For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನೋಡಲು 'ಯಜಮಾನ' ಸೆಟ್ ಗೆ ಬಂದ ಪತ್ನಿ

  By Naveen
  |

  ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಇಬ್ಬರ ಮಧ್ಯೆ ಮನಸ್ತಾಪ ಮೂಡಿ ಇದಿದ್ದು ಎಲ್ಲರಿಗೂ ತಿಳಿದಿದೆ. ಕೆಲ ಗಲಾಟೆಗಳ ನಂತರ ಗಂಡ ಹೆಂಡತಿ ಇಬ್ಬರ ಮನಸ್ಸುಗಳು ದೂರ ಆಗಿತ್ತು. ಇಬ್ಬರು ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

  ದರ್ಶನ್ ಪತ್ನಿಯನ್ನ ನಿಂದಿಸಿದ ಅನಾಮಧೇಯ ವ್ಯಕ್ತಿ: ದೂರು ದಾಖಲು ದರ್ಶನ್ ಪತ್ನಿಯನ್ನ ನಿಂದಿಸಿದ ಅನಾಮಧೇಯ ವ್ಯಕ್ತಿ: ದೂರು ದಾಖಲು

  ಆದರೆ, ಈಗ ಈ ತಾರ ಜೋಡಿ ಮತ್ತೆ ಒಂದಾಗಿದ್ದಾರೆ. ಇದೀಗ ದರ್ಶನ್ ರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ದರ್ಶನ್ ಸದ್ಯ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು, ಪತಿಯನ್ನು ನೋಡಲು ವಿಜಯಲಕ್ಷ್ಮಿ ಶೂಟಿಂಗ್ ಸೆಟ್ ಗೆ ಬಂದಿದ್ದಾರೆ.

  'ಡಿ-ಬಾಸ್' ದರ್ಶನ್ ದಂಪತಿಗಿಂದು ಖುಷಿಯ ವಿಚಾರ 'ಡಿ-ಬಾಸ್' ದರ್ಶನ್ ದಂಪತಿಗಿಂದು ಖುಷಿಯ ವಿಚಾರ

  ದರ್ಶನ್ ಮತ್ತು ವಿಜಯಲಕ್ಷ್ಮಿ ಭೇಟಿಯ ಕ್ಷಣವನ್ನು ಸಿನಿಮಾ ಶೂಟಿಂಗ್ ನಲ್ಲಿ ಇದ್ದವರು ಸೆರೆ ಹಿಡಿದಿದ್ದಾರೆ. ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ದರ್ಶನ್ ಹಾಗೂ ವಿಜಯಲಕ್ಷ್ಮಿ ಒಂದಾಗಿ ಕೆಲ ತಿಂಗಳುಗಳು ಕಳೆದಿತ್ತು. ಆಪ್ತರಿಗೆ ಮಾತ್ರ ಈ ವಿಷಯ ತಿಳಿದಿತ್ತು. ಆದರೆ, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದರ್ಶನ್ ಮತ್ತು ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದು, ದರ್ಶನ್ ಕುಟುಂಬದ ಮತ್ತೆ ಒಂದಾಗಿದೆ ಎಂಬ ವಿಷಯ ಈ ಮೂಲಕ ಎಲ್ಲರಿಗೆ ತಲುಪಿಸಿದೆ.

  English summary
  Kannada actor Darshan's wife Vijayalakshmi visits 'Yajamana' movie set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X