»   » 'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!

'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!

By: BK
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡುವೆ ಏನೋ ಆಗಿದೆ. ಇತ್ತೀಚೆಗೆ ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ. ಅದಕ್ಕೆ ಯಾವ ಕಾರ್ಯಕ್ರಮದಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಊಹಾಪೂಹಗಳೇ ಹೆಚ್ಚಾಗಿದ್ದವು. ಆದ್ರೆ, ಈ ಎಲ್ಲ ವದಂತಿಗಳಿಗೆ 'ಚಕ್ರವರ್ತಿ ದರ್ಶನ್' ಸ್ವತಃ ಬ್ರೇಕ್ ಹಾಕಿದ್ದಾರೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಹೌದು, ''ನಾವಿಬ್ಬರು ಸ್ನೇಹಿತರಲ್ಲ. ಇನ್ಮುಂದೆ ನಾವು ಒಟ್ಟಿಗೆ ಇರಲ್ಲ'' ಎಂದು ಹೇಳುವ ಮೂಲಕ ಬಹುದಿನಗಳ ಸ್ನೇಹಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಮಧ್ಯೆ ಆಗಿದ್ದೇನು? ದರ್ಶನ್ ಟ್ವೀಟ್ ನಲ್ಲಿ ಹೇಳಿದ್ದೇನು? ಮುಂದೆ ಓದಿ....

ಕಿಚ್ಚನ ಗೆಳತನಕ್ಕೆ ಬ್ರೇಕ್ ಹಾಕಿದ ದರ್ಶನ್

ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ಸುದೀಪ್ ಮತ್ತು ದರ್ಶನ್ ಸ್ಯಾಂಡಲ್ ವುಡ್ ನ ದಿಗ್ಗಜರು ಎನಿಸಿಕೊಂಡಿದ್ದರು. ಆದ್ರೆ, ಇವರಿಬ್ಬರ ಈ ಸ್ನೇಹ ಈಗ ಮುರಿದು ಬಿದ್ದಿದೆ. ಇದನ್ನ ಸ್ವತಃ ನಟ ದರ್ಶನ್ ಟ್ವಿಟ್ಟರ್ ನಲ್ಲಿ ಸ್ವಷ್ಟಪಡಿಸಿದ್ದಾರೆ.[ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್]

''ನಾವಿಬ್ಬರೂ ಗೆಳಯರಲ್ಲ'' ಎಂದ ದಾಸ

ಕನ್ನಡ ಚಿತ್ರರಂಗಕ್ಕೆ ಒಟ್ಟಿಗೆ ಎಂಟ್ರಿ ಕೊಟ್ಟ ದರ್ಶನ್ ಮತ್ತು ಸುದೀಪ್, ಎಲ್ಲೇ ಹೋದ್ರು ಒಟ್ಟಾಗಿ ಹೋಗ್ತಾ ಇದ್ದಿದ್ದು, ಒಟ್ಟೊಟ್ಟಿಗೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಎಲ್ಲರು ಗಮನಿಸಿದ್ದಾರೆ. ಒಬ್ಬರನ್ನ ಬಿಟ್ಟು, ಮತ್ತೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅದ್ರೀಗ, ''ನಾನು ಸುದೀಪ್ ಗೆಳೆಯರಲ್ಲ, ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ'' ಎಂದು ದಾಸ ದರ್ಶನ್ ಮುಲಾಜಿಲ್ಲದೇ ಹೇಳಿಬಿಟ್ಟಿದ್ದಾರೆ.[ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

ದರ್ಶನ್ ಟ್ವೀಟ್ ನಲ್ಲಿ ಏನ್ ಹೇಳಿದ್ದಾರೆ!

''ನಾನು ಸುದೀಪ್ ಸ್ನೇಹಿತರಲ್ಲ, ನಾವು ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನಟರಷ್ಟೇ, ಇವತ್ತಿಗೆ ಎಲ್ಲವನ್ನು ಕೊನೆಗೊಳಿಸಿ. ಇನ್ನುಂದೆ ನಮ್ಮಿಬ್ಬರ ಮಧ್ಯೆ ಗೆಳೆತನವಿರಲ್ಲ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ'' ಎಂದು ಟ್ವಿಟ್ ಮಾಡಿದ್ದಾರೆ.[ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

ಸ್ನೇಹ ಅಂತ್ಯಗೊಳಿಸಲು ಕಾರಣ ಇದೇನಾ?

ಈ ಟ್ವೀಟ್ ಮಾಡುತ್ತಿದ್ದಂತೆ ಇಬ್ಬರ ಅಭಿಮಾನಿ ಬಳಗದಲ್ಲಿ ಆತಂಕ, ಬೇಜಾರು ಉಂಟಾಗಿದ್ದು ಮಾತ್ರ ಸುಳ್ಳಾಲ್ಲ. ಆದ್ರೆ, ದರ್ಶನ್ ಮತ್ತು ಸುದೀಪ್ ನಡುವೆ ಬಿರುಕಿಗೆ ನಿಜವಾದ ಕಾರಣವೇನು ಎಂಬುದು ಇಬ್ಬರ ಅಭಿಮಾನಿಗಳನ್ನ ಕಾಡುತ್ತಿತ್ತು. ನಂತರ ಸರಣಿ ಟ್ವೀಟ್ ಮುಂದುವರೆಸಿದ ದರ್ಶನ್ ಅವರು, ಈ ಮನಸ್ತಾಪಕ್ಕೆ ಕಾರಣವನ್ನು ಕೂಡ ತಿಳಿಸಿದರು.

ಇಬ್ಬರ ಸ್ನೇಹದಲ್ಲಿ ಬಿರುಕಾಗಲು 'ಮೆಜೆಸ್ಟಿಕ್' ಕಾರಣ

ಅಸಲಿಗೆ, ಸುದೀಪ್ ಅವರ ಮೇಲೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬೇಸರವಾಗಲು ಕಾರಣವಾಗಿರುವುದು ದರ್ಶನ್ ಅಭಿನಯದ ಮೊದಲ ಸಿನಿಮಾ 'ಮೆಜೆಸ್ಟಿಕ್'. ಹೌದು, ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸುದೀಪ್ ಅವರು ಕೊಟ್ಟಿದ್ದ ಹೇಳಿಕೆ ಈಗ ದರ್ಶನ್ ಅವರ ಬೇಸರಕ್ಕೆ ಕಾರಣವಾಗಿದೆ.[ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?]

ಸುದೀಪ್ ಕೊಟ್ಟಿದ್ದ ಆ ಹೇಳಿಕೆ ಏನು?

''ಮೆಜೆಸ್ಟಿಕ್ ಚಿತ್ರ ಮೊದಲು ನನಗೆ ಬಂದಿತ್ತು. ನಾನು ಆಗ ಬ್ಯುಸಿ ಇದ್ದೆ. ಹಾಗಾಗಿ, ದರ್ಶನ್ ಅವರ ಬಳಿ ಮಾಡಿಸಿ ಎಂದು ನಾನೇ ಹೇಳಿದ್ದೇ'' ಎಂದು ಸುದೀಪ್ ಟಿವಿ9 ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ಕಿಚ್ಚನ ಹೇಳಿಕೆ ಈಗ ವಿವಾದ ಹುಟ್ಟುಹಾಕಿದೆ

ಸುದೀಪ್ ಅವರ ಈ ಹೇಳಿಕೆಯನ್ನ ಖಂಡಿಸಿರುವ ದರ್ಶನ್, ಈ ಹೇಳಿಕೆಗೆ ಸುದೀಪ್ ಅವರು ಸ್ವಷ್ಟಿಕರಣ ನೀಡಲಿ, ಅದು ಹೇಗೆ ಅವರಿಂದ ನನಗೆ ಈ ಅವಕಾಶ ಸಿಕ್ತು ಎಂದು ತಿಳಿಸಲಿ ಎಂದು ಆಗ್ರಹಿಸಿದ್ದಾರೆ.

'ಮೆಜೆಸ್ಟಿಕ್' ಸಿಕ್ಕಿದ್ದು ಪಿ.ಎನ್.ಸತ್ಯ, ರಾಮಮೂರ್ತಿ ಅವರಿಂದ

ಮತ್ತೊಂದು ಟ್ವೀಟ್ ಮಾಡಿದ ದರ್ಶನ್ ''ನನಗೆ ಮೆಜೆಸ್ಟಿಕ್ ಸಿನಿಮಾ ಸಿಗಲು ಕಾರಣ ಪಿ.ಎನ್.ಸತ್ಯ ಮತ್ತು ನಿರ್ಮಾಫಕ ಎಂ.ಜೆ.ರಾಮಮೂರ್ತಿ, ಸುದೀಪ್ ಅವರಲ್ಲ'' ಎಂದು ಹೇಳಿದ್ದಾರೆ.

ಸುದೀಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!

ಇದುವರೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಸರಣಿ ಟ್ವೀಟ್ ಗಳ ಮೂಲಕ, ಸುದೀಪ್ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸುದೀಪ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಿಚ್ಚನ ಉತ್ತರದ ಮೇಲೆ ದರ್ಶನ್ ಮತ್ತು ಸುದೀಪ್ ಅವರ ಸ್ನೇಹದ ಬಾಂಧವ್ಯ ಏನಾಗುತ್ತೆ ಎಂಬುದು ನಿರ್ಧರವಾಗುವುದ್ರಲ್ಲಿ ಯಾವುದೇ ಅನುಮಾನವಿಲ್ಲ.

English summary
Rift between Darshan and Sudeep comes to limelight again. Challenging Star Darshan Thoogudeepa tweeted that he and Sudeep are not friends anymore. The actual reason behind the rift between Sudeep and Darshan has not been revealed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada