸುದ್ದಿ ಶೇರ್ ಮಾಡಿ, "ತಾಯಿಯಾಗುವ ಸೌಭಾಗ್ಯ ತಂದುಕೊಟ್ಟ ನನ್ನ ಮಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದಿಂದ ನನ್ನ ಮಗಳು ಆರೋಗ್ಯವಾಗಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.

  ಕಳೆದ ಏಪ್ರಿಲ್ ನಲ್ಲಿ ಸೃಷ್ಟಿ ಪಾಟೀಲ್ ಅವರ ಸೀಮಂತ ಸಂಭ್ರಮ ನೆರವೇರಿತ್ತು. ಕೊರೊನಾ ಕಾರಣದಿಂದ ಸರಳವಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು, ಕೇವಲ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಸೀಮಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದರು. ಸದ್ಯ ಹೆಣ್ಣಿ ಮಗುವಿಗೆ ಜನ್ಮ ನೀಡಿರುವ ಸೃಷ್ಟಿ ಪಾಟೀಲ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada

  ಅಂದಹಾಗೆ ಸೃಷ್ಟಿ ಪಾಟೀಲ್ 2019ರಲ್ಲಿ ಉದ್ಯಮಿ ಸಂಜಯ್ ಬೇಲೂರು ಜೊತೆ ಹಸೆಮಣೆ ಏರಿದ್ದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಜಕೀಯ ಮತ್ತು ಸಿನಿ ಗಣ್ಯರು ಭಾಗಿಯಾಗಿದ್ದರು. ಸೃಷ್ಟಿ ಪಾಟೀಲ್ 'ಹ್ಯಾಪಿ ನ್ಯೂ ಇಯರ್' ಸಿನಿಮಾದಲ್ಲಿ ನಟಿಸಿದ್ದಾರೆ. ಒಂದೇ ಒಂದು ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಸೃಷ್ಟಿ ಬಳಿಕ ಅಪ್ಪನ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡರು. ಸದಾ ಅಪ್ಪನ ಜೊತೆ ಕಾಣಿಸಿಕೊಳ್ಳುವ ಸೃಷ್ಟಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.

  English summary
  Kannada Actor B.C Patil Daughter Srushti Patil blessed with baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X