For Quick Alerts
  ALLOW NOTIFICATIONS  
  For Daily Alerts

  ರೈತರು ನಿಜವಾದ ವೀರರು..ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ; ನಟ ದರ್ಶನ್

  |

  ಇಂದು (ಡಿಸೆಂಬರ್ 23) ರಾಷ್ಟ್ರೀಯ ರೈತ ದಿನಾಚರಣೆ. ದೇಶಾದ್ಯಂತ ಜನರು ಅನ್ನದಾತರನ್ನು ನೆನೆದು ಶುಭಾಶಯ ಕೋರುತ್ತಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಒಂದು ದಿನ ಮೀಸಲಿಟ್ಟು ಅವರ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಇಡೀ ವಿಶ್ವಕ್ಕೆ ಅನ್ನ ಕೊಡುವವರನ್ನು ನೆನಪಿಸಿಕೊಂಡು ಧನ್ಯವಾದ ತಿಳಿಸುತ್ತಿದ್ದಾರೆ.

  ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಸಹ ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಮೂರು ಹೊತ್ತು ಹೊಟ್ಟೆ ತುಂಬಿಸುವ ಅನ್ನ ದಾತರಿಗೆ ಇಂದು ಶುಭಾಶಯ ಕೋರುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ ಸಹ ಶುಭ ಕೋರಿ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಎಂದಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ರೈತರಿಗೆ ಶುಭಕೋರಿದ್ದಾರೆ. ರೈತರು ನಿಜವಾದ ವೀರರು ಎಂದು ಹೇಳಿದ್ದಾರೆ.

  ರಾಬರ್ಟ್ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ತರುಣ್: ವಿಳಂಬ ಮಾಡ್ತಿರೋದಕ್ಕೆ ಕಾರಣವೇನು?ರಾಬರ್ಟ್ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ತರುಣ್: ವಿಳಂಬ ಮಾಡ್ತಿರೋದಕ್ಕೆ ಕಾರಣವೇನು?

  'ರೈತರು ನಿಜವಾದ ವೀರರಾಗಿದ್ದಾರೆ ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ. ರೈತ ದಿನಾಚರಣೆಯ ಶುಭಾಶಯಗಳು' ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

  ಇನ್ನು ನಟ ಜಗ್ಗೇಶ್ ವಿಶ್ ಮಾಡಿ, 'ತಾತಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲ ಮೇಲೆ ಬೆಳೆದ ರೈತರ ಕುಡಿ ನಾನು. 100%ಗೆ 50%ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣ ಜೀವನಕ್ಕೆ ಹೋಗಿಬಿಟ್ಟರು. ಬಣಗುಡುತ್ತಿದೆ ಹೊಲಗದ್ದೆ. ಖಾಲಿಕೊಟ್ಟಿಗೆ. ಒಣಗಿದೆ ಗೊಬ್ಬರದಗುಂಡಿ. ಓ ಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಮರಳಿ ಮಣ್ಣಿಗೆ. ಕೊಂಡು ತಿನ್ನುವುದಕ್ಕಿಂತ ಬೆಳೆದು ತಿನ್ನುವ. ಜೈಕಿಸಾನ್.' ಎಂದಿದ್ದಾರೆ.

  December 31 Rajinikanth ಜೀವನದಲ್ಲಿ ಮಹತ್ವದ ದಿನ | Filmibeat Kannada

  ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ದರ್ಶನ್ ಇನ್ನು ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಸ್ನೇಹಿತರ ಜೊತೆ ಕಾಲ ಕಳೆಯುತ್ತಾ ಬೈಕ್ ರೈಡ್, ಪ್ರವಾಸ ಅಂತ ಎಂಜಾಯ್ ಮಾಡುತ್ತಿದ್ದಾರೆ.

  English summary
  Kannada Actor Darshan Wishes to Farmers on National Farmers Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X