Don't Miss!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ದರ್ಶನ್ ಹುಟ್ಟುಹಬ್ಬಕ್ಕೆ ಕ್ರಾಂತಿ ಫಸ್ಟ್ ಲುಕ್ ಪಕ್ಕಾ!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಫೆಬ್ರವರಿ 16ಕ್ಕೆ ದರ್ಶನ್ ಅವರ ಹುಟ್ಟುಹಬ್ಬ. ದರ್ಶನ್ ಹುಟ್ಟುಹಬ್ಬ ಅವರ ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಆದರೆ ಈ ಬಾರಿ ದರ್ಶನ್ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಾ ಇಲ್ಲ.
ಆದರೂ ಅಭಿಮಾನಿಗಳು ದಾಸನ ಹುಟ್ಟುಹಬ್ಬವನ್ನು ತಮ್ಮದೇ ಶೈಲಿಯಲ್ಲಿ ಆಚರಣೆ ಮಾಡುತ್ತಾರೆ. ಇನ್ನೂ ದರ್ಶನ್ ಹುಟ್ಟುಹಬ್ಬಕ್ಕೆ ಅವರ ಸಿನಿಮಾದ ಬಗ್ಗೆ ಸಾಕಷ್ಟು ಅಪ್ಟೇಟ್‌ಗಳು ಕೂಡ ಇರುತ್ತವೆ. ಅಂತೆಯೇ ಈ ಬಾರಿಗೂ ದರ್ಶನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಒಂದಷ್ಟು ಹೊಸ ಮಾಹಿತಿ ಹೊರಬೀಳಲಿದೆ.
ನಟ
ದರ್ಶನ್
ಹುಟ್ಟುಹಬ್ಬದ
ವಿಶೇಷ:
ದಾಖಲೆ
ಬರೆದ
CDP!
ಅದರಲ್ಲಿ
ಕ್ರಾಂತಿ
ಸಿನಿಮಾದ
ಅಪ್ಡೇಟ್
ಕೂಡ
ಅತಿ
ಮುಖ್ಯ.
ಕ್ರಾಂತಿ
ಸಿನಿಮಾ
ಅಪ್ಡೇಟ್
ಬರುತ್ತೆ
ಅಂತ
ಹೇಳಲಾಗಿತ್ತು.
ವಿಡಿಯೋ
ಮೂಲಕ
ನಟ
ದರ್ಶನ್
ಅವರೇ
ಈ
ಬಗ್ಗೆ
ಹೇಳಿಕೊಂಡಿದ್ದರು.
ಆದರೆ
ಆ
ಅಪ್ಡೇಟ್
ಏನು
ಎನ್ನುವ
ಬಗ್ಗೆ
ಈಗ
ಸ್ಪಷ್ಟ
ಆಗಿದೆ.
ಚಿತ್ರ
ತಂಡ
ಈ
ಬಗ್ಗೆ
ಪೋಸ್ಟರ್
ಒಂದನ್ನು
ರಿಲೀಸ್
ಮಾಡಿದೆ.
'ಮೆಜೆಸ್ಟಿಕ್'
ಸಿನಿಮಾ
ಸಿಕ್ಕಿದ್ದು
ಯಾರಿಂದ?
ಗೊಂದಲಗಳಿಗೆ
ತೆರೆ
ಎಳೆದ
ದರ್ಶನ್
— V Harikrishna (harimonium) February 15, 2022 |
ಕ್ರಾಂತಿ ಫಸ್ಟ್ ಲುಕ್ ರಿಲೀಸ್ ದಿನಾಂಕ 16/2/2022!
ಕ್ರಾಂತಿ ಸಿನಿಮಾ ಸೆಟ್ಟೇರಿದಾಗ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿತ್ತು. ಅಲ್ಲಿ ದರ್ಶನ್ ಅವರ ಭಾವ ಚಿತ್ರದ ಮೇಲೆ ಅಕ್ಷರ ಮಾಲೆ ಇತ್ತು. ಈ ಪೋಸ್ಟರ್ ವಿಭೀನ್ನವಾಗಿ ಗಮನ ಸೆಳೆದಿತ್ತು. ಅದರೆ ಅದು ಚಿತ್ರದಲ್ಲಿನ ದರ್ಶನ್ ಅವರ ಲುಕ್ ಆಗಿರಲಿಲ್ಲ. ಈಗ ಕ್ರಾಂತಿ ಸಿನಿಮಾದಲ್ಲಿ ನಟ ದರ್ಸನ್ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಲುಕ್ ರಿವೀಲ್ ಆಗಲಿದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಹಾಗಾಗಿ ಅಭಿಮಾನಿ ಬಳಗದಲ್ಲಿ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.
|
ಪೋಸ್ಟರ್ ಹಂಚಿಕೊಂಡ ನಿರ್ದೇಶಕ ಹರಿಕೃಷ್ಣ!
