»   » ಬಾಯ್ಸ್ ಹೀರೋ ಭರತ್ ಮದುವೆ ಚಿತ್ರಗಳು

ಬಾಯ್ಸ್ ಹೀರೋ ಭರತ್ ಮದುವೆ ಚಿತ್ರಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮಿಳು ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಗಿ ಬೆಳೆದ ನಟ ಭರತ್ ಅವರು ಚೆನ್ನೈನಲ್ಲಿ ಬಂಧು ಮಿತ್ರರು ಆಪ್ತರ ಸಮ್ಮುಖದಲ್ಲಿ ಡಾ. ಜೆಶ್ಲೆ ಅವರನ್ನು ಮದುವೆಯಾಗಿದ್ದಾರೆ.

ನಮ್ಮದು ಲವ್ ಕಮ್ ಅರೇಂಜ್ಡ್ ಮದುವೆ. ಜೆಶ್ಲೆ ಇನ್ನೂ ಓದಬೇಕು ಎಂಬ ಆಸೆಯಿದೆ. ಅದಕ್ಕೆ ಎರಡೂ ಕುಟುಂಬದಲ್ಲೂ ಸಮ್ಮತಿಯಿದೆ. ಮದುವೆ ನಂತರ ಜೆಶ್ಲಿ MDS ಮಾಡುತ್ತಾಳೆ ಎಂದು ಭರತ್ ಪ್ರತಿಕ್ರಿಯಿಸಿದ್ದಾರೆ.

2004ರಲ್ಲಿ ಶಂಕರ್ ನಿರ್ದೇಶನದ ಸಿದ್ದಾರ್ಥ್ ನಾಯಕತ್ವದ ಬಾಯ್ಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭರತ್ ಉತ್ತಮ ನಟನಾಗಿ ಬೆಳೆದರು. ಚೆಲ್ಲಾಮೆ, ಕಾದಲ್, ವೆಜಿಲ್, ಪಟ್ಟಿಯಾಲ್ ಮುಂತಾದ ಚಿತ್ರಗಳು ಭರತ್ ಗೆ ಹೆಸರು ತಂದು ಕೊಟ್ಟಿದೆ.

ಇತ್ತೀಚೆಗೆ ಬಾಲಿವುಡ್ ಗೂ ಕಾಲಿಟ್ಟ ಭರತ್ ಜಾಕ್ ಪಾಟ್ ಚಿತ್ರದಲ್ಲಿ ನಟಿಸಿದ್ದರು. ಸನ್ನಿ ಲಿಯೋನ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಭರತ್ ಗೆ ನಾಸೀರುದ್ದೀನ್ ಶಾ, ಸಚಿನ್ ಜೋಶಿ ಮುಂತಾದವರು ಸಹನಟರಾಗಿದ್ದರು. ಭರತ್ ಹಾಗೂ ಜೆಶ್ಲಿ ಜೋಡಿಯ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಪ್ರತಿಭಾವಂತ ನಟ

ಆರಂಭದಲ್ಲಿ ಹುಡುಗಾಟಿಕೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಭರತ್ ನಂತರ ಪ್ರಬುದ್ಧ ಪಾತ್ರಗಳತ್ತ ತಿರುಗಿದರು. ಕಡೆಯದಾಗಿ 555 ಚಿತ್ರದಲ್ಲಿ ಅವರನ್ನು ಅಭಿಮಾನಿಗಳು ಕಂಡಿದ್ದರು. ನೀಲಾ ಜತೆ ನಟಿಸಿರುವ ಕಿಲಾಡಿ ಚಿತ್ರ ತೆರೆ ಕಾಣಬೇಕಿದೆ. ಮಲೆಯಾಳಂ ಸ್ಟಾರ್ ಮೋಹನ್ ಲಾಲ್ ಜತೆ ಕೂಥ್ರಾ ಎಂಬ ಚಿತ್ರದಲ್ಲೂ ಭರತ್ ನಟಿಸಿದ್ದಾರೆ.

ದಂತವೈದ್ಯೆ ಜೆಶ್ಲಿ

ಭರತ್ ಯಾರೊಟ್ಟಿಗೋ ಪ್ರೀತಿ ಪ್ರೇಮ ಜಾಲದಲ್ಲಿ ಸಿಲುಕಿದ್ದಾರೆ ಎಂದು ಗುಸುಗುಸು ಕಾಲಿವುಡ್ ನಲ್ಲಿ ಹಬ್ಬಿತ್ತು. ಆದರೆ, ಡಾ. ಜೆಶ್ಲಿ ಬಗ್ಗೆ ಭರತ್ ಹೆಚ್ಚಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.

ವೃತ್ತಿಯಿಂದ ದಂತವೈದ್ಯೆ ಆಗಿರುವ ಡಾ. ಜೆಶ್ಲಿ ಅವರ ಪೋಷಕರು ದುಬೈನಲ್ಲಿ ನೆಲೆಸಿದ್ದಾರೆ.

ಆರತಕ್ಷತೆ

ಕಳೆದ ಸೋಮವಾರ ಆಪ್ತರ ನಡುವೆ ಸಂಪ್ರದಾಯಬದ್ಧವಾಗಿ ಮದುವೆಯಾದ ಭರತ್ ಹಾಗೂ ಜೆಶ್ಲಿ ಸೆ.14 ರಂದು ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ.

ಗೆಳೆತನ, ಪ್ರೇಮ

ಜೆಶ್ಲಿ ನನ್ನ ಉತ್ತಮ ಗೆಳೆತಿಯಾಗಿದ್ದಳು ನಂತರ ಪ್ರೇಮಿಯಾದಳು. ಇಬ್ಬರ ಕುಟುಂಬದಲ್ಲೂ ಮದುವೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ಎಲ್ಲರೂ ಸಂತೋಷದಿಂದ ಒಪ್ಪಿಕೊಂಡರು ಎಂದು ಭರತ್ ಹೇಳಿದ್ದಾರೆ.

ಟ್ವೀಟ್ ಮಾಡಿದ ಭರತ್

ಭರತ್ ತಮ್ಮ ಮದುವೆ, ಆರತಕ್ಷತೆ ಬಗ್ಗೆ Yes it's true ! Me and Jeshly announce our wedding on the 14th of September 2013. Thanks in advance for your well wishes and prayers. ಎಂದು ಟ್ವೀಟ್ ಮಾಡಿದ್ದರು.

ಭರತ್ ಗೆ ಶುಭ ಹಾರೈಕೆ

ನೆಗಟಿವ್ ಶೇಡ್ ಪಾತ್ರ, ಹಳ್ಳಿ ಹುಡುಗನ ಪಾತ್ರ, ಸಿಟಿ ರೋಮಿಯೋ ಪಾತ್ರ ಹೀಗೆ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರವನ್ನು ಭರತ್ ಅಯ್ಕೆ ಮಾಡಿಕೊಳ್ಳುತ್ತಿದ್ದಾರೆ. ದಂತ ವೈದ್ಯೆ ಜೆಶ್ಲಿ ಜತೆ ಭರತ್ ಜೀವನ ಸುಖವಾಗಿರಲಿ ಎಂದು ಒನ್ ಇಂಡಿಯಾ ಶುಭ ಹಾರೈಸುತ್ತದೆ.

English summary
Kollywood's most eligible bachelor Bharath has tied the knot with Dr Jeshly, on Monday, September 9, 2013. The marriage was held in Chennai in the presence of their parents, close family and friends.
Please Wait while comments are loading...