For Quick Alerts
  ALLOW NOTIFICATIONS  
  For Daily Alerts

  61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ

  By Sony
  |

  ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮ-ಸಡಗರ. ತೆಲುಗು ಚಿತ್ರರಂಗ ಕ್ಷೇತ್ರದ ಲೆಜೆಂಡ್ ನಟ ಚಿರಂಜೀವಿ ಹುಟ್ಟುಹಬ್ಬ ಅಂದ್ರೆ ಕೇಳಬೇಕೆ. ಅಭಿಮಾನಿಗಳು ಕೇಕೆ ಹಾಕಿ, ಕುಣಿಯುತ್ತಾ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

  ಇನ್ನು ಟಾಲಿವುಡ್ ಅಂಗಳದಲ್ಲಿ ಅಭಿಮಾನಿಗಳು, ಚಿರಂಜೀವಿ ಅವರ ಹುಟ್ಟುಹಬ್ಬವನ್ನು ದೀಪಾವಳಿ ಹಬ್ಬದಂತೆ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಈ ಸಂತಸವನ್ನು ಇಮ್ಮಡಿಗೊಳಿಸುವಂತೆ, ನಟ ಚಿರಂಜೀವಿ ಅವರು ಕೂಡ ತಮ್ಮ ಅಭಿಮಾನಿಗಳಿಗೆ, ತಮ್ಮ 150ನೇ ಹೊಸ ಚಿತ್ರದ ಮೋಷನ್ ಪೋಸ್ಟರ್ ಮತ್ತು, ಫಸ್ಟ್ ಲುಕ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ, ಉಡುಗೊರೆಯಾಗಿ ನೀಡಿದ್ದಾರೆ.[ಬಿಟೌನ್ ನಿಂದ ಟಾಲಿವುಡ್ ಗೆ ಜಿಗಿತಾರಾ ದೀಪಿಕಾ ಪಡುಕೋಣೆ?]

  ತುಂಬಾ ಲಾಂಗ್ ಗ್ಯಾಪ್ ತೆಗೆದುಕೊಂಡ ನಂತರ ಮತ್ತೆ ಚಿತ್ರರಂಗದತ್ತ ಮುಖ ಮಾಡಿರುವ ನಟ ಜಿರಂಜೀವಿ ಅವರು 'ಖೈದಿ ನಂ. 150' ಚಿತ್ರದ ಮೂಲಕ ಜಬರ್ದಸ್ತ್ ಎಂಟ್ರಿ ಕೊಟ್ಟಿದ್ದಾರೆ. ಕಾಲಿವುಡ್ ನಟ ಇಳೆಯದಳಪತಿ ವಿಜಯ್ ಅವರ ತಮಿಳು ಚಿತ್ರ 'ಕತ್ತಿ' ರೀಮೇಕ್ ಆಗಿರುವ ಈ ಚಿತ್ರದ ಪೋಸ್ಟರ್ ಗಳು ಇಂದು ಬಿಡುಗಡೆ ಆಗಿವೆ.[ವಿಡಿಯೋ; ಶ್ರೀಜಾ - ಕಲ್ಯಾಣ್ ಮದುವೆ ಸಂಭ್ರಮದ ಅದ್ಭುತ ಕ್ಷಣಗಳು]

  Telugu Actor Chiranjeevi turns 61st, gets special gift from his 150th film

  'ಖೈದಿ ನಂ.150' ಚಿತ್ರದ ಮೋಷನ್ ಪೋಸ್ಟರ್ ನಲ್ಲಿ 'ಬಾಸ್ ಇಸ್ ಬ್ಯಾಕ್' ಎಂದು ಬರೆಯಲಾಗಿದೆ. ಖಡಕ್ ಲುಕ್ ನಲ್ಲಿ ಚಿರು ಅವರು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಿದ್ದಾರೆ. ಸುಮಾರು 52 ಸೆಕೆಂಡ್ ಇರೋ ಈ ಸ್ಪೆಷಲ್ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುತ್ತಿದೆ.

  ಮೆಗಾಸ್ಟಾರ್ ಚಿರು ಅವರ 150ನೇ ಸಿನಿಮಾ 'ಖೈದಿ ನಂ 150' ಚಿತ್ರಕ್ಕೆ ರಾಮ್ ಚರಣ್ ತೇಜಾ ಅವರು ಬಂಡವಾಳ ಹೂಡುತ್ತಿದ್ದು, ನಿರ್ದೇಶಕ ವಿ.ವಿ ವಿನಾಯಕ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಟಿ ಕಾಜಲ್ ಅಗರ್ ವಾಲಾ ಅವರು ಚಿರಂಜೀವಿ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

  ಸದ್ಯಕ್ಕೆ ಚಿರಂಜೀವಿ ಅವರ 61ನೇ ವರ್ಷದ ಹುಟ್ಟುಹಬ್ಬ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದ್ದು, ಇಡೀ ದಕ್ಷಿಣ ಭಾರತದ ಚಿತ್ರರಂಗ ಕ್ಷೇತ್ರ ಚಿರಂಜೀವಿ ಅವರಿಗೆ, ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರುವ ಚಿತ್ರದ ಮೋಷನ್ ಪೋಸ್ಟರ್ ನೋಡಿಬಿಡಿ..

  English summary
  South Actor Chiranjeevi, who turned 61 on Monday (August 22), was presented with a special teaser from the makers of his upcoming project "Khaidi No 150" as a birthday gift.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X