For Quick Alerts
  ALLOW NOTIFICATIONS  
  For Daily Alerts

  ಬುಲೆಟ್ ಪ್ರಕಾಶ್ ಗೆ ಮತ್ತೊಂದು ಅವಕಾಶ ಕೊಡ್ತಾರಾ ದಾಸ ದರ್ಶನ್ ?

  By Naveen
  |
  ಬುಲೆಟ್‌ಗೆ ಸಿಗುತ್ತಾ ದಾಸನ ಸಪೋರ್ಟ್..!? | Filmibeat Kannada

  ಜಾಂಡಿಸ್ ಖಾಯಿಲೆಯಿಂದ ಗುಣಮುಖವಾಗಿರುವ ನಟ ಬುಲೆಟ್ ಪ್ರಕಾಶ್ ಮುಂದೆ ಹೆಚ್ಚು ಹೆಚ್ಚು ಸಿನಿಮಾ ಮಾಡುವ ಆಸೆ ಹೊಂದಿದ್ದಾರೆ. ಅದರಲ್ಲಿಯೂ ಚಾಲೆಂಜಿಂಗ್ ಪಾತ್ರ ಮಾಡುವ ಆಸೆ ಬುಲೆಟ್ ಗೆ ಇದೆ.

  ಚಾಲೆಂಜಿಂಗ್ ಪಾತ್ರ ಮಾಡುವ ಕನಸು ಹೊಂದಿರುವ ಬುಲೆಟ್ ಪ್ರಕಾಶ್ ಈ ಹಿಂದೆ ಹೆಚ್ಚು ಮಿಂಚಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಲ್ಲಿಯೇ. ದರ್ಶನ್ ಚಿತ್ರದಲ್ಲಿ ಬುಲೆಟ್ ಇದ್ದಾರೆ ಅಂದರೆ ಒಂದು ಮ್ಯಾಜಿಕ್ ಸೃಷ್ಟಿಯಾಗುತ್ತಿತ್ತು.

  ''ನನ್ನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ್ದರು'' ಬುಲೆಟ್ ನೋವಿನ ನುಡಿಯ ಅರ್ಥ ಏನು!? ''ನನ್ನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ್ದರು'' ಬುಲೆಟ್ ನೋವಿನ ನುಡಿಯ ಅರ್ಥ ಏನು!?

  ಸದ್ಯ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿರುವ ಬುಲೆಟ್ ಪ್ರಕಾಶ್ ದರ್ಶನ್ ಅವರ ಜೊತೆಗೆ ಸಿನಿಮಾ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದಿದ್ದಾರೆ. ಇನ್ನೊಂದು ಕಡೆ ಬುಲೆಟ್ ಆಸೆಯನ್ನು ದರ್ಶನ್ ಈಡೇರಿಸುತ್ತಾರ ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಮುಂದೆ ಓದಿ...

  ಎಲ್ಲ ನಟರು ಆರೋಗ್ಯ ವಿಚಾರಿಸಿದ್ದರು

  ಎಲ್ಲ ನಟರು ಆರೋಗ್ಯ ವಿಚಾರಿಸಿದ್ದರು

  ''ನಾನು ಆಸ್ಪತ್ರೆಯಲ್ಲಿ ಇದ್ದಾಗ ಕೆಲವು ನಟರು ಬಂದು ನನ್ನನ್ನು ನೋಡಿಕೊಂಡು ಹೋದರು. ಶಿವಣ್ಣ ಬಂದು ಆರೋಗ್ಯ ವಿಚಾರಿಸಿದರು. ಎಲ್ಲ ನಟರು ಫೋನ್ ಮಾಡಿ ಮಾತನಾಡಿಸಿದರು. ದುನಿಯಾ ವಿಜಯ್, ಸಾಧು ಕೋಕಿಲ ಸೇರಿದಂತೆ ಅನೇಕರು ಸಾಂತ್ವನ ಹೇಳಿದರು. ಇಡೀ ಫಿಲ್ಮ್ ಚೆಂಬರ್ ನವರು ನನಗಾಗಿ ಆಸ್ಪತ್ರೆಗೆ ಬಂದಿದ್ದರು. ನಿರ್ದೇಶಕ ಸಂಘದವರು ಕೂಡ ಫೋನ್ ಮಾಡಿ ಧೈರ್ಯದ ಮಾತನಾಡಿದರು''

  ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ! ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ!

  ದರ್ಶನ್ ಜೊತೆಗೆ ಸಿನಿಮಾ ಬಂದರೆ ನಟಿಸುತ್ತೇನೆ

  ದರ್ಶನ್ ಜೊತೆಗೆ ಸಿನಿಮಾ ಬಂದರೆ ನಟಿಸುತ್ತೇನೆ

  ''ಯಾವುದೇ ಕಾರಣಕ್ಕು ಸಿನಿಮಾ ಎನ್ನುವುದು ನನಗೆ ಮೋಸ ಮಾಡಿಲ್ಲ. ನಾನು ಇರುವುದೇ ನಟನೆ ಮಾಡುವುದಕ್ಕೆ. ಮುಂದೆ ಕೂಡ ಎಲ್ಲ ನಟರ ಸಿನಿಮಾದಲ್ಲಿ ನಟನೆ ಮಾಡುತ್ತೇನೆ. ದರ್ಶನ್ ಬಂದರು ಸರಿ, ಶಿವಣ್ಣ, ಉಪೇಂದ್ರ, ಸುದೀಪ್ ಪ್ರೇಮ್, ದುನಿಯಾ ವಿಜಯ್ ಯಾರೇ ಬಂದರು ಅವರ ಚಿತ್ರದಲ್ಲಿ ನಟಿಸುದಕ್ಕೆ ಸಿದ್ಧವಾಗಿದ್ದೇನೆ.''