ನಾಳೆ (16/2/2022) ನಟ ದರ್ಶನ್ ಅವರ ಹುಟ್ಟುಹಬ್ಬ ಹಾಗಾಗಿ ಕ್ರಾಂತಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಅಗುತ್ತಿದೆ. ಈ ಬಗ್ಗೆ ನಿರ್ದೇಶಕ ಹರಿಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್ ಹಂಚಿಕೊಂಡ ಅವರು, ನಮಸ್ಕಾರದ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ. ಇನ್ನು ಇದೇ ಪೋಸ್ಟನ್ನು ನಿರ್ಮಾಪಕಿ ಶೈಲಜಾ ನಾಗ್ ಅವರು ಕೂಡ ಹಂಚಿಕೊಂಡಿದ್ದಾರೆ. "ಮೀಡಿಯಾ ಹೌಸ್‌ನ 10ನೆ ಸಿನಿಮಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಫಸ್ಟ್ ಲುಕ್ 16.2.2022 ರಂದು ಬೆಳಗ್ಗೆ 10 ಗಂಟೆಗೆ ಡಿ ಬೀಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಲಿದೆ." ಎಂದು ಬರೆದುಕೊಂಡಿದ್ದಾರೆ.

ಬರ್ತ್ ಡೆ ಡಿಪಿ ಮೂಲಕ ದರ್ಶನ್ ದಾಖಲೆ!
ಹುಟ್ಟುಹಬ್ಬಕ್ಕೆ ನಾಲ್ಕು ದಿನ ಮೊದಲೇ ಕಾಮನ್ ಡಿಪಿ ರಿಲೀಸ್ ಆಗಿದೆ. ಮೊದಲ ಎರಡು ದಿನ ಈ ಡಿಪಿ ಟ್ಟಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ದರ್ಶನ್ ಅಭಿಮಾನಿಗಳು ಡಿಪಿಯನ್ನು ಪೋಸ್ಟ್ ಮಾಡುತ್ತಾ, ಟ್ರೆಂಡ್ ಹುಟ್ಟು ಹಾಕಿದ್ದರು. ಎರಡು ದಿನಗಳ ಬಳಿಕ ಒಟ್ಟಾರೆ ಅಂಕಿ ಅಂಶ ನೋಡಿದರೆ. ದರ್ಶನ್ ಅವರ ಈ ಬಾರಿಯ ಕಾಮನ್ ಡಿಪಿ, 4 ಮಿಲಿಯನ್ ಟ್ವೀಟ್ ಗಡಿ ಮುಟ್ಟಿದೆ. ಒಂದು ಮೂಲದ ಪ್ರಕಾರ ಈ ಮಟ್ಟಿನ ದಾಖಲೆ ಮಾಡಿದ ಮೊದಲ ಹುಟ್ಟುಹಬ್ಬದ ಕಾಮನ್ ಡಿಪಿ ಇದಾಗಿದೆ. ಈ ಮೂಲಕ ದರ್ಶನ್ ಅಭಿಮಾನಿ ಬಳಗ ದಾಸನ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ಕೊಟ್ಟಿದೆ.
|
ಅದ್ದೂರಿ ಆಚರಣೆಗೆ ದರ್ಶನ್ ಬ್ರೇಕ್!
ಸದ್ಯ ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗಿದೆ. ಹಾಗಾಗಿ ಈ ಬಾರಿಯೂ ದರ್ಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ, ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಅನುಮಾನ. ಪ್ರತೀ ಬಾರಿಯಂತೆ ಬೇರೆ, ಬೇರೆ ಊರುಗಳಿಂದ ಜನ ದರ್ಶನ್ ಅವರ ಮನೆ ಮುಂದೆ ಸೇರುವಂತೆ ಇಲ್ಲ. ಅದರಲ್ಲೂ ಸಂಪೂರ್ಣ ಲಾಕ್ ಡೌನ್ ಆದರೆ, ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕವೇ ದರ್ಶನ್ ಅವರಿಗೆ ಶುಭಾಷಯ ತಿಳಿಸ ಬೇಕಾಗುತ್ತದೆ.