Just In
Don't Miss!
- News
"ಬಂಗಾಳದ ಹುಲಿ"ಗೆ ನಮ್ಮ ಬಲ, ಬೆಂಬಲ ಎಂದು ಘೋಷಿಸಿದ ಶಿವಸೇನೆ
- Sports
ಪಾಕಿಸ್ತಾನ ಸೂಪರ್ ಲೀಗ್ ಸೀಸನ್-6 ತಕ್ಷಣದಿಂದಲೇ ಮುಂದೂಡಿಕೆ
- Finance
ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ: ಸೇವೆಗಳಲ್ಲಿ ಆಗಲಿದ್ಯಾ ವ್ಯತ್ಯಯ?
- Automobiles
ಟಿಯಾಗೋ ಹ್ಯಾಚ್ಬ್ಯಾಕ್ ಕಾರಿನಲ್ಲಿ ಎಕ್ಸ್ಟಿಎ ಎಎಟಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Lifestyle
ನಿಮ್ಮ ಕೂದಲಿನ ಸಮಸ್ಯೆಗೆ ತುಪ್ಪ ಮಾಡಲಿದೆ ಮ್ಯಾಜಿಕ್!
- Education
NITK Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಶತಸೋದರಾಗ್ರಜಾ ಶರವೀರ' ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಬಿರುದುಗಳು ಅಪಾರ. ದರ್ಶನ್ ಸರಳತೆ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಸಾಕಷ್ಟು ಹೆಸರಿನಿಂದ ಅವರನ್ನ ಕರೆಯುತ್ತಾರೆ. ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ಹೀಗೆ ಹತ್ತು ಹಲವಾರು ರೀತಿಯಲ್ಲಿ ಕರೆದು ದರ್ಶನ್ ಅವರ ಕೀರ್ತಿಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ ಅಭಿಮಾನಿಗಳು.
ಇಷ್ಟು ಹೆಸರಿನ ಜೊತೆಗೆ ಡಿ ಬಾಸ್ ಅವರ ಮುಡಿಗೆ ಮತ್ತೊಂದು ಬಿರುದು ಸೇರಿಕೊಂಡಿದೆ. ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ ನಾಗೇಂದ್ರ ಪ್ರಸಾದ್ ಅವರು ಹೊಸ ಹೆಸರನ್ನ ನೀಡಿದ್ದಾರೆ.
ಅಷ್ಟಕ್ಕೂ ದರ್ಶನ್ ಅವರಿಗೆ ಹೊಸ ಬಿರುದು ನೀಡಿರುವ ಉದ್ದೇಶವೇನು? ಆ ಬಿರುದು ಯಾವುದು? ದರ್ಶನ್ ಹಾಗೂ ನಾಗೇಂದ್ರ ಪ್ರಸಾದ್ ಭೇಟಿ ಆಗಿದ್ದು ಯಾವಾಗ? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ

ದರ್ಶನ್ ಈಗ ಶತಸೋದರಾಗ್ರಜಾ ಶರವೀರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನು ಮುಂದೆ ಶತಸೋದರಾಗ್ರಜಾ ಶರವೀರ ಆಗಲಿದ್ದಾರೆ. ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ನಟ ವಿ ನಾಗೇಂದ್ರ ಪ್ರಸಾದ್ ಈ ಹೆಸರನ್ನ ಡಿ ಬಾಸ್ ಅವರಿಗೆ ನೀಡಿದ್ದಾರೆ.

ಶತಸೋದರಾಗ್ರಜಾ ಶರವೀರ ಅರ್ಥ
ಶತಸೋದರಾಗ್ರಜಾ ಎಂದರೆ ನೂರಾರು ಜನರ ಸಹೋದರ ಎಂದು ಅರ್ಥ ಕೊಡುತ್ತದೆ. ದರ್ಶನ್ ತಮ್ಮ ಸುತ್ತಾ ಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಇದೇ ಉದ್ದೇಶದಿಂದ ಈ ಮಾತನ್ನ ಹೇಳಿದ್ದಾರೆ.

ಕನ್ನಡದ ಶರವೀರವಾದ ದರ್ಶನ್
ಶತಸೋದರಾಗ್ರಜಾ ಎಂದು ಹೇಳುವುದರ ಜೊತೆಯಲ್ಲಿ ಶರವೀರ ಎಂದು ಸಂಭೋದಿಸಿದ್ದಾರೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿದ್ದಾನೆ ಎಂದಿದ್ದಾರೆ.

ಗೂಗಲ್ ಹಾಡನ್ನ ಮೆಚ್ಚಿದ ಡಿ ಬಾಸ್
ವಿ ನಾಗೇಂದ್ರ ಪ್ರಸಾದ್ ಅಭಿನಯಿಸಿ ನಿರ್ದೇಶನ ಮಾಡಿರುವ ಗೂಗಲ್ ಸಿನಿಮಾದ ಹಾಡುಗಳನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಣೆ ಮಾಡಿದ್ದಾರೆ. ಹಾಡುಗಳನ್ನ ಮೆಚ್ಚಿಕೊಂಡು ಸಿನಿಮಾತಂಡಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪ್ರಚಾರ ಪ್ರಾರಂಭ ಮಾಡಿರುವ ಗೂಗಲ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.