  ಬುಲೆಟ್ ಪ್ರಕಾಶ್ ಇಂದು ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ! ಬುಲೆಟ್ ಪ್ರಕಾಶ್ ಇಂದು ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ!

  ರಾಜ್, ವಿಷ್ಣು ಸರ್ ಅವರ ಜೊತೆಗೆ ನಟಿಸಿದ್ದೇನೆ

  ರಾಜ್, ವಿಷ್ಣು ಸರ್ ಅವರ ಜೊತೆಗೆ ನಟಿಸಿದ್ದೇನೆ

  ''ಡಾ.ರಾಜ್ ಕುಮಾರ್ ರೀತಿಯ ಮಹಾನುಭಾವರ ಸಿನಿಮಾದಲ್ಲಿ ನಟಿಸಿದ್ದೇನೆ. ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಅವರ ಜೊತೆಗೆ ಸಿನಿಮಾ ಮಾಡಿದ್ದೇನೆ. ಅವರ ಮಕ್ಕಳ ಜೊತೆಗೆ ಕೂಡ ಅಭಿನಯಿಸಿದ್ದೇನೆ. ಆದರೆ ನನಗೆ ಈಗಲೂ ತೃಪ್ತಿ ಇಲ್ಲ. ನಿಜ ಹೇಳುವುದಾದರೆ ಒಬ್ಬ ಕಲಾವಿದನಿಗೆ ತೃಪ್ತಿ ಬರಬಾರದು''.

  ದೊಡ್ಡ ನಟರ ಮುಂದೆ ನಾವು ಏನು ಅಲ್ಲ

  ದೊಡ್ಡ ನಟರ ಮುಂದೆ ನಾವು ಏನು ಅಲ್ಲ

  ''ಎಲ್ಲ ದೊಡ್ಡ ನಟರ ಜೊತೆಗೆ ನಟಿಸಿದ್ದೇನೆ. ಅವರ ಮುಂದೆ ನಾವು ಏನು ಅಲ್ಲ. ರಾಜ್ ಕುಮಾರ್ ಎಂಬ ಮಹಾನ್ ನಟನಿಗೆ ಒಂದು ಟೈಂ ನಲ್ಲಿ ಸಿನಿಮಾ ಇರಲಿಲ್ಲವಂತೆ. ಇದನ್ನು ಅವರ ಒಂದು ಪುಸ್ತಕದಲ್ಲಿ ಓದಿದ್ದೇನೆ. ಏಳು ಬೀಳು ಎಲ್ಲರ ಜೀವನದಲ್ಲಿ ಇರುತ್ತದೆ. ಈಗ ನಾನು ಹೊಸ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ.

  ನನಗೆ ಒಂದು ಚಾಲೆಂಜಿಂಗ್ ರೋಲ್ ಬೇಕು

  ನನಗೆ ಒಂದು ಚಾಲೆಂಜಿಂಗ್ ರೋಲ್ ಬೇಕು

  ''ನಾನು ಇಲ್ಲಿಂದ ಸ್ಟ್ರಾಂಗ್ ಆಗಿದ್ದೇನೆ. ಇನ್ನೂ ಚೆನ್ನಾಗಿ ನಟನೆ ಮಾಡಲು ದಾರಿ ಸಿಕ್ಕಿದೆ. ಸಿನಿಮಾಗಳು ಬರುತ್ತಿವೆ. ಆದರೆ, ಈಗ ನನಗೆ ಒಂದು ಚಾಲೆಂಜಿಂಗ್ ರೋಲ್ ಬೇಕು. 'ಮಸಣದ ಹೂ' ಸಿನಿಮಾದಲ್ಲಿ ಅಂಬರೀಶಣ್ಣ ಮಾಡಿದ್ದ ರೀತಿಯ ಪಾತ್ರ ಮಾಡಬೇಕು ಅಂತ ತುಂಬ ಆಸೆ ಇದೆ.''

  ಸೋಲೋ ಸಿನಿಮಾ ಮಾಡಿ ಎನ್ನುತ್ತಿದ್ದಾರೆ

  ಸೋಲೋ ಸಿನಿಮಾ ಮಾಡಿ ಎನ್ನುತ್ತಿದ್ದಾರೆ

  ''ಈಗ ಶಿವಣ್ಣನ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಅದರ ಜೊತೆಗೆ ಎರಡ್ಮೂರು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೆಲವು ನಮ್ಮ ಹುಡುಗರು ಸೋಲೋ ಆಗಿ ಮಾಡಿ ಅಣ್ಣ ಅಂತ ಕೇಳುತ್ತಿದ್ದಾರೆ. ನಿರ್ದೇಶಕ ರಿಷಿ ಅವರು ಕೂಡ ಸೋಲೋ ಸಿನಿಮಾ ಮಾಡೋಣ ಅಂತ ಹೇಳಿದ್ದಾರೆ.''

  English summary
  Kannada comedy actor Bullet Prakash suffered from Jaundice and he want to play a challenging role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X