»   » ಪ್ಲಸ್ ಆಯಿತು ಠುಸ್, ಸಿಕ್ಸ್ ಪ್ಯಾಕ್ ಚೇತನ್ ಚಂದ್ರ ಭುಸ್!

ಪ್ಲಸ್ ಆಯಿತು ಠುಸ್, ಸಿಕ್ಸ್ ಪ್ಯಾಕ್ ಚೇತನ್ ಚಂದ್ರ ಭುಸ್!

By: ಜೀವನರಸಿಕ
Subscribe to Filmibeat Kannada

ಕಳೆದವಾರ ತೆರೆಕಂಡ ಗಡ್ಡ ವಿಜಿ ನಿರ್ದೇಶನದ ಪ್ಲಸ್ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಠುಸ್ ಆಗಿದೆಯಂತೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಕೂಡ ಅಷ್ಟಕ್ಕಷ್ಟೇ ಇದ್ದು, ಮಾಧ್ಯಮಗಳೂ ಕೂಡ ಚಿತ್ರವನ್ನ ನಿರಾಶೆಗೊಳಿಸೋ ಚಿತ್ರ ಅಂತ ವಿಮರ್ಶಿಸಿದ್ವು.

ಇನ್ನು ವಿತರಕರ ವಲಯದಿಂದ ಬಂದಿರೋ ಮಾಹಿತಿ ಕೂಡ ಇದನ್ನ ಪುಷ್ಠೀಕರಿಸುವಂತೆಯೇ ಇದೆ. ರಾಜ್ಯಾದ್ಯಂತ ಕಲೆಕ್ಷನ್ ನೋಡಿದ್ರೆ ಚಿತ್ರವನ್ನ ಜನ್ರು ಬಾಚಿ ತಬ್ಬಿಕೊಂಡಂತಿಲ್ಲ. ಆದರೆ, ಅನಂತ್ ನಾಗ್, ರವಿಶಂಕರ್ ಅಭಿನಯಕ್ಕೆ ಅನ್ಯಾಯವಿಲ್ಲ ಅಂತಿದ್ದಾರೆ ಪ್ರೇಕ್ಷಕರು.[ವಿಮರ್ಶೆ : ಮೈನಸ್ ಮೈನಸ್ '+' ಆದ್ರೆ '-' ಮೈನಸ್.!]


Actor Chetan Chandra unhappy for his role in Plus

ಆದ್ರೆ ನಟ ಚೇತನ್ ಚಂದ್ರ ಚಿತ್ರದ ರಿಲೀಸ್ಗೂ ಮೊದಲೇ ಚಿತ್ರದ ಬಗ್ಗೆ ಗರಂ ಆದಂತಿದ್ರು. ಈಗ ಚಿತ್ರ ರಿಲೀಸಾದ ನಂತ್ರವಂತೂ ನನ್ನಿಂದ ಸರಿಯಾದ ಪಾತ್ರ ಮಾಡಿಸಿಲ್ಲ. ನನ್ನ ಪಾತ್ರಕ್ಕೆ ಇಂಪಾರ್ಟೆನ್ಸೇ ಇಲ್ಲ ಅಂತ ಗೊಣಗಾಡುತ್ತ ಓಡಾಡುತ್ತಿದ್ದಾರೆ.[ಅನಂತ್ ನಾಗ್ 'ಪ್ಲಸ್' ಗೆ ವಿಮರ್ಶಕರು ಪ್ಲಸ್ ಪಾಯಿಂಟ್ ನೀಡಿದ್ರಾ?]


ಇನ್ನು ಚಿತ್ರದ ಪ್ರೊಮೋಷನ್ಗೂ ಚೇತನ್ ಚಂದ್ರ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲವಂತೆ ಅನ್ನೋ ಮಾಹಿತಿ ಚಿತ್ರತಂಡದ ಮೂಲಗಳಿಂದ ಹೊರಬಿದ್ದಿದೆ. ಚಿತ್ರದಲ್ಲಿ ಕಟ್ಟುಮಸ್ತ್ ಸಿಕ್ಸ್ ಪ್ಯಾಕ್ ತೋರಿಸಿದ್ರು ಚೇತನ್ ಚಂದ್ರ.


ಇದೇ ಹ್ಯಾಂಡಸಮ್ ಹೀರೋ ಆರಂಭದಲ್ಲಿ ಪ್ಲಸ್ ಚಿತ್ರದಲ್ಲಿ ಅವಕಾಶ ಸಿಕ್ಕಾಗ ಕುಣಿದಾಡಿದ್ರು. ಅನಂತ್ ನಾಗ್ ಜೊತೆ ಅಭಿನಯಿಸೋ ಅವಕಾಶ, ದೊಡ್ಡ ಸಿನಿಮಾ ಅಂತ ಹಬ್ಬ ಆಚರಿಸಿದ್ರು ಈಗ ಅದೇನಾಯ್ತೋ?

English summary
Kannada Actor Chetan Chandra unhappy and lamenting his role in Plus Kannada movie, in which Anant Nag has played lead role. Chetan Chandra had built six pack for the movie and was expecting good response. But, the much hyped movie directed by Gadda Viji has bombed at the box office. ಪ್ಲಸ್ ಆಯಿತು ಠುಸ್, ಸಿಕ್ಸ್ ಪ್ಯಾಕ್ ಚೇತನ್ ಚಂದ್ರ ಭುಸ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